ಲೋಕಸಭೆಗೂ ಮುನ್ನ ಕಾಂಗ್ರೆಸ್ ಗೆ ದೊಡ್ಡ ಹೊಡೆತ: ಗುಜರಾತ್ ಶಾಸಕ ಸಿಜೆ ಚಾವ್ಡಾ ರಾಜೀನಾಮೆ; ಪಕ್ಷದ ಬಲ 15ಕ್ಕೆ ಇಳಿಕೆ!

ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕ ಸಿ.ಜೆ ಚಾವ್ಡಾ ಅವರು ಇಂದು ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸದನದಲ್ಲಿ ವಿರೋಧ ಪಕ್ಷದ ಬಲ 15ಕ್ಕೆ ಇಳಿದಿದೆ.
ಸಿಜೆ ಚಾವ್ಡಾ
ಸಿಜೆ ಚಾವ್ಡಾ
Updated on

ಅಹಮದಾಬಾದ್: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕ ಸಿ.ಜೆ ಚಾವ್ಡಾ ಅವರು ಇಂದು ವಿಧಾನಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಸದನದಲ್ಲಿ ವಿರೋಧ ಪಕ್ಷದ ಬಲ 15ಕ್ಕೆ ಇಳಿದಿದೆ.

2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೆಹ್ಸಾನಾ ಜಿಲ್ಲೆಯ ವಿಜಾಪುರದಿಂದ ಚಾವ್ಡಾ ಗೆದ್ದು ಬಂದಿದ್ದರು. ಆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಗೆಲುವು ಸಾಧಿಸಿತ್ತು.

ಮೂರು ಬಾರಿ ಶಾಸಕರಾಗಿರುವ ಅವರು ಬೆಳಗ್ಗೆ ಗಾಂಧಿನಗರದಲ್ಲಿ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರಾಜ್ಯ ವಿಧಾನಸಭೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಾವ್ಡಾ ಅವರು 2002ರಲ್ಲಿ ಗಾಂಧಿನಗರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಅವರು 2012 ರಲ್ಲಿ ಗಾಂಧಿನಗರ ಉತ್ತರ ಕ್ಷೇತ್ರದಿಂದ ಆಯ್ಕೆಯಾದರು. 2022ರವರೆಗೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು.

2022ರಲ್ಲಿ ರಾಜ್ಯದ 182 ಸದಸ್ಯರ ವಿಧಾನಸಭೆಗೆ ಚುನಾಯಿತರಾದ 17 ಕಾಂಗ್ರೆಸ್ ಶಾಸಕರಲ್ಲಿ ಚಾವ್ಡಾ ಸಹ ಒಬ್ಬರಾಗಿದ್ದರು. ಇದಕ್ಕೂ ಮುನ್ನ ಆನಂದ್ ಜಿಲ್ಲೆಯ ಖಂಭತ್‌ನ ಕಾಂಗ್ರೆಸ್ ಶಾಸಕ ಚಿರಾಗ್ ಪಟೇಲ್ ಕೂಡ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಈ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಸದನದಲ್ಲಿ ಪಕ್ಷದ ಸಂಖ್ಯಾಬಲ 15ಕ್ಕೆ ಇಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com