INDI ಕೂಟಕ್ಕಾಗಿ ನಿತೀಶ್ ಕುಮಾರ್ ರ ಹಿಂದಿ ಹೇರುವಿಕೆ ಸಹಿಸಿಕೊಂಡಿದ್ದೆವು: ಡಿಎಂಕೆ

ಮೈತ್ರಿ ಸಭೆಯಲ್ಲಿ ಹಿಂದಿ ಮಾತ್ರ ಮಾತನಾಡುವಂತೆ ನಿತೀಶ್ ಕುಮಾರೇ ಹೇಳಿದ್ದರು. INDI ಕೂಟಕ್ಕಾಗಿ ನಿತೀಶ್ ಕುಮಾರ್ ರ ಹಿಂದಿ ಹೇರುವಿಕೆ ಸಹಿಸಿಕೊಂಡಿದ್ದೆವು ಎಂದು ದ್ರಾವಿಡ ಮುನ್ನೇತ್ರ ಕಳಗಂ (DMK) ನಾಯಕ ಟಿಆರ್ ಬಾಲು ಭಾನುವಾರ ಚೆನ್ನೈನಲ್ಲಿ ಹೇಳಿದ್ದಾರೆ.
ಹಿಂದಿ ಹೇರಿಕೆ ಪ್ರತಿಭಟನೆ
ಹಿಂದಿ ಹೇರಿಕೆ ಪ್ರತಿಭಟನೆ

ಚೆನ್ನೈ: ಮೈತ್ರಿ ಸಭೆಯಲ್ಲಿ ಹಿಂದಿ ಮಾತ್ರ ಮಾತನಾಡುವಂತೆ ನಿತೀಶ್ ಕುಮಾರೇ ಹೇಳಿದ್ದರು. INDI ಕೂಟಕ್ಕಾಗಿ ನಿತೀಶ್ ಕುಮಾರ್ ರ ಹಿಂದಿ ಹೇರುವಿಕೆ ಸಹಿಸಿಕೊಂಡಿದ್ದೆವು ಎಂದು ದ್ರಾವಿಡ ಮುನ್ನೇತ್ರ ಕಳಗಂ (DMK) ನಾಯಕ ಟಿಆರ್ ಬಾಲು ಭಾನುವಾರ ಚೆನ್ನೈನಲ್ಲಿ ಹೇಳಿದ್ದಾರೆ.

ಜನತಾದಳ-ಯುನೈಟೆಡ್ ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 'ಹಿಂದಿ ಮಾತ್ರ ಮಾತನಾಡಬೇಕು' ಎಂದು ಹೇಳಿದ್ದರು. INDI ಮೈತ್ರಿಕೂಟದಲ್ಲಿ ಸೌಹಾರ್ದತೆಗಾಗಿ ಪಕ್ಷವು ಅದನ್ನು ಸಹಿಸಿಕೊಂಡಿತ್ತು ಎಂದು ಟಿಆರ್ ಬಾಲು ಹೇಳಿದ್ದಾರೆ. ಚೆನ್ನೈನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸೀಟು ಹಂಚಿಕೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲು, ನಿತೀಶ್ ಕುಮಾರ್ ಅವರು INDI ಮೈತ್ರಿಕೂಟದಿಂದ ನಿರ್ಗಮಿಸುವ ಕುರಿತು ಕೇಳಿದಾಗ ಅವರಿಗೆ ಮೊದಲಿನಿಂದಲೂ 'ಕೆಲವು ಸಮಸ್ಯೆಗಳು' ಇದ್ದಂತೆ ತೋರುತ್ತಿದೆ ಮತ್ತು ನಿತೀಶ್ ಕುಮಾರ್ ಹೊರ ಹೋಗಿದ್ದರಿಂದ ಯಾವುದೇ ಚುನಾವಣಾ 'ಹಾನಿ' ಉಂಟಾಗುವುದಿಲ್ಲ ಎಂದು ಹೇಳಿದರು.

INDI ಮೈತ್ರಿಕೂಟದಲ್ಲಿ ತನ್ನ ಯೋಜನೆಯಂತೆ ಏನೂ ಕೆಲಸ ಮಾಡಿಲ್ಲ ಎಂಬ ಬಿಹಾರ ಮುಖ್ಯಮಂತ್ರಿ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲು, "ಅವರು ಯಾವ ಯೋಜನೆ ಮಾಡಿದರು? ಅವರು ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ, ಅವರು ಹಿಂದಿ ಹೇರುವಿಕೆಯೇ ಪ್ರಮುಖ ಯೋಜನೆಯಾಗಿತ್ತು ಅಷ್ಟೆ ಎಂದರು.

ಎಲ್ಲರೂ ಹಿಂದಿಯಲ್ಲಿ ಮಾತನಾಡಬೇಕು ಎಂದು ಅವರು (ನಿತೀಶ್ ಕುಮಾರ್) ಹೇಳಿದರು. ನಾವು ಅದನ್ನು ಸಹಿಸಿಕೊಂಡಿದ್ದೇವೆ. ಆಗಲೂ ನಾವು ಮೈತ್ರಿಯಲ್ಲಿ ಸೌಹಾರ್ದತೆಗಾಗಿ ರಾಜಿಯಾಗಿ ಮೌನವಾಗಿದ್ದೆವು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com