ಎಂ.ಎಫ್ ಹುಸೇನ್ 'ಗ್ರಾಮಯಾತ್ರ' ಹಿಂದಿಕ್ಕಿದ ರಾಜಾ ರವಿ ವರ್ಮ ಕಲಾಕೃತಿ; 167 ಕೋಟಿಗೆ ಹರಾಜು!

ಚಿತ್ರ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ 167 ಕೋಟಿ ರುಪಾಯಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.
Raja Ravi Varma's ‘Yashoda and Krishna’
ರಾಜಾ ರವಿ ವರ್ಮಾ ಕಲಾಕೃತಿ
Updated on

1890 ರಲ್ಲಿ ರಾಜಾ ರವಿವರ್ಮ ಅವರು ರಚಿಸಿದ್ದ 'ಯಶೋದಾ ಮತ್ತು ಕೃಷ್ಣ'ಕಲಾಕೃತಿಯೂ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿದೆ. MF ಹುಸೇನ್ ಅವರ 'ಅನ್‌ಟೈಟಲ್ಡ್' (ಗ್ರಾಮ್ ಯಾತ್ರಾ) ಗಿಂತ ಮುಂದಿದೆ.

ಚಿತ್ರ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ 167 ಕೋಟಿ ರುಪಾಯಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.

ಬುಧವಾರ ಮುಂಬೈನಲ್ಲಿ ನಡೆದ ಸ್ಯಾಫ್ರನ್ ಆರ್ಟ್ ಹರಾಜು ಪ್ರಕ್ರಿಯೆಯಲ್ಲಿ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಂಸ್ಥಾಪಕ ಬಿಲಿಯನೆರ್ ಸೈರಸ್‌ ಪೂನವಾಲಾ ಈ ಚಿತ್ರವನ್ನು ಖರೀದಿಸಿದ್ದಾರೆ.

ಕಳೆದ ವರ್ಷ ಎಂಎಫ್‌ ಹುಸೇನ್‌ ಅವರ ಅನ್‌ಟೈಟಲ್ಡ್ (ಗ್ರಾಮ ಯಾತ್ರಾ) ಚಿತ್ರ ಹರಾಜಿನಲ್ಲಿ ₹118 ಕೋಟಿಗೆ ಮಾರಾಟವಾಗಿತ್ತು. ಅದನ್ನು ದೆಹಲಿ ಮೂಲದ ಕಿರಣ್ ನಾಡರ್ ಅವರು ಖರೀದಿಸಿದ್ದರು. ಇದು ದಾಖಲೆ ಸೃಷ್ಟಿಸಿತ್ತು. ಆದರೆ ಈಗ ರವಿವರ್ಮ ಕಲಾಕೃತಿ ₹167 ಕೋಟಿಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ.

Raja Ravi Varma's ‘Yashoda and Krishna’
ಲಕ್ಕುಂಡಿ ಭೂಗರ್ಭದ ರಹಸ್ಯ: ನೆಲದಡಿಯಲ್ಲಿರುವ 101 ದೇವಾಲಯ-101 ಬಾವಿಗಳಿಗಾಗಿ ಮುಂದುವರೆದ ಉತ್ಖನನ ಕಾರ್ಯ; ಕಲ್ಯಾಣ ಚಾಲುಕ್ಯರ ಸ್ವರ್ಣಯುಗ ಮತ್ತೆ ಹೊರಬರುತ್ತದೆಯೇ..?

ತಾಯಿ ಮತ್ತು ಮಗನ ಮಮತೆಯ ಕ್ಷಣಗಳನ್ನು ಒಳಗೊಂಡಿರುವ ಈ ಚಿತ್ರವನ್ನು ರಾಜಾ ರವಿವರ್ಮ 1890ರಲ್ಲಿ ರಚಿಸಿದ್ದರು. ಯಶೋಧಾ ಹಸುವಿನ ಬಳಿ ಕುಳಿತು ಹಾಲನ್ನು ಕರೆಯುತ್ತಿರುವಾಗ ಬಾಲ ಕೃಷ್ಣ ಹಿಂದಿನಿಂದ ಲೋಟವೊಂದನ್ನು ಹಿಡಿದು ನಿಲ್ಲುವ ದೃಶ್ಯವನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ.

ರಾಜಾ ರವಿವರ್ಮ ಅವರ ಕಲಾಕೃತಿಗಳನ್ನು ರಾಷ್ಟ್ರೀಯ ಸಂಪತ್ತು ಎಂದು ವರ್ಗೀಕರಿಸಲಾಗಿದೆ. ಆದ್ದರಿಂದ ಈ ಚಿತ್ರವನ್ನು ಭಾರತದಿಂದ ಹೊರಗೆ ಕೊಂಡೊಯ್ಯಲು ಅವಕಾಶವಿಲ್ಲ. ಇಂತಹ ಐತಿಹಾಸಿಕ ಕಲಾಕೃತಿಯನ್ನು ಸಂರಕ್ಷಿಸುವುದು ಗೌರವ ಮತ್ತು ಜವಾಬ್ದಾರಿಯಾಗಿದೆ. ಈ ರಾಷ್ಟ್ರೀಯ ಸಂಪತ್ತನ್ನು ಕಾಲಕಾಲಕ್ಕೆ ಸಾರ್ವಜನಿಕರ ವೀಕ್ಷಣೆಗೂ ಲಭ್ಯವಾಗುವಂತೆ ಮಾಡುವುದು ನನ್ನ ಗುರಿ ಎಂದು ಪೂನಾವಾಲ ಹೇಳಿದ್ದಾರೆ.

ಇದು ಭಾರತೀಯ ಕಲಾ ಮಾರುಕಟ್ಟೆಗೆ ನಿರ್ಣಾಯಕ ಕ್ಷಣವಾಗಿದೆ. ₹167.2 ಕೋಟಿಯಲ್ಲಿ, ರಾಜಾ ರವಿವರ್ಮ ಅವರ ಯಶೋದ ಮತ್ತು ಕೃಷ್ಣ - ಮಡೋನಾ ಮತ್ತು ಕ್ರಿಸ್ತನನ್ನು ಅಥವಾ ಯಾವುದೇ ತಾಯಿ ಮತ್ತು ಮಗುವನ್ನು ನೆನಪಿಸುವ ಸಾರ್ವತ್ರಿಕ ವಿಷಯವಾಗಿದೆ. ಭಾರತೀಯ ಕಲೆಯ ಮೋನಾಲಿಸಾ - ಹೊಸ ವಿಶ್ವ ದಾಖಲೆಯನ್ನು ಸಾಧಿಸಿತ್ತು ಎಂದು ದೆಹಲಿ ಆರ್ಟ್ ಗ್ಯಾಲರಿ ಸಿಇಒ ಮತ್ತು ಎಂಡಿ ಆಹಿಶ್ ಆನಂದ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com