Maha Kumbh Mela: ಸಂಗಮದಲ್ಲಿ ಇಟಲಿ ನಿಯೋಗ ಪವಿತ್ರ ಸ್ನಾನ; ಭಾರತದ ಸಂಸ್ಕೃತಿ, ಸಂಪ್ರದಾಯಕ್ಕೆ ಫಿದಾ!

ಇಟಲಿಯ ಧ್ಯಾನ ಮತ್ತು ಯೋಗ ಕೇಂದ್ರದ ಸಂಸ್ಥಾಪಕ ಮತ್ತು ತರಬೇತುದಾರರಾದ ಮಹಿ ಗುರು ನೇತೃತ್ವದಲ್ಲಿನ ನಿಯೋಗದಲ್ಲಿ ಹಲವಾರು ಮಹಿಳೆಯರು ಇದ್ದರು.
womens of Italy Delegation
ಇಟಲಿ ನಿಯೋಗದ ಮಹಿಳಾ ಸದಸ್ಯರು
Updated on

ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್ ನಡೆಯುತ್ತಿರುವ ಮಹಾಕುಂಭ ಮೇಳದ ಆರನೇ ದಿನವಾದ ಭಾನುವಾರ ಇಟಲಿಯ ನಿಯೋಗವೊಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದೆ. ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದು, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಇಟಲಿಯ ಧ್ಯಾನ ಮತ್ತು ಯೋಗ ಕೇಂದ್ರದ ಸಂಸ್ಥಾಪಕ ಮತ್ತು ತರಬೇತುದಾರರಾದ ಮಹಿ ಗುರು ನೇತೃತ್ವದಲ್ಲಿನ ನಿಯೋಗದಲ್ಲಿ ಹಲವಾರು ಮಹಿಳೆಯರು ಇದ್ದರು.

ಈ ಗುಂಪಿನ ಸದಸ್ಯರು ಮಹಾ ಕುಂಭ ಮೇಳದಲ್ಲಿನ ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಂಡಿದ್ದು, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ನೇರ ಪ್ರದರ್ಶನವಾಗಿದೆ ಎಂದು ಕೊಂಡಾಡಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಆದಿತ್ಯನಾಥ್ ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿಯೋಗದ ಸದಸ್ಯರು ರಾಮಾಯಣ, ಶಿವ ತಾಂಡವದಿಂದ ಚೌಪಾಯಿ (ಶ್ಲೋಕ) ಪಠಿಸಿದ್ದು, ಭಜನೆಗಳನ್ನು ಹಾಡಿದರು. ನಾಗಾ ಸಾಧುಗಳ ಆಚರಣೆಗಳು, 'ಭಜನೆ-ಕೀರ್ತನೆ' ಮತ್ತಿತರ ಧಾರ್ಮಿಕ ಆಚರಣೆಗಳು, ಭಾರತೀಯ ಸಂಪ್ರದಾಯಗಳು ತಮ್ಮನ್ನು ಹೇಗೆ ಪ್ರಭಾವಿಸಿತು ಎಂಬುದನ್ನು ಅವರು ಮುಖ್ಯಮಂತ್ರಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಹಾಕುಂಭ ಮೇಳದಲ್ಲಿನ ಅನುಭವಗಳು ತಮ್ಮನ್ನು ಆಳವಾಗಿ ಪ್ರಭಾವಿಸಿವೆ ಎಂದು ಮಹಿಳಾ ಸದಸ್ಯರು ಹೇಳಿದ್ದಾರೆ.

womens of Italy Delegation
Maha Kumbh Mela 2025: ಕೋಟ್ಯಂತರ ಜನ ಸೇರಿದರೂ ಸುಗಮ ಜನದಟ್ಟಣೆ ನಿರ್ವಹಣೆ! ಇದೇ ಕಾರಣ

ಭೇಟಿಯ ಸಮಯದಲ್ಲಿ ಅವರ ಅನುಭವ ಮತ್ತು ಆತಿಥ್ಯವನ್ನು ಶ್ಲಾಘಿಸಿದ್ದು, ಮಹಾ ಕುಂಭ ಮೇಳ ಆಧ್ಯಾತ್ಮಿಕತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮಹತ್ವವನ್ನು ಹೇಗೆ ಬಲಪಡಿಸಿತು ಎಂಬುದನ್ನು ಇಟಲಿ ನಿಯೋಗ ತಿಳಿಸಿದೆ. ಆದಿತ್ಯನಾಥ್ ನಿಯೋಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವೇಳೆ ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳನ್ನು ಬಲಪಡಿಸಲು ಮತ್ತಷ್ಟು ವಿನಿಮಯವನ್ನು ಪ್ರೋತ್ಸಾಹಿಸಿದರು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com