ಮೂರನೇದು ಹೆಣ್ಣಾಗಬಹುದೆಂಬ ಅನುಮಾನದಿಂದ ಗರ್ಭಿಣಿ ಪತ್ನಿ, ಮಕ್ಕಳಿಬ್ಬರನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಂದೆ!

ಹನಮಕೊಂಡ ಜಿಲ್ಲೆಯಲ್ಲಿ ಆಘಾತಕಾರಿ ಅಪರಾಧ ಬೆಳಕಿಗೆ ಬಂದಿದ್ದು, ಪತ್ನಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಬಹುದೆಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.
ಪತ್ನಿ ಮತ್ತು ಮಕ್ಕಳನ್ನು ಕೊಂದ ಅಜರುದ್ದೀನ್
ಪತ್ನಿ ಮತ್ತು ಮಕ್ಕಳನ್ನು ಕೊಂದ ಅಜರುದ್ದೀನ್
Updated on

ತೆಲಂಗಾಣ: ಹನಮಕೊಂಡ ಜಿಲ್ಲೆಯಲ್ಲಿ ಆಘಾತಕಾರಿ ಅಪರಾಧ ಬೆಳಕಿಗೆ ಬಂದಿದ್ದು, ಪತ್ನಿ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಬಹುದೆಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.

ಆರೋಪಿ ಅಜರುದ್ದೀನ್ ಎಂದು ಗುರುತಿಸಲಾಗಿದ್ದು, ಐನವೋಲು ಮಂಡಲದ ಪುನ್ನೇಲ ಗ್ರಾಮದ ಹೊರವಲಯದಲ್ಲಿ ತನ್ನ ಪತ್ನಿ ಫರ್ಹತ್ (26) ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಉಮೇರಾ (8) ಮತ್ತು ಆಯೇಷಾ (6) ಅವರೊಂದಿಗೆ ವಾಸಿಸುತ್ತಿದ್ದನು. ಅಲ್ಲಿ ಈಜುಕೊಳ ನಡೆಸುತ್ತಿದ್ದನು. ಫರ್ಹತ್ ಈ ಹಿಂದೆ ಎರಡು ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೂರನೇ ಬಾರಿಗೆ ಫರ್ಹತ್ ಗರ್ಭಿಣಿಯಾಗಿದ್ದು ಬಾರಿಯೂ ಹುಟ್ಟಲಿರುವ ಮಗು ಹೆಣ್ಣು ಮಗುವಾಗಿರುತ್ತದೆ ಎಂಬ ಅನುಮಾನದಿಂದ ಅಜರುದ್ದೀನ್ ಅವಳನ್ನು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದನು.

ಪತ್ನಿ ಮತ್ತು ಮಕ್ಕಳನ್ನು ಕೊಂದ ಅಜರುದ್ದೀನ್
ಹುಬ್ಬಳ್ಳಿ Love Jihad ಕೇಸ್‌ಗೆ ಟ್ವಿಸ್ಟ್: Gym ಟ್ರೈನರ್ Sameer Mulla ಮೊಬೈಲ್‌ನಲ್ಲಿ ಯುವತಿಯರ ಫೋಟೋಗಳು ಪತ್ತೆ!

ನಾಲ್ಕು ವರ್ಷಗಳ ನಂತರ, ಫರ್ಹತ್ ಮತ್ತೆ ಗರ್ಭಿಣಿಯಾಗಿದ್ದು ಅದೇ ಕಾರಣಕ್ಕಾಗಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಪತ್ನಿ ಮೇಲೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಆಕೆ ನಿರಾಕರಿಸಿದ್ದಕ್ಕೆ ತನ್ನ ಹೆಂಡತಿ ಮತ್ತು ಮಕ್ಕಳನ್ನು ತಾನು ನಿರ್ವಹಿಸುತ್ತಿದ್ದ ಈಜುಕೊಳಕ್ಕೆ ಕರೆದೊಯ್ದು, ನೀರಿಗೆ ತಳ್ಳಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಈ ಘಟನೆಯನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದನು. ಆದಾಗ್ಯೂ, ಫರ್ಹತ್‌ನ ತಂದೆಗೆ ಅಜರುದ್ದೀನ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆತನ ವಿಚಾರಣೆ ನಡೆದಿಗಾ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com