ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ನಲ್ಗೊಂಡ ಜಿಲ್ಲೆಯ ವಿದ್ಯಾರ್ಥಿ, ಗೂಡ್ಸ್ ರೈಲಿನ ಎದುರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
suicide (file pic)
ಆತ್ಮಹತ್ಯೆonline desk
Updated on

ಹೈದರಾಬಾದ್: ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಘಾಟ್ಕೇಸರ್ ಬಳಿ ನಡೆದಿದೆ.

ಕಾಲೇಜು ಶುಲ್ಕ ಭರಿಸಲು ತಂದಿದ್ದ ಹಣವನ್ನು ಬೆಟ್ಟಿಂಗ್ ನಲ್ಲಿ ಸೋತು ವಿದ್ಯಾರ್ಥಿ ಕಂಗಾಲಾಗಿದ್ದ.

suicide (file pic)
ಬೆಂಗಳೂರು: ಕಾಲೇಜು ಹಾಸ್ಟೆಲ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ನಲ್ಗೊಂಡ ಜಿಲ್ಲೆಯ ವಿದ್ಯಾರ್ಥಿ, ಗೂಡ್ಸ್ ರೈಲಿನ ಎದುರು ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗೆ ಆತನ ಪೋಷಕರು 1.03 ಲಕ್ಷ ರೂಪಾಯಿಗಳನ್ನು ಕಾಲೇಜು ಶುಲ್ಕ ಭರಿಸುವುದಕ್ಕಾಗಿ ನೀಡಿದ್ದರು. ಆದರೆ ಅದನ್ನು ಬೆಟ್ಟಿಂಗ್ ಗೆ ಹಾಕಿ ಸೋತಿದ್ದ.

ವಿದ್ಯಾರ್ಥಿ ಕಾಲೇಜು ಶುಲ್ಕ ಭರಿಸದೇ ಇದ್ದದ್ದು ಪೋಷಕರಿಗೆ ತಿಳಿದು ಆತನನ್ನು ವಿಚಾರಿಸಿದಾಗ ವಿದ್ಯಾರ್ಥಿ ತಾನು ಹಣವನ್ನು ಬೆಟ್ಟಿಂಗ್ ನಲ್ಲಿ ಸೋತಿರುವುದಾಗಿ ಒಪ್ಪಿಕೊಂಡಿದ್ದ. ಈ ಘಟನೆಯ ಬಳಿಕ ವಿದ್ಯಾರ್ಥಿ ಖಿನ್ನತೆಗೆ ಜಾರಿದ್ದ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com