ನವದೆಹಲಿ: ವಿಮಾನಯಾನ ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ದೆಹಲಿಯ ಉತ್ತಮ್ ನಗರದಲ್ಲಿರುವ ರಾಜಪುರಿ ಪ್ರದೇಶದ ಶುಭಂ ಉಪಾಧ್ಯಾಯ (25) ಬಂಧಿತ ಆರೋಪಿ. ದೂರದರ್ಶನದಲ್ಲಿ ಇದೇ ರೀತಿಯ ಸುದ್ದಿ ವರದಿಗಳನ್ನು ನೋಡಿದ ನಂತರ ಪ್ರಚಾರಕ್ಕಾಗಿ ಹಾಗೂ ದೇಶದ ಗಮನ ಸೆಳೆಯಲು ಈ ಕೃತ್ಯವನ್ನು ಮಾಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
‘ಅಕ್ಟೋಬರ್ 25 ಮತ್ತು 26 ರ ಮಧ್ಯರಾತ್ರಿಯಲ್ಲಿ ಐಜಿಐ ವಿಮಾನ ನಿಲ್ದಾಣದಲ್ಲಿ ಎರಡು ಅನುಮಾನಾಸ್ಪದ ಮತ್ತು ಸಂಭಾವ್ಯ ಬಾಂಬ್ ಬೆದರಿಕೆ ಸಂದೇಶಗಳನ್ನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಬಂದಿತ್ತು. ತಕ್ಷಣ ಭದ್ರತಾ ಪ್ರೋಟೋಕಾಲ್ ಗಳನ್ನು ಅನುಸರಿಸಲಾಯಿತು.
ನಾಗರಿಕ ವಿಮಾನಯಾನ ಸುರಕ್ಷತೆ (ಎಸ್‌ಯುಎ ಎಸ್‌ಸಿಎ) ಕಾಯ್ದೆ, 1982 ಮತ್ತು 351(4)ರ ವಿರುದ್ಧ ಕಾನೂನುಬಾಹಿರ ಕಾಯಿದೆಗಳ ನಿಗ್ರಹದ ಸೆಕ್ಷನ್ 3(1)(ಡಿ) ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ತನಿಖೆಯ ಸಮಯದಲ್ಲಿ ಇದು ಹುಸಿ ಬೆದರಿಕೆ ಕರೆ ಎಂಬುದು ತಿಳಿಯಿತು.
ತನಿಖೆ ವೇಳೆ ಬೆದರಿಕೆ ಬಂದ ಸಾಮಾಜಿಕ ಜಾಲತಾಣದ ಖಾತೆಯು ಪಶ್ಚಿಮ ದಿಲ್ಲಿಯ ಉತ್ತಮ್ ನಗರ ಪ್ರದೇಶದ ರಾಜಪುರಿ ಮೂಲದ ಶುಭಂ ಉಪಾಧ್ಯಾಯ ಎಂಬಾತನಿಗೆ ಸೇರಿದ್ದು ಎಂಬುದು ತಿಳಿದುಬಂದಿತ್ತು. ಬಳಿಕ ಉಪಾಧ್ಯಾಯನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ʼಟಿವಿಯಲ್ಲಿ ಬೆದರಿಕೆ ಕರೆಗಳ ಬಗ್ಗೆ ವರದಿಗಳನ್ನು ನೋಡಿ ತಾನು ಕೂಡ ಪ್ರಚಾರಕ್ಕೆ ಬೆದರಿಕೆ ಹಾಕಿದ್ದಾಗಿ ಹೇಳಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಐಜಿಐ ವಿಮಾನ ನಿಲ್ದಾಣ) ಉಷಾ ರಂಗ್ನಾನಿ ತಿಳಿಸಿದ್ದಾರೆ.
25 ವರ್ಷದ ಶುಭಂ ಉಪಾಧ್ಯಾಯ ನಿರುದ್ಯೋಗಿಯಾಗಿದ್ದು,12ನೇ ತರಗತಿವರೆಗೆ ವಿದ್ಯಾಭ್ಯಾಸವನ್ನು ಮಾಡಿದ್ದಾನೆ. ಎಲ್ಲಾ ಅಗತ್ಯ ಭದ್ರತಾ ಕ್ರಮಗಳು ಜಾರಿಯಲ್ಲಿವೆ ಎಂದು ನಾವು ಸಾರ್ವಜನಿಕರಿಗೆ ಭರವಸೆ ನೀಡುತ್ತೇವೆ ಮತ್ತು ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೆ ಅಧಿಕಾರಿಗಳಿಗೆ ತಿಳಿಸುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ರಂಗ್ನಾನಿ ಹೇಳಿದ್ದಾರೆ.
Advertisement