ಮದುವೆಗೆ ಕೆಲವೇ ಗಂಟೆಗಳ ಮೊದಲು ವಧುವಿನ ಮೇಲೆ ಗುಂಡು ಹಾರಿಸಿದ ಪೊಲೀಸ್ ಪೇದೆ!

ಮದುವೆಗೂ ಕೆಲವೇ ಗಂಟೆಗಳ ಮುನ್ನ 26 ವರ್ಷದ ಮಹಿಳೆಯೊಬ್ಬಳ ಮೇಲೆ ಮುಂಗೇರ್‌ನಲ್ಲಿ ಬಿಹಾರ ಪೊಲೀಸ್ ಪೇದೆಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಮದುವೆಗೂ ಕೆಲವೇ ಗಂಟೆಗಳ ಮುನ್ನ 26 ವರ್ಷದ ಮಹಿಳೆಯೊಬ್ಬಳ ಮೇಲೆ ಮುಂಗೇರ್‌ನಲ್ಲಿ ಬಿಹಾರ ಪೊಲೀಸ್ ಪೇದೆಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಭಾನುವಾರ ರಾತ್ರಿ ಸಂತ್ರಸ್ತೆ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಯಾ ಬಜಾರ್‌ನಲ್ಲಿ ಮೇಕಪ್ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಆರೋಪಿ ಕಾನ್‌ಸ್ಟೆಬಲ್ ಅಮನ್ ಕುಮಾರ್ ಕೂಡ ಅಲ್ಲಿಗೆ ಬಂದು ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಹಿಂದಿನಿಂದ ಎಡ ಭುಜಕ್ಕೆ ತಗುಲಿ ಎದೆಯ ಬಲಭಾಗದಿಂದ ಹೊರಬಂದಿದೆ. ಆರೋಪಿ ಕೂಡ ತನಗೆ ತಾನೇ ಗುಂಡು ಹಾರಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ.

ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಆತನನ್ನು ಹಿಡಿಯಲು ಯತ್ನಿಸಿದರಾದರೂ ವಿಫಲರಾದರು. ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

'ಬಿಹಾರ ಪೊಲೀಸ್ ಪೇದೆ ಮತ್ತು ಪಾಟ್ನಾದಲ್ಲಿ ನಿಯೋಜನೆಗೊಂಡಿರುವ ಅಮನ್ ಕುಮಾರ್ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಪ್ರಾಥಮಿಕ ತನಿಖೆಯಿಂದ ಅವರು ಸಂತ್ರಸ್ತೆಯ ಮಾಜಿ ಪ್ರೇಮಿಯಾಗಿದ್ದರು, ಆಕೆಯ ಮದುವೆಯಿಂದ ಕೋಪಗೊಂಡಿದ್ದರು' ಎಂದು ಕೊತ್ವಾಲಿ ಪೊಲೀಸ್ ಠಾಣೆ ಮುಂಗೇರ್ ಎಸ್‌ಎಚ್‌ಒ ಧೀರೇಂದ್ರ ಕುಮಾರ್ ಪರ್ಡೆ ಹೇಳಿದ್ದಾರೆ.

ಆರೋಪಿಗಳನ್ನು ಬಂಧಿಸಲು ತಂಡವನ್ನು ರಚಿಸಿದ್ದೇವೆ ಎಂದು ಪಾಂಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com