ಕಾರಿಗೆ ಡಿಕ್ಕಿ ಹೊಡೆದು ಬಳಿಕ 3 ಕಿಮೀ ಎಳೆದೊಯ್ದ ಪಾನಮತ್ತ ಕಂಟೈನರ್ ಚಾಲಕ, ಪ್ರಯಾಣಿಕರು ಸುರಕ್ಷಿತ

ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಮೀರತ್‌ನಲ್ಲಿ 22 ಚಕ್ರಗಳ ಕಂಟೈನರ್ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ ಮತ್ತು ನಂತರ ಅದನ್ನು ಸುಮಾರು 3 ಕಿಲೋಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಕಾರನ್ನು 3 ಕಿಮೀ ದೂರ ಎಳೆದೊಯ್ದ ಪಾನಮತ್ತ ಟ್ರಕ್ ಚಾಲಕ
ಕಾರನ್ನು 3 ಕಿಮೀ ದೂರ ಎಳೆದೊಯ್ದ ಪಾನಮತ್ತ ಟ್ರಕ್ ಚಾಲಕ

ಮೀರತ್: ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಮೀರತ್‌ನಲ್ಲಿ 22 ಚಕ್ರಗಳ ಕಂಟೈನರ್ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ ಮತ್ತು ನಂತರ ಅದನ್ನು ಸುಮಾರು 3 ಕಿಲೋಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಟ್ರಕ್‌ನಿಂದ ಕಾರನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಸಕಾಲದಲ್ಲಿ ಹೊರಗೆ ಹಾರಿದ್ದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಕಾರನ್ನು ಸುಮಾರು 3 ಕಿಲೋಮೀಟರ್ ದೂರವರೆಗೂ ಎಳೆದುಕೊಂಡು ಹೋಗಿದೆ. ಈ ವೇಳೆ ಅವರು ಟ್ರಕ್ ಡ್ರೈವರ್‌ಗೆ ಕೂಗಿದರು, ನಿಲ್ಲಿಸುವಂತೆ ಕೇಳಿದರು. ಆದರೂ, ಭಾರಿ ವಾಹನವು ಚಲಿಸುತ್ತಲೇ ಇತ್ತು ಮತ್ತು ಪೊಲೀಸರು ಚೇಸ್ ಮಾಡಿ ತಡೆದ ನಂತರ ಮಾತ್ರ ನಿಂತಿತು ಎಂದು ತಿಳಿಸಿದರು.

ಪಾನಮತ್ತನಾಗಿದ್ದ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರಿನಲ್ಲಿದ್ದವರು ಮತ್ತು ಟ್ರಕ್ ಚಾಲಕನ ನಡುವಿನ ವಾಗ್ವಾದದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದಕ್ಕೂ ಒಂದು ದಿನದ ಹಿಂದೆ, ಮೀರತ್‌ನಲ್ಲಿ ಐದು ಜನರನ್ನು ಹೊತ್ತೊಯ್ಯುತ್ತಿದ್ದ ಮದುವೆಗಳಲ್ಲಿ ಬಳಸುವ ಕುದುರೆ ಚಾಲಿತ ಬಂಡಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರು ಸಹೋದರರು ಸೇರಿದಂತೆ ಮೂವರು ಮೃತಪಟ್ಟಿದ್ದು, ಉಳಿದ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಚಾಲಕ ಪರಾರಿಯಾಗಿದ್ದಾನೆ.

ಇದೀಗ ಮೀರತ್ ಟ್ರಕ್ ಹಿಟ್ ಅಂಡ್ ಡ್ರ್ಯಾಗ್ ಮತ್ತೊಮ್ಮೆ ಗಮನ ಸೆಳೆದಿದೆ ಮತ್ತು ವಾರ್ಷಿಕವಾಗಿ ಸುಮಾರು 2 ಲಕ್ಷ ಅಪಘಾತ ಸಾವುಗಳನ್ನು ವರದಿ ಮಾಡುವ ಈ ದೇಶದಲ್ಲಿ ಸಂಚಾರ ನಿಯಮಗಳ ಜಾರಿ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com