ಪಂಜಾಬ್: ಹುಟ್ಟುಹಬ್ಬದಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದ 10 ವರ್ಷದ ಬಾಲಕಿ ಸಾವು

ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ತಿಂದ ನಂತರ ಶಂಕಿತ ವಿಷಾಹಾರದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ. ಬಾಲಕಿ ತಂಗಿ ಸೇರಿದಂತೆ ಇಡೀ ಕುಟುಂಬ ಕೇಕ್ ತಿಂದ ನಂತರ ಅಸ್ವಸ್ಥಗೊಂಡಿತು. ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದೆ ಎಂದು ಬಾಲಕಿಯ ತಾತ ತಿಳಿಸಿದ್ದಾರೆ.
ಕೇಕ್ ತಿಂದು ಸಾವಿಗೀಡಾದ 10 ವರ್ಷದ ಬಾಲಕಿ
ಕೇಕ್ ತಿಂದು ಸಾವಿಗೀಡಾದ 10 ವರ್ಷದ ಬಾಲಕಿ
Updated on

ನವದೆಹಲಿ: ಕಳೆದ ವಾರ ಪಂಜಾಬ್‌ನಲ್ಲಿ 10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ತಿಂದ ನಂತರ ಶಂಕಿತ ವಿಷಾಹಾರದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ.

ಬಾಲಕಿ ತಂಗಿ ಸೇರಿದಂತೆ ಇಡೀ ಕುಟುಂಬ ಕೇಕ್ ತಿಂದ ನಂತರ ಅಸ್ವಸ್ಥಗೊಂಡಿತು. ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದೆ ಎಂದು ಬಾಲಕಿಯ ತಾತ ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಮಾನ್ವಿ ಎಂದು ಗುರುತಿಸಲಾಗಿದ್ದು, ತನ್ನ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಆಕೆ ತನ್ನ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವುದು ಕಂಡುಬಂದಿದೆ.

ಮಾರ್ಚ್ 24 ರಂದು ರಾತ್ರಿ 7 ಗಂಟೆ ಸುಮಾರಿಗೆ ಅವರು ಕೇಕ್ ಅನ್ನು ಕತ್ತರಿಸಿದರು. ಅದೇ ರಾತ್ರಿ 10 ಗಂಟೆಗೆ ಇಡೀ ಕುಟುಂಬ ಅಸ್ವಸ್ಥಗೊಂಡಿತು. ಶೀಘ್ರದಲ್ಲೇ ಸಹೋದರಿಯರು ವಾಂತಿ ಮಾಡಲು ಪ್ರಾರಂಭಿಸಿದರು. ಮಾನ್ವಿ ನೀರು ಕೇಳಿದಳು. ತೀವ್ರ ಬಾಯಾರಿಕೆಯಾಗುತ್ತಿರುವುದಾಗಿ ಮತ್ತು ಬಾಯಿ ಒಣಗುತ್ತಿರುವುದಾಗಿ ಹೇಳಿದಳು. ನಂತರ, ಆಕೆ ಮಲಗಲು ಹೋದಳು ಎಂದು ಆಕೆಯ ಅಜ್ಜ ಹರ್ಬನ್ ಲಾಲ್ ಹೇಳಿದರು,

ಕೇಕ್ ತಿಂದು ಸಾವಿಗೀಡಾದ 10 ವರ್ಷದ ಬಾಲಕಿ
ಮಹಾರಾಷ್ಟ್ರ: ವಿಷಾಹಾರ ಸೇವಿಸಿ ನಾಲ್ಕು ಮಕ್ಕಳು ಸಾವು, 40 ಮಂದಿ ಅಸ್ವಸ್ಥ

ಮರುದಿನ ಬೆಳಗ್ಗೆ ಆಕೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆಕೆಗೆ ಆಮ್ಲಜನಕವನ್ನು ಹಾಕಲಾಯಿತು ಮತ್ತು ಇಸಿಜಿ ಮಾಡಲಾಯಿತು. ಆದರೆ, ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಆಕೆ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಹೇಳಿದರು.

'ಕೇಕ್ ಕನ್ಹಾ'ನಿಂದ ಆರ್ಡರ್ ಮಾಡಲಾಗಿದ್ದ ಚಾಕೊಲೇಟ್ ಕೇಕ್‌ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಕೇಕ್ ತಿಂದು ಸಾವಿಗೀಡಾದ 10 ವರ್ಷದ ಬಾಲಕಿ
ಮಕ್ಕಳ ಅನಾಥಾಶ್ರಮದಲ್ಲಿ ವಿಷಾಹಾರ ಸೇವಿಸಿ ಮೂರು ಸಾವು: 11 ಮಂದಿ ಆಸ್ಪತ್ರೆಗೆ ದಾಖಲು

ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com