ಪಾಕ್ ಪರ ಬೇಹುಗಾರಿಕೆ: ಜ್ಯೋತಿ ಮಲ್ಹೋತ್ರಾ ಜೊತೆ ಸಂಪರ್ಕ; ಪಂಜಾಬ್‌ YouTuber ಜಸ್ಬೀರ್ ಸಿಂಗ್ ಬಂಧನ

ಪಂಜಾಬ್‌ ಪೊಲೀಸರ ಮಾಹಿತಿ ಪ್ರಕಾರ, ಜಸ್ಬೀರ್‌ ಸಿಂಗ್‌ 2020, 2021 ಹಾಗೂ 2024ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಸಿಂಗ್‌ ಪಾಕ್‌ ಐಎಸ್‌ಐನ ಶಾಕೀರ್‌ ಎಂಬಾತನ ಜತೆ ಸಂಪರ್ಕದಲ್ಲಿದ್ದ.
YouTuber ಜಸ್ಬೀರ್ ಸಿಂಗ್
YouTuber ಜಸ್ಬೀರ್ ಸಿಂಗ್
Updated on

ಚಂಡೀಗಢ್:‌ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಳಿಕ ಭಾರತದಲ್ಲಿ ಪಾಕಿಸ್ತಾನ ಪರ ಗೂಢಚಾರಿಕೆ ನಡೆಸುತ್ತಿರುವವರನ್ನು ಬಂಧಿಸುವ ಕಾರ್ಯ ಮುಂದುವರಿದಿದ್ದು, ಇದೀಗ ಪಂಜಾಬ್‌ ನ ಮತ್ತೊಬ್ಬ ಯುಟ್ಯೂಬರ್‌ ವೊಬ್ಬರು ಬಂಧನಕ್ಕೊಳಗಾಗಿದ್ದಾರೆ.

ಬೇಹುಗಾರಿಕೆ ಆರೋಪದ ಮೇಲೆ ಈ ಹಿಂದೆ ಹರಿಯಾಣ ಮೂಲಕ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರು ಬಂಧನಕ್ಕೊಳಗಾಗಿದ್ದರು. ಇವರೊಂದಿಗೆ ಸಂಪರ್ಕ ಇದ್ದ ಹಿನ್ನೆಲೆಯಲ್ಲಿ ಇದೀಗ ಪಂಜಾಬ್'ನ ರೋಪರ್ ಜಿಲ್ಲೆಯ ರೂಪನಗರದಲ್ಲಿರುವ ಮಹ್ಲಾನ್ ಗ್ರಾಮದ ನಿವಾಸಿ ಜಸ್ಬೀರ್ ಸಿಂಗ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.

ಜಸ್ಬೀರ್ ಸಿಂಗ್ ಸಿಂಗ್ “ಜಾನ್ ಮಹಲ್” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಪಾಕಿಸ್ತಾನದ ಐಎಸ್‌ಐಗೆ ಗಡಿಭಾಗದಲ್ಲಿನ ಭಾರತೀಯ ಸೇನೆಯ ಕುರಿತ ಮಾಹಿತಿಯನ್ನು ಕೊಡುತ್ತಿದ್ದ ಆರೋಪದ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಪಂಜಾಬ್‌ ಪೊಲೀಸರ ಮಾಹಿತಿ ಪ್ರಕಾರ, ಜಸ್ಬೀರ್‌ ಸಿಂಗ್‌ 2020, 2021 ಹಾಗೂ 2024ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಸಿಂಗ್‌ ಪಾಕ್‌ ಐಎಸ್‌ಐನ ಶಾಕೀರ್‌ ಎಂಬಾತನ ಜತೆ ಸಂಪರ್ಕದಲ್ಲಿದ್ದ. ಈತನ ಮೊಬೈಲ್‌ ನಲ್ಲಿ ಪಾಕಿಸ್ತಾನದ ಹಲವಾರು ನಂಬರ್‌ ಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಂಧಿತಳಾದ ಯುಟ್ಯೂಬರ್‌ ಜ್ಯೋತಿ ಮಲ್ಹೋತ್ರಾಳಂತೆ ಜಸ್ಬೀರ್‌ ಸಿಂಗ್‌ ಕೂಡಾ ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ನಡೆದ ಪಾಕಿಸ್ತಾನ್‌ ನ್ಯಾಷನಲ್‌ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನಿ ಪ್ರಜೆ ಮತ್ತು ದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಿಂದ ಹೊರಹಾಕಲ್ಪಟ್ಟ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಆಹ್ವಾನದ ಮೇರೆಗೆ ದೆಹಲಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಈ ಕಾರ್ಯಕ್ರಮದ ಸಮಯದಲ್ಲಿ ಹಲವಾರು ಪಾಕಿಸ್ತಾನಿ ಸೇನಾ ಅಧಿಕಾರಿಗಳು ಮತ್ತು ವ್ಲಾಗರ್‌ಗಳನ್ನು ಭೇಟಿಯಾಗಿದ್ದು, ಮೂರು ಪ್ರತ್ಯೇಕ ಸಂದರ್ಭಗಳಲ್ಲಿ 2020, 2021 ಮತ್ತು 2024 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇದೀಗ ಆತನ ಬಳಿಯಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ.

ಜ್ಯೋತಿ ಮಲ್ಹೋತ್ರಾ ಬಂಧನದ ನಂತರ, ಸಿಂಗ್ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪಾಕಿಸ್ತಾನದ ಅಧಿಕಾರಿಗಳೊಂದಿಗಿನ ಆತನ ಸಂಪರ್ಕ, ಸಂವಹನ ಇತಿಹಾಸವನ್ನು ಅಳಿಸಲು ಪ್ರಯತ್ನಿಸಿದ್ದಾನೆಂದೂ ಹಳಿದ್ದಾರೆ.

ಈ ಸಂಬಂಧ ಮೊಹಾಲಿಯ ಎಸ್‌ಎಸ್‌ಒಸಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

YouTuber ಜಸ್ಬೀರ್ ಸಿಂಗ್
ಪಹಲ್ಗಾಮ್ ದಾಳಿಗೂ ಮುನ್ನಾ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ಭೇಟಿ!, ISI ಏಜೆಂಟ್ ಗಳ ಜೊತೆ ನಿರಂತರ ಸಂಪರ್ಕ; ತನಿಖೆ ವೇಳೆ ಬಹಿರಂಗ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com