ಮಧ್ಯ ಪ್ರದೇಶ: ಬೈಕ್ ಗೆ ಡಿಕ್ಕಿ ಹೊಡೆದು ಬಾವಿಗೆ ಉರುಳಿದ ವ್ಯಾನ್; 11 ಮಂದಿ ಸಾವು

ನಾರಾಯಣಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಾನ್‌ನಲ್ಲಿ 13 ಮಂದಿ ಪ್ರಯಾಣಿಸುತ್ತಿದ್ದರು.
van plunged into a water-filled well
ಅಪಘಾತಕ್ಕೀಡಾದ ವ್ಯಾನ್
Updated on

ಮಂದಸೌರ್: ವೇಗವಾಗಿ ಬಂದ ವ್ಯಾನ್ ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ನೀರು ತುಂಬಿದ ಬಾವಿಗೆ ಉರುಳಿ ಬಿದ್ದಿದ್ದು, ಬೈಕ್ ಸವಾರ ಸುಮಾರು 11 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

ನಾರಾಯಣಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವ್ಯಾನ್‌ನಲ್ಲಿ 13 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ ನಾಲ್ವರನ್ನು ರಕ್ಷಿಸಲಾಗಿದ್ದು, ಇತರ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ರತ್ಲಂ ವಲಯದ ಉಪ ಮಹಾನಿರ್ದೇಶಕ( (ಡಿಐಜಿ) ಮನೋಜ್ ಸಿಂಗ್ ಹೇಳಿದ್ದಾರೆ.

ರಕ್ಷಣೆಗಾಗಿ ಬಾವಿಗೆ ಇಳಿದ ಮನೋಹರ್ ಎಂದು ಗುರುತಿಸಲಾದ ಗ್ರಾಮಸ್ಥರು ಸಹ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಲಿಯಾದ ವ್ಯಕ್ತಿಯ ಶವವನ್ನು ಇನ್ನೂ ಬಾವಿಯಿಂದ ಹೊರತೆಗೆಯಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

van plunged into a water-filled well
ಕೊಪ್ಪಳ: ಮಗನ ತಪ್ಪಿಗೆ ಅಪ್ಪನಿಗೆ ಶಿಕ್ಷೆ; ಅಪ್ರಾಪ್ತನಿಂದ ಅಪಘಾತ, ಆಟೋ ಚಾಲಕನಿಗೆ ಬಿತ್ತು 1.4 ಕೋಟಿ ರೂ ದಂಡ!

ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಬಾವಿಗೆ ಉರುಳಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಬೈಕ್ ಸವಾರ ಕೂಡ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಇತರ ಘಟಕಗಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸ್ಥಳಕ್ಕೆ ಧಾವಿಸಿದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ, ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ರಸ್ತೆಯಿಂದ ಆಯತಪ್ಪಿ ಬಾವಿಗೆ ಬಿದ್ದಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com