ಭೋಪಾಲ್‌: ಪತ್ನಿಗೆ ಗುಂಡಿಕ್ಕಿ ಕೊಂದು ಸಿಆರ್‌ಪಿಎಫ್ ಯೋಧ ತಾನೂ ಆತ್ಮಹತ್ಯೆಗೆ ಶರಣು

ಪ್ರಾಥಮಿಕ ತನಿಖೆಯ ಪ್ರಕಾರ ಸಿಆರ್‌ಪಿಎಫ್ ಯೋಧ ಮೊದಲು ತನ್ನ ಹೆಂಡತಿಯನ್ನು ಗುಂಡಿಕ್ಕೆ ಹತ್ಯೆ ಮಾಡಿದ್ದಾರೆ. ನಂತರ ತಾನೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.
ಸಿಆರ್‌ಪಿಎಫ್ ಯೋಧ ವಾಸಿಸುತ್ತಿದ್ದ ಮನೆ
ಸಿಆರ್‌ಪಿಎಫ್ ಯೋಧ ವಾಸಿಸುತ್ತಿದ್ದ ಮನೆ
Updated on

ಭೋಪಾಲ್: ಭೋಪಾಲ್‌ನ ಮಿಸ್ರೋಡ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯ ಯೋಧನೊಬ್ಬ ಬುಧವಾರ ಮಧ್ಯರಾತ್ರಿ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ಅದೇ ರೈಫಲ್ ನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಭೋಪಾಲ್ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಡಯಲ್ 100 ತುರ್ತು ಸೇವೆಗೆ ಇಂದು ಬೆಳಗಿನ ಜಾವ 1:30 ರ ಸುಮಾರಿಗೆ ಕರೆ ಬಂದಿದೆ. ತನ್ನನ್ನು ತಾನು ಸಿಆರ್‌ಪಿಎಫ್ ಯೋಧ ರವಿಕಾಂತ್ ವರ್ಮಾ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ, ತನ್ನ ಪತ್ನಿ ರೇಣು ವರ್ಮಾ ಅವರನ್ನು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಿಸ್ರೋಡ್ ಪೊಲೀಸ್ ಠಾಣೆಯ ತಂಡ ತಕ್ಷಣ ಮನೆಗೆ ಧಾವಿಸಿದೆ. ಅಲ್ಲಿ ದಂಪತಿಗಳು ತಮ್ಮ ಇಬ್ಬರು ಮಕ್ಕಳಾದ ಆರು ವರ್ಷದ ಮಗ ಮತ್ತು ಎರಡೂವರೆ ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು.

ಮನೆಗೆ ಆಗಮಿಸಿದ ನಂತರ, ಅಧಿಕಾರಿಗಳು ಒಂದು ಕೋಣೆಯಲ್ಲಿ ಇಬ್ಬರು ಮಕ್ಕಳು ಅಳುತ್ತಿರುವುದನ್ನು ಕಂಡರು. ಆದರೆ 35 ವರ್ಷದ ರವಿಕಾಂತ್ ವರ್ಮಾ ಮತ್ತು 32 ವರ್ಷದ ರೇಣು ವರ್ಮಾ ಅವರ ರಕ್ತಸಿಕ್ತ ಶವಗಳು ಇನ್ನೊಂದು ಕೋಣೆಯಲ್ಲಿ ಬಿದ್ದಿದ್ದವು. ಶವಗಳ ಬಳಿ INSAS ರೈಫಲ್ ಪತ್ತೆಯಾಗಿದೆ.

ಸಿಆರ್‌ಪಿಎಫ್ ಯೋಧ ವಾಸಿಸುತ್ತಿದ್ದ ಮನೆ
ಭೋಪಾಲ್‌: ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿ ಅರಿವಳಿಕೆ ಮದ್ದು ಚುಚ್ಚಿಕೊಂಡು 24 ವರ್ಷದ ವೈದ್ಯೆ ಆತ್ಮಹತ್ಯೆ

ಪ್ರಾಥಮಿಕ ತನಿಖೆಯ ಪ್ರಕಾರ ಸಿಆರ್‌ಪಿಎಫ್ ಯೋಧ ಮೊದಲು ತನ್ನ ಹೆಂಡತಿಯನ್ನು ಗುಂಡಿಕ್ಕೆ ಹತ್ಯೆ ಮಾಡಿದ್ದಾರೆ. ನಂತರ ತಾನೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಶವಗಳನ್ನು ಭೋಪಾಲ್‌ನ ಏಮ್ಸ್‌ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಗುಂಡಿನ ಸದ್ದು ಕೇಳಿ ಮನೆಗೆ ಧಾವಿಸಿದ ನೆರೆಹೊರೆಯವರು, ದಂಪತಿಗಳು ಆಗಾಗ್ಗೆ ಜೋರಾಗಿ ಜಗಳವಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದಾಗ್ಯೂ, ಈ ಮಾರಕ ಘಟನೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com