ದೆಹಲಿ ಕಲ್ಕಾ ಮಂದಿರದಲ್ಲಿ ಕುಸಿದು ಬಿದ್ದ ವೇದಿಕೆ; ಓರ್ವ ಸಾವು, 17 ಮಂದಿಗೆ ಗಾಯ

ರಾಷ್ಟ್ರ ರಾಜಧಾನಿ ನವದೆಹಲಿಯ ಕಲ್ಕಾ ಮಂದಿರದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿದುಬಿದ್ದಿದ್ದು, ಪರಿಣಾಮ ಓರ್ವ ಸಾವನ್ನಪ್ಪಿ 17 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಕುಸಿದು ಬಿದ್ದ ವೇದಿಕೆ.
ಕುಸಿದು ಬಿದ್ದ ವೇದಿಕೆ.
Updated on: 

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕಲ್ಕಾ ಮಂದಿರದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿದುಬಿದ್ದಿದ್ದು, ಪರಿಣಾಮ ಓರ್ವ ಸಾವನ್ನಪ್ಪಿ 17 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ರಾತ್ರಿ 12.30 ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ, ಜಾಗರಣೆಯಲ್ಲಿ ಖ್ಯಾತ ಗಾಯಕರು ಆಗಮಿಸಿದ್ದ ಕಾರಣ ಹೆಚ್ಚಿನ ಸಂಖ್ಯೆಯದಲ್ಲಿ ಜನರು ಸೇರಿದ್ದರು, ಗಾಯಕರನ್ನು ಭೇಟಿಯಾಗಬೇಕೆಂದು ವೇದಿಕೆಗೆ ಬರಲು ಪ್ರಯತ್ನಿಸುತ್ತಿದ್ದರು, ಈ ವೇಳೆ ನೂಕುನುಗ್ಗಲು ಉಂಟಾಗಿದೆ.

ಈ ಸಂದರ್ಭದಲ್ಲಿ ವೇದಿಕೆ ಕೂಡ ಕುಸಿದುಬಿದ್ದಿದ್ದು, ಕಾಲ್ತುಳಿತ ಉಂಟಾಗಿದೆ. ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದು, ಪೊಲೀಸರು ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com