ಮಹಾರಾಷ್ಟ್ರದಲ್ಲಿ ಸೆರೆಯಾಳಾಗಿದ್ದ ಮಧ್ಯ ಪ್ರದೇಶದ 17 ಬುಡಕಟ್ಟು ಜನಾಂಗದವರ ರಕ್ಷಣೆ

ಭೋಪಾಲ್: ಮಹಾರಾಷ್ಟ್ರದ ಧರಾಶಿವ್(ಒಸ್ಮಾನಾಬಾದ್) ಜಿಲ್ಲೆಯಲ್ಲಿ ಕಬ್ಬು ಕಟಾವು ಸಂಬಂಧಿತ ಕೆಲಸಗಳಿಗಾಗಿ ಸ್ಥಳೀಯ ಗುತ್ತಿಗೆದಾರನ ಸೆರೆಯಾಳಾಗಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 17 ಬುಡಕಟ್ಟು ಜನರನ್ನು ರಕ್ಷಿಸಲಾಗಿದೆ.
ಪೊಲೀಸ್ ದೂರಿನ ನಂತರ ನೈಋತ್ಯ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಐದು ಪುರುಷರು, ಐದು ಮಹಿಳೆಯರು ಮತ್ತು ಏಳು ಮಕ್ಕಳು ಸೇರಿದಂತೆ 17 ಜನರನ್ನು ಬಿಡುಗಡೆ ಮಾಡಲಾಗಿದೆ.
ಬುಡಕಟ್ಟು ಸಮುದಾಯದ ಈ ಕಾರ್ಮಿಕರು ನಾಲ್ಕು ತಿಂಗಳ ಹಿಂದೆ ಜಲಗಾಂವ್(ಮಹಾರಾಷ್ಟ್ರ) ಮೂಲದ ಗುತ್ತಿಗೆದಾರ ದೇವಸಿಂಗ್ ಎಂಬುವವರ ಮೂಲಕ ಮಹಾರಾಷ್ಟ್ರದ ಧಾರಾಶಿವ್ (ಉಸ್ಮಾನಾಬಾದ್) ಜಿಲ್ಲೆಯ ಕಲಾಂಬ್ ತಹಸಿಲ್‌ನ ಗಂಭೀರ್ವಾಡಿ ಗ್ರಾಮದ ಶ್ರೀಮಂತ ರೈತನ ಕಬ್ಬಿನ ಹೊಲಗಳಲ್ಲಿ ಕಬ್ಬು ಕಟಾವು ಸಂಬಂಧಿತ ಕೆಲಸಗಳಿಗಾಗಿ ತೆರಳಿದ್ದರು.
ಆದರೆ, ಗುತ್ತಿಗೆದಾರ ದೇವಸಿಂಗ್ ಮಧ್ಯಪ್ರದೇಶದ ಬುಡಕಟ್ಟು ಜನರನ್ನು ಧರಾಶಿವ್ ಜಿಲ್ಲೆಯಲ್ಲಿ ಬಿಟ್ಟು ಹೋಗಿದ್ದರಿಂದ ಬುಡಕಟ್ಟು ಕಾರ್ಮಿಕರು ಅಲ್ಲಿಯೇ ಸಿಲುಕಿಕೊಂಡಿದ್ದು, ಅವರಿಗೆ ಸರಿಯಾದ ಆಹಾರ ಕೂಡಾ ಲಭ್ಯವಾಗಿಲ್ಲ ಎಂದು ಆರೋಪಿಸಲಾಗಿದೆ.
ಆಹಾರದ ಕೊರತೆ ಮತ್ತು ಇತರ ಸಮಸ್ಯೆಗಳಿಂದಾಗಿ ಬುಡಕಟ್ಟು ಕಾರ್ಮಿಕರು ಕಬ್ಬಿನ ತೋಟದ ಮಾಲೀಕರ ಬಳಿ ತಮ್ಮ ವೇತನವನ್ನು ಪಾವತಿಸುವಂತೆ ಕೇಳಿಕೊಂಡಿದ್ದರು. ಆದರೆ ಈ ವೇಳೆ ಕಬ್ಬಿನ ತೋಟದ ಮಾಲಿಕ ಅವರಿಗೆ ಭರವಸೆ ನೀಡಿದ್ದ ವೇತನ ನೀಡುವ ಬದಲು, ಅವರ ಮೇಲೆಯೆ ಹಲ್ಲೆ ನಡೆಸಿದ್ದರು.
ಹಲ್ಲೆ ನಡೆಸಿದ್ದಲ್ಲದೆ, ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸಿ, ಹೊರಗಿನ ಪ್ರಪಂಚದೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಲು ಅವರ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಒಪ್ಪಿದ ವೇತನವನ್ನು ಪಾವತಿಸದೆ ಅವರನ್ನು ಬಂಧಿಸಿ ಜಮೀನಿನಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ಎಂದು ಆರೋಪಿಸಲಾಗಿದೆ.
ಕಳೆದ ವಾರ ಜನವರಿಯಲ್ಲಿ ಬಂಬಾಡಾ ಗ್ರಾಮದ(ಬುಡಕಟ್ಟು ಕಾರ್ಮಿಕರು ಮಧ್ಯಪ್ರದೇಶದಲ್ಲಿ ವಾಸಿಸುತ್ತಿದ್ದ ಗ್ರಾಮ) ನಿವಾಸಿಯೊಬ್ಬರು ಬುರ್ಹಾನ್‌ಪುರ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ದೂರಿನ ಮೇರೆಗೆ, ಬುರ್ಹಾನ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಾಟಿದಾರ್ ಅವರು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಗೆ ಮೀಸಲಾದ ಪೊಲೀಸ್ ತಂಡವನ್ನು ಕಾರ್ಮಿಕರಿದ್ದ ತೋಟಕ್ಕೆ ಕಳುಹಿಸಿದ್ದರು. ಹಾಗಾಗಿ ಮಂಗಳವಾರ ಅಲ್ಲಿ ಬಂಧಿತರಾಗಿದ್ದ 17 ಜನರನ್ನು ಬಿಡುಗಡೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



