
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಿವಿಲ್ ಲೈನ್ಸ್‌ನ ಫ್ಲಾಗ್‌ಸ್ಟಾಫ್ ರಸ್ತೆ 6 ರಲ್ಲಿರುವ "ದೆಹಲಿ ಮುಖ್ಯಮಂತ್ರಿಗಳ ನಿವಾಸ"ವನ್ನು ಬಿಜೆಪಿಯ ಆದೇಶದ ಮೇರೆಗೆ ಬಲವಂತವಾಗಿ ಖಾಲಿ ಮಾಡಿಸಲಾಗಿದೆ ಮತ್ತು ಅದನ್ನು ಕೇಸರಿ ಪಕ್ಷದ ನಾಯಕನಿಗೆ ಹಂಚಿಕೆ ಮಾಡಲು ಬಯಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಬುಧವಾರ ಪ್ರಕಟಣೆಯಲ್ಲಿ ಆರೋಪಿಸಿದೆ.
ದೆಹಲಿ ಮುಖ್ಯಮಂತ್ರಿ ಅತಿಶಿ ಅವರ ಮನೆಯಿಂದ ಅವರ ವಸ್ತುಗಳನ್ನು ಸಹ ತೆಗೆದುಹಾಕಲಾಗಿದೆ ಸಿಎಂಒ ಹೇಳಿದೆ. ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ವಾಸವಿದ್ದ ಈ ಮನೆಯನ್ನು ಅತಿಶಿ ಅವರಿಗೆ ಹಂಚಿಕೆ ಮಾಡಲಾಗಿತ್ತು.
ಪ್ರಮುಖ ಬಿಜೆಪಿ ನಾಯಕರೊಬ್ಬರಿಗೆ ಈ ಬಂಗಲೆ ಮಂಜೂರು ಮಾಡುವ ಉದ್ದೇಶದಿಂದ ಸಿಎಂ ನಿವಾಸವನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿಗಳ ಕಚೇರಿ ದೂರಿದೆ.
ಈ ಆರೋಪಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿ ಅಥವಾ ಬಿಜೆಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದಕ್ಕೂ ಮುನ್ನ ಎಎಪಿ ಸಂಸದ ಸಂಜಯ್ ಸಿಂಗ್ ಅವರು, ಸಿಎಂ ಅತಿಶಿಗೆ ಅಧಿಕಾರಿಗಳು ಬಂಗಲೆ ಮಂಜೂರು ಮಾಡುತ್ತಿಲ್ಲ ಮತ್ತು ಅವರ ಕ್ಯಾಂಪ್ ಕಚೇರಿಯನ್ನು ಸಹ ಖಾಲಿ ಮಾಡಿಸಲಾಗಿದೆ ಎಂದು ಹೇಳಿದ್ದರು.
Advertisement