ಭಾರತದಲ್ಲಿ ಇನ್ನೂ ಎರಡು ತಿಂಗಳಿಗೆ ಆಗುವಷ್ಟು ಕಚ್ಚಾ ತೈಲ ಇದೆ, ಆದರೆ...: ಬೆಲೆ ಏರಿಕೆಗೆ ಕೇಂದ್ರ ಪೀಠಿಕೆ?

"ನಮ್ಮ ಸಂಸ್ಕರಣಾಗಾರಗಳು ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಿಟೇಲ್ ಔಟ್ಲೆಟ್ ಗಳಲ್ಲೂ ಯಾವುದೇ ಕೊರತೆ ಇರುವ ಬಗ್ಗೆ ವರದಿಯಾಗಿಲ್ಲ" ಎಂದು ಹೇಳಿದ್ದಾರೆ.
India has two months of crude reserves, no fuel shortage: Centre
ಪೆಟ್ರೋಲ್ ಗಾಗಿ ಕಾಯುತ್ತಿರುವ ಬೈಕ್ ಸವಾರರು
Updated on

ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ವಾಹನ ಸವಾರರಿಗೆ ಗುಡ್‌ ನ್ಯೂಸ್‌ ನೀಡಿದ್ದು, ಭಾರತದಲ್ಲಿ ಕಚ್ಚಾ ತೈಲ ದಾಸ್ತಾನು ಸಾಕಷ್ಟಿದೆ. ಸರ್ಕಾರವು ಮುಂದಿನ ಎರಡು ತಿಂಗಳಿಗೆ ಆಗುವಷ್ಟು ತೈಲ ಸರಬರಾಜು ಮಾಡಿಕೊಂಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಇಂದು ನಡೆದ ಅಂತರ-ಸಚಿವಾಲಯ ಸಭೆಯಲ್ಲಿ ತಿಳಿಸಿದ್ದಾರೆ.

ಇಂಧನ ಪೂರೈಕೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿದ ಶರ್ಮಾ ಅವರು, "ನಮ್ಮ ಸಂಸ್ಕರಣಾಗಾರಗಳು ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಿಟೇಲ್ ಔಟ್ಲೆಟ್ ಗಳಲ್ಲೂ ಯಾವುದೇ ಕೊರತೆ ಇರುವ ಬಗ್ಗೆ ವರದಿಯಾಗಿಲ್ಲ" ಎಂದು ಹೇಳಿದ್ದಾರೆ.

ಜಾಗತಿಕ ಬೆಲೆ ಪ್ರವೃತ್ತಿಗಳನ್ನು ಎತ್ತಿ ತೋರಿಸಿದ ಅವರು, "ಸುಮಾರು ಎರಡು ತಿಂಗಳ ಹಿಂದೆ, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 70 ಡಾಲರ್ ನಲ್ಲಿ ವಹಿವಾಟು ನಡೆಸುತ್ತಿತ್ತು ಮತ್ತು ಇಂದು ಅದು ಬ್ಯಾರೆಲ್‌ಗೆ 100 ಡಾಲರ್ ದಾಟಿದೆ." ಈ ತೀವ್ರ ಏರಿಕೆಯ ಹೊರತಾಗಿಯೂ, "ದೇಶೀಯ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ" ಎಂದು ಒತ್ತಿ ಹೇಳಿದರು.

India has two months of crude reserves, no fuel shortage: Centre
ಪ್ರೀಮಿಯಂ ಪೆಟ್ರೋಲ್ ದರ, ಜೆಟ್ ಇಂಧನ ಬೆಲೆ ಏರಿಕೆ; ದೇಶೀಯ ಏರ್ ಲೈನ್ಸ್ ಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ

"ಏಪ್ರಿಲ್ 6, 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿಲ್ಲ ಮತ್ತು ಮಾರ್ಚ್ 2024 ರಲ್ಲಿ, ಬೆಲೆಗಳನ್ನು 2 ರೂ.ಗಳಷ್ಟು ಕಡಿಮೆ ಮಾಡಲಾಗಿದೆ" ಎಂದು ಮಾಹಿತಿ ನೀಡುವ ಮೂಲಕ ಕೇಂದ್ರ ಸರ್ಕಾರ ಶೀಘ್ರದಲ್ಲೇ ಬೆಲೆ ಏರಿಕೆಗೆ ಪೀಠಿಕೆ ಹಾಕಿದೆ.

"ಅಂತರರಾಷ್ಟ್ರೀಯ ಬೆಲೆ ಏರಿಳಿತಗಳಿಂದ ದೇಶೀಯ ಗ್ರಾಹಕರನ್ನು ರಕ್ಷಿಸಲು, ಬೆಲೆಗಳಲ್ಲಿ ಯಾವುದೇ ಏರಿಕೆಯಾಗದಂತೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ" ಎಂದು ಶರ್ಮಾ ಹೇಳಿದರು. ಆದಾಗ್ಯೂ, "ಬೆಲೆಗಳನ್ನು ಕಾಯ್ದುಕೊಳ್ಳಲಾಗಿದೆ, ಇದರ ಪರಿಣಾಮವಾಗಿ ನಮ್ಮ ತೈಲ ಮಾರುಕಟ್ಟೆ ಕಂಪನಿಗಳಿಗೆ(OMC ಗಳು) ಪೆಟ್ರೋಲ್ ಮತ್ತು ಡೀಸೆಲ್ ಎರಡರ ಮೇಲೂ ಕಡಿಮೆ ಚೇತರಿಕೆ ಕಂಡುಬಂದಿದೆ" ಎಂದು ಅವರು ಒಪ್ಪಿಕೊಂಡರು.

"ದೇಶೀಯ ಮಾರುಕಟ್ಟೆಯಲ್ಲಿ ATF ಮತ್ತು ಡೀಸೆಲ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರ ರಫ್ತು ಸುಂಕವನ್ನು ವಿಧಿಸಿದೆ" ಎಂದು ಅವರು ಹೇಳಿದರು.

India has two months of crude reserves, no fuel shortage: Centre
Video: ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆದ ಯುದ್ಧ; LPGಗಾಗಿ ಬೆಂಗಳೂರಿನಲ್ಲಿ ಕಿಲೋಮೀಟರ್‌ಗಟ್ಟಲೇ ಕ್ಯೂ!

"ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ ಮತ್ತು ಎಲ್ಲಾ ನಾಗರಿಕರು ದಯವಿಟ್ಟು ಪ್ಯಾನಿಕ್ ಆಗಿ ಹೆಚ್ಚು ಖರೀದಿಯನ್ನು ತಪ್ಪಿಸಬೇಕು" ಎಂದು ಶರ್ಮಾ ಮನವಿ ಮಾಡಿದರು.

ನೈಸರ್ಗಿಕ ಅನಿಲ ಪೂರೈಕೆಯ ಕುರಿತು ಮಾತನಾಡಿದ ಶರ್ಮಾ ಅವರು, "LPG ಮತ್ತು CNG ಸಾಗಣೆಗೆ ಶೇ. 100 ರಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗಿದೆ" ಎಂದು ಹೇಳಿದರು.

"ಮಾರ್ಚ್‌ನಲ್ಲಿ ಸುಮಾರು 325,000 ಸಂಪರ್ಕಗಳಿಗೆ ಅನಿಲ ಸರಬರಾಜು ಮಾಡಲಾಗಿದೆ, 285,000 ಹೊಸ ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು 350,000 ಹೊಸ ಸಂಪರ್ಕಗಳಿಗಾಗಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ" ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com