ಗವರ್ನರ್ vs ಸ್ಟಾಲಿನ್: ಚೆನ್ನೈ ತುಂಬೆಲ್ಲಾ ಗೆಟ್ ಔಟ್ ರವಿ ಬ್ಯಾನರ್ ಗಳು!

ತಮಿಳುನಾಡಿಗಿಂತ 'ತಮಿಜಾಗಂ' ರಾಜ್ಯಕ್ಕೆ ಸೂಕ್ತ ಹೆಸರು ಎಂಬ ರಾಜ್ಯಪಾಲ ಆರ್ ಎನ್ ರವಿ ಅವರ ಹೇಳಿಕೆ ವಿವಾದದ ನಡುವೆ ಪಶ್ಚಿಮ ಚೆನ್ನೈನ ವಳ್ಳುವರ್ ಕೊಟ್ಟಂ ಮತ್ತು ಅಣ್ಣಾ ಸಲೈನಾದ್ಯಂತ ಗೆಟ್ ಔಟ್ ರವಿ ಫೋಸ್ಟರ್ ಗಳು ರಾರಾಜಿಸುತ್ತಿವೆ. ಕಳೆದ ಕೆಲವು ದಿನಗಳಿಂದ # ಗೆಟ್ ಔಟ್ ರವಿ ಟ್ವಿಟರ್ ನಲ್ಲಿ ಟಾಪ್ ಟ್ರೆಂಡ್ ನಲ್ಲಿದೆ. 
ಗೇಟ್ ಔಟ್ ರವಿ ಫೋಸ್ಟರ್
ಗೇಟ್ ಔಟ್ ರವಿ ಫೋಸ್ಟರ್

ಚೆನ್ನೈ: ತಮಿಳುನಾಡಿಗಿಂತ 'ತಮಿಜಾಗಂ' ರಾಜ್ಯಕ್ಕೆ ಸೂಕ್ತ ಹೆಸರು ಎಂಬ ರಾಜ್ಯಪಾಲ ಆರ್ ಎನ್ ರವಿ ಅವರ ಹೇಳಿಕೆ ವಿವಾದದ ನಡುವೆ ಪಶ್ಚಿಮ ಚೆನ್ನೈನ ವಳ್ಳುವರ್ ಕೊಟ್ಟಂ ಮತ್ತು ಅಣ್ಣಾ ಸಲೈನಾದ್ಯಂತ ಗೆಟ್ ಔಟ್ ರವಿ ಫೋಸ್ಟರ್ ಗಳು ರಾರಾಜಿಸುತ್ತಿವೆ. ಕಳೆದ ಕೆಲವು ದಿನಗಳಿಂದ # ಗೆಟ್ ಔಟ್ ರವಿ ಟ್ವಿಟರ್ ನಲ್ಲಿ ಟಾಪ್ ಟ್ರೆಂಡ್ ನಲ್ಲಿದೆ. 

ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಇದೇ ವಿಚಾರ ಸಂಬಂಧ ಗದ್ದಲ, ಕೋಲಾಹಲ ನಡೆದು ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು ರಾಜ್ಯಪಾಲರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಗವರ್ನರ್ ಸದನದಿಂದ ಹೊರಗೆ ನಡೆದರು, ಬಿಜೆಪಿ, ಆರ್ ಎಸ್ ಎಸ್ ಸಿದ್ಧಾಂತಗಳನ್ನು ಹೇರಬೇಡಿ ಎಂದು ಡಿಎಂಕೆ ಸದಸ್ಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರು ಬಿಜೆಪಿ ಸಿದ್ಧಾಂತಗಳನ್ನು ಹೇರಲು ಪ್ರಯತ್ನಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ, ರಾಜ್ಯಪಾಲರ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಆಡಳಿತಾರೂಢ ಡಿಎಂಕೆ ಮತ್ತು ರಾಜ ಭವನ ನಡುವಿನ ಭಿನ್ನಾಪ್ರಾಯದಿಂದಾಗಿ ಆನ್ ಲೈನ್ ಜೂಜಾಟ ನಿಷೇಧದ ಮಸೂದೆ ಸೇರಿದಂತೆ ಅನೇಕ ಬಿಲ್ ಗಳಿಗೆ ರಾಜ್ಯಪಾಲರ ಅಂಕಿತದ ಬಾಕಿಯಿದೆ. ಡಿಸೆಂಬರ್ 2022 ರಲ್ಲಿ ಅಸೆಂಬ್ಲಿಯಲ್ಲಿ ಅನುಮೋದನೆಗೊಂಡ ಒಟ್ಟಾರೇ 21 ಬಿಲ್ ಗಳಿಗೆ ರಾಜ್ಯಪಾಲರು ಅಂಕಿತವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com