'ನಿನ್ನ ಕಾಲಿಗೆ ಬೀಳ್ತೀನಿ ಹೋಗ್ಬೇಡಮ್ಮ': ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ, Video Viral

ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ ಓಡಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ.
Tamil Nadu Father pleads with daughter to not go with boyfriend
ಮಗಳ ಕಾಲಿಗೆ ಬಿದ್ದು ಅಂಗಲಾಚುತ್ತಿರುವ ತಂದೆ
Updated on

ಚೆನ್ನೈ: ಅವನು ಸರಿಯಿಲ್ಲ.. ನಿನ್ನ ದುಡಿಮೆ ಮೇಲೆ ಬದುಕುತ್ತಾನೆ..ನಿನ್ನ ಸುಖವಾಗಿ ನೋಡಿಕೊಳ್ಳಲ್ಲ.. ಕಾಲಿಗೆ ಬೇಕಾದರೂ ಬೀಳುತ್ತೇನೆ.. ಹೋಗಬೇಡಮ್ಮ.. ಇದು ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳಿಗೆ ಅಸಾಹಯಕ ತಂದೆಯೋರ್ವ ಅಂಗಲಾಚುತ್ತಿರುವ ಪರಿ..

ಹೌದು.. ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ ಓಡಿ ಹೋಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರಂಭದಲ್ಲಿ ಎಲ್ಲವೂ ಸರಿಇದ್ದರೂ ಸಂಸಾರ ಎಂದು ಬಂದಾಗ ನಾನಾ ರೀತಿಯ ಕಷ್ಟ ಪಡುತ್ತಾರೆ. ಆ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದವರು ಸಕ್ಸಸ್ ಫುಲ್ ಜೋಡಿಯಾದರೆ, ಆ ಕಷ್ಟಗಳನ್ನು ಎದುರಿಸಲಾಗದೇ ಕೆಲವರು ದೂರಾಗುತ್ತಾರೆ. ಆದರೆ ಈ ಹಂತದಲ್ಲಿ ಮಕ್ಕಳ ಕಳೆದುಕೊಂಡು ಕೊರಗುವವರು ಮಾತ್ರ ಪೋಷಕರು.

ಅಂತಹುದೇ ಒಂದು ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು, ನಮ್ಮನ್ನ ಬಿಟ್‌ ಹೋಗ್ಬೇಡ ಮಗಳೇ ಎಂದು ತಂದೆಯೋರ್ವ ಗೋಗರೆದಿದ್ದಾರೆ. ಯುವತಿಯೊಬ್ಬಳು ನಡು ರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ್ದಾಳೆ.

Tamil Nadu Father pleads with daughter to not go with boyfriend
ಪತಿಯ ತಲೆ, ಕೈಗಳು ಕಟ್, ಕಾಲು ಮುರಿತ; ಮುಸ್ಕಾನ್ ರಸ್ತೋಗಿ ಕ್ರೌರ್ಯ ಶವಪರೀಕ್ಷೆಯಲ್ಲಿ ಬಹಿರಂಗ!

ಆ ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್‌ ಹೋಗ್ಬೇಡ ಮಗಳೇ ಎಂದು ಗೋಗರೆದಿದ್ದಾರೆ. ಇಲ್ಲಿ ಅಪ್ಪ ತನಗೆ ಮಗಳು ಬೇಕೆಂದು ಬಯಸಿದರೆ, ಮಗಳು ಮಾತ್ರ ಹೆತ್ತು-ಹೊತ್ತು ಸಾಕಿ ಸಲಹಿದ ತಂದೆ ತಾಯಿಯನ್ನೇ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾಗಿದ್ದಾಳೆ. ಈ ನಾಟಕೀಯ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮಗಳು ತನ್ನ ಗೆಳೆಯನೊಂದಿಗೆ ನಡು ರಾತ್ರಿ ಓಡಿ ಹೋಗಲು ಯತ್ನಿಸಿದಾಗ, ಕಣ್ಣೀರಿಡುತ್ತಾ ಆಕೆಯ ಹಿಂದೆಯೇ ಬಂದ ತಂದೆ ಮಗಳ ಕಾಲಿಗೆ ಬಿದ್ದು ನಮ್ಮನ್ನು ಬಿಟ್‌ ಹೋಗ್ಬೇಡ ಮಗಳೇ ಎಂದು ಬೇಡಿಕೊಂಡಿದ್ದಾರೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ಶಾರ್ಟ್ ಫಿಲ್ಮ್ ಚಿತ್ರೀಕರಣ

ಇಷ್ಟಕ್ಕೂ ಇದು ನೈಜ ಘಟನೆಯೇ ಅಥವಾ ಸ್ಕ್ರಿಪ್ಟೆಡ್‌ ವಿಡಿಯೋನಾ? ಎಂದು ಕೆಲವರು ಪ್ರಶ್ನೆಗಳನ್ನು ಎತ್ತಿದ್ದು, ಇದಕ್ಕೆ ಉತ್ತರ ಇದೊಂದು ಸ್ಕ್ರಿಪ್ಟೆಡ್‌ ವಿಡಿಯೋ.. ಹೌದು.. ತಮಿಳುನಾಡಿನಲ್ಲಿ ನಡೆದ ಘಟನೆಯ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಶಾರ್ಟ್‌ ಫಿಲ್ಮ್‌ ಎಂಬುದು ತಿಳಿದು ಬಂದಿದೆ. ಈ ಕುರಿತ ವಿಡಿಯೋವನ್ನು UttarandhraNow ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಮಾರ್ಚ್‌ 22 ರಂದು ಶೇರ್‌ ಮಾಡಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನಿಜವಲ್ಲ, ಕಿರು ಚಿತ್ರವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದೆ. ಇನ್ನೊಬ್ಬ ಬಳಕೆದಾರರು ʼಸಾಕಿ ಸಲುಹಿದ ತಂದೆ-ತಾಯಿಯೇ ಬೇಡವಾದರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್‌ ವಿಡಿಯೋʼ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com