Pem Wang Thongdok
ಪೆಮಾ ವಾಂಗ್ ಥೋಂಗ್ಡಾಕ್

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ, ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿದೆ. ಇದು ಸ್ವಯಂ-ಸ್ಪಷ್ಟ ಹಾಗೂ ಸತ್ಯ. ಚೀನಾದ ಕಡೆಯಿಂದ ಎಷ್ಟೇ ನಿರಾಕರಣೆ ಬಂದರೂ ಈ ನಿರ್ವಿವಾದದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ.
Published on

ನವದೆಹಲಿ: ಅರುಣಾಚಲ ಪ್ರದೇಶದ ಮಹಿಳೆಯನ್ನು ಚೀನಾ ಬಂಧನಕ್ಕೊಳಪಡಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗವಾಗಿದೆ ಎಂದು ಪುನರುಚ್ಛರಿಸಿದೆ.

ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರ ಇತ್ತೀಚಿನ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ, ಎಂದಿಗೂ ಬೇರ್ಪಡಿಸಲಾಗದ ಭಾಗವಾಗಿದೆ. ಇದು ಸ್ವಯಂ-ಸ್ಪಷ್ಟ ಹಾಗೂ ಸತ್ಯ. ಚೀನಾದ ಕಡೆಯಿಂದ ಎಷ್ಟೇ ನಿರಾಕರಣೆ ಬಂದರೂ ಈ ನಿರ್ವಿವಾದದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಚೀನಾದ ಅಧಿಕಾರಿಗಳ ವಿರುದ್ಧ ನವದೆಹಲಿಯಲ್ಲಿರುವ ಕಚೇರಿಗೆ ಬಲವಾದ ಪ್ರತಿಭಟನೆ ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಕಾನೂನುಬದ್ಧವಾಗಿ ಮಾನ್ಯ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಸಾಗುತ್ತಿದ್ದ ಪ್ರಯಾಣಿಕರ ನಡವಳಿಕೆ ಸಮರ್ಥಿಸಲು ಚೀನಾ ಅಧಿಕಾರಿಗಳು ವಿಫಲರಾಗಿದ್ದಾರೆಂದು ಹೇಳಿದ್ದಾರೆ.

ಚೀನಾದ ಕ್ರಮಗಳು ಸಮರ್ಥನೀಯವಲ್ಲ. ಅಂತಾರಾಷ್ಟ್ರೀಯ ವಿಮಾನಯಾನ ಶಿಷ್ಟಾಚಾರವನ್ನ ನೇರವಾಗಿ ಉಲ್ಲಂಘಿಸಿದೆ. ಈ ಬಗ್ಗೆ ಇನ್ನೂ ವಿವರಣೆ ಕೊಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.

Pem Wang Thongdok
ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ನಾವು ಎಂದಿಗೂ ಒಪ್ಪಿಕೊಂಡಿಲ್ಲ, ಅದು ನಮ್ಮ ಪ್ರದೇಶ: ಚೀನಾ

ಸಾಮಾನ್ಯವಾಗಿ ಎಲ್ಲಾ ದೇಶಗಳ ನಾಗರಿಕರಿಗೆ 24 ಗಂಟೆಗಳವರೆಗೆ ವೀಸಾ-ಮುಕ್ತ ಸಾರಿಗೆಯನ್ನ ಅನುಮತಿಸುತ್ತದೆ. ಆದಾಗ್ಯೂ, ಈ ಪ್ರಕರಣದಲ್ಲಿ, ಅಧಿಕಾರಿಗಳು ವಿವರಿಸಲಾಗದಂತೆ ಪ್ರಯಾಣಿಕರ ಜನ್ಮಸ್ಥಳವಾದ ಅರುಣಾಚಲ ಪ್ರದೇಶವನ್ನ ಗುರಿಯಾಗಿಸಿಕೊಂಡು, ಅದು ಚೀನಾಕ್ಕೆ ಸೇರಿದ್ದು ಎಂದು ಹೇಳಿಕೊಂಡು, ಅವರ ಭಾರತೀಯ ಪಾಸ್‌ಪೋರ್ಟ್ ಅನ್ನು ʻಅಮಾನ್ಯʼ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಚೀನಾ ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಒತ್ತಿ ಹೇಳಿದ್ದಾರೆ.

ಇದಕ್ಕೂ ಮೊದಲು, ಶಾಂಘೈ ವಿಮಾನ ನಿಲ್ದಾಣದಲ್ಲಿ ಭಾರತೀಯ ಮಹಿಳೆಯೊಬ್ಬರಿಗೆ ಚೀನಾದ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳನ್ನು ಚೀನಾ ನಿರಾಕರಿಸಿತ್ತು.

ಶಾಂಗ್ಸ್ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಮ್ಮ ಪಾಸ್‌ಪೋರ್ಟ್ ಅನ್ನು ಪರಿಗಣಿಸಲು ನಿರಾಕರಿಸಿ 18 ತಾಸು ವಶಕ್ಕೆ ಪಡೆದಿದ್ದರು ಎಂದು ಬ್ರಿಟನ್‌ನಲ್ಲಿ ನೆಲಸಿರುವ ಅರುಣಾಚಲ ಪ್ರದೇಶದ ಪೆಮಾ ವಾಂಗ್‌ಮ್ ತೊಂಗ್‌ಡಾಕ್ ಎಂಬವರು ಸೋಮವಾರ ಆರೋಪಿಸಿದ್ದರು.

ಜನ್ಮಸ್ಥಳವನ್ನು ಅರುಣಾಚಲ ಪ್ರದೇಶ ಎಂದು ದಾಖಲಿಸಲಾಗಿದೆ. ಹೀಗಾಗಿ ಪಾಸ್‌ಪೋರ್ಟ್ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ಅರುಣಾಚಲ ಪ್ರದೇಶ ಚೀನಾದ ಭಾಗ ಎಂದು ಹೇಳಿದ ಅಧಿಕಾರಿಗಳು. ಅದನ್ನೇ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಯಾವುದೇ ವಿವರಣೆ ನೀಡದೆ 18 ತಾಸು ವಶಕ್ಕೆ ಪಡೆದಿದ್ದರು ಎಂದು ‘ಎಕ್ಸ್’ನಲ್ಲಿ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೂ ನಿಂಗ್ ಅವರು, ಮಹಿಳೆ ಆರೋಪಿಸಿದಂತೆ ಯಾವುದೇ ಬಲವಂತದ ಕ್ರಮ, ಬಂಧನ ಅಥವಾ ಶೋಷಣೆ ನಡೆದಿಲ್ಲ. ಚೀನಾದ ವಲಸೆ ಅಧಿಕಾರಿಗಳು ಕಾನೂನು ಮತ್ತು ನಿಯಮಗಳ ಪ್ರಕಾರವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆ ಮಹಿಳೆಯ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನ ರಕ್ಷಿಸಿದ್ದಾರೆ ಎಂಬುದಾಗಿ ನಾವು ತಿಳಿದುಕೊಂಡಿದ್ದೇವೆ. ವಿಮಾನಯಾನ ಸಂಸ್ಥೆಯು ಸಂಬಂಧಪಟ್ಟ ವ್ಯಕ್ತಿಗೆ ವಿಶ್ರಾಂತಿ ಪಡೆಯಲು ಸ್ಥಳ, ಪಾನೀಯ ಮತ್ತು ಆಹಾರ ಒದಗಿಸಿದೆ ಎಂದು ತಿಳಿಸಿದ್ದರು.

Pem Wang Thongdok
ಅರುಣಾಚಲ ಪ್ರದೇಶ ಚೀನಾದ ಭಾಗ: ಶಾಂಘೈ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಭಾರತೀಯ ಮಹಿಳೆಗೆ 'ಕಿರುಕುಳ'

ಝಾಂಗ್‌ನಾನ್ ಚೀನಾಕ್ಕೆ ಸೇರಿದ ಪ್ರದೇಶ ಭಾರತವು ಆಕ್ರಮವಾಗಿ ವಶಪಡಿಸಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಚೀನಾ ಯಾವುದೇ ಮಾನ್ಯತೆ ನೀಡುವುದಿಲ್ಲʼ ಎಂದು ಹೇಳಿದ್ದರು.

ಘಟನೆಗೆ ಪ್ರತಿಕ್ರಿಯಿಸಿದ್ದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು, ಈ ಘಟನೆಯಿಂದ "ತೀವ್ರ ಆಘಾತ" ಉಂಟಾಗಿದೆ. ಇದು "ಅಂತರರಾಷ್ಟ್ರೀಯ ಮಾನದಂಡಗಳ ಉಲ್ಲಂಘನೆ ಮತ್ತು ಭಾರತೀಯ ನಾಗರಿಕರ ಘನತೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶದ ಹೆಮ್ಮೆಯ ಭಾರತೀಯ ಪ್ರಜೆ ಶ್ರೀಮತಿ ಪ್ರೇಮಾ ವಾಂಗ್ಜೋಮ್ ಥೋಂಗ್‌ಡಾಕ್ ಅವರನ್ನು ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಚೀನಾದ ವಲಸೆ ಅಧಿಕಾರಿಗಳು ನಡೆಸಿಕೊಂಡ ಸ್ವೀಕಾರಾರ್ಹವಲ್ಲದ ವರ್ತನೆಯಿಂದ ನಾನು ತೀವ್ರವಾಗಿ ಆಘಾತಕ್ಕೊಳಗಾಗಿದ್ದೇನೆ. ಮಾನ್ಯ ಭಾರತೀಯ ಪಾಸ್‌ಪೋರ್ಟ್ ಹೊಂದಿದ್ದರೂ ಮಹಿಳೆಗೆ ಅವಮಾನ ಮತ್ತು ಜನಾಂಗೀಯ ಅಪಹಾಸ್ಯಕ್ಕೆ ಒಳಗಾದ ಘಟನೆ ಭಯಾನಕವಾಗಿದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವಾಗಲೂ ಇರುತ್ತದೆ.

ಅಂತಹ ನಡವಳಿಕೆಯು ಅಂತರರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುತ್ತದೆ. ಇದು ನಮ್ಮ ನಾಗರಿಕರ ಘನತೆಗೆ ಮಾಡಿದ ಅವಮಾನ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಭಾರತದ ವಿದೇಶಾಂಗ ಸಚಿವಾಲಯವು ಈ ವಿಷಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com