ಜಮ್ಮು: ಪಾಕ್ ಉಗ್ರರ ಒಳನುಸುಳುವಿಕೆ ಹೆಚ್ಚಳ, 500 ಪ್ಯಾರಾ ಕಮಾಂಡೋ ನಿಯೋಜನೆ!

ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸಲು 50-55 ಪಾಕಿಸ್ತಾನಿ ಭಯೋತ್ಪಾದಕರು ಗಡಿಯೊಳಗೆ ನುಸುಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಡಲು ಭಾರತೀಯ ಸೇನೆಯ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುತ್ತಿದೆ.
ಭದ್ರತಾ ಪಡೆಗಳು
ಭದ್ರತಾ ಪಡೆಗಳು
Updated on

ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮುವಿನಲ್ಲಿ ತರಬೇತಿ ಪಡೆದ ಪಾಕ್ ಉಗ್ರರ ಒಳನುಸುಳುವಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಸುಮಾರು 500 ಪ್ಯಾರಾ ಕಮಾಂಡೋಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸಲು 50-55 ಪಾಕಿಸ್ತಾನಿ ಭಯೋತ್ಪಾದಕರು ಗಡಿಯೊಳಗೆ ನುಸುಳಿದ್ದಾರೆ ಎನ್ನಲಾಗಿದೆ.

ಭದ್ರತಾ ಪಡೆಗಳು
ಉಗ್ರರ ಹೆಡೆಮುರಿಗೆ ಸೈನಿಕರಿಗೆ ಸ್ಥಳೀಯರ ಸಾಥ್; ಶಸ್ತ್ರ ಹಿಡಿದು ಕಾಡಿಗೆ ನುಗ್ಗಿದ Village defence guards

ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಡಲು ಭಾರತೀಯ ಸೇನೆಯ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುತ್ತಿದೆ. ಗುಪ್ತಚರ ಸಂಸ್ಥೆಗಳು ಕೂಡಾ ಭಯೋತ್ಪಾದಕರಿಗೆ ನೆರವು ನೀಡುತ್ತಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಪಾಕಿಸ್ತಾನದ ಕುತಂತ್ರವನ್ನು ಎದುರಿಸಲು ಸೇನೆಯು ಈಗಾಗಲೇ ಸುಮಾರು 3,500-4000 ಸಿಬ್ಬಂದಿಗಳ ಒಂದು ಶಸ್ತ್ರ ಸಜ್ಜಿತ ಪಡೆಗಳನ್ನು ಈ ಪ್ರದೇಶಕ್ಕೆ ಕರೆತಂದಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವಹನ ಸಾಧನಗಳನ್ನು ಹೊಂದಿರುವ ಭಯೋತ್ಪಾದಕರನ್ನು ಹುಡುಕಲು ಮತ್ತು ನಾಶಮಾಡಲು ಭೂಸೇನೆಯ ಕಾರ್ಯಪ್ರವೃತ್ತವಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com