ನನ್ನ ಯೌವ್ವನದ ದಿನಗಳ ಬಗ್ಗೆ ತಿಳಿಯಲು ನನ್ನ ಬೆಡ್‌ರೂಂನಲ್ಲಿ ಬಾಬಾ ರಾಮದೇವ್ ಬಾವಲಿಯಂತೆ ನೇತಾಡುತ್ತಿದ್ದರೇ?: ಕಂಗನಾ ರಣಾವತ್

ರಾಮ್ ದೇವ್‌ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.
Kangana ranuat and baba ramdev
ಕಂಗನಾ ರಣಾವತ್ ಮತ್ತು ಬಾಬಾ ರಾಮದೇವ್
Updated on

ನವದೆಹಲಿ: ತಮ್ಮ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು "ನನ್ನ ಮಲಗುವ ಕೋಣೆಯಲ್ಲಿ ಬಾಬಾ ರಾಮ್ ದೇವ್ ಬಾವಲಿಯಂತೆ ನೇತಾಡುತ್ತಿದ್ದರೇ ಎಂದು ನಟಿ ಹಾಗೂ ಬಿಜೆಪಿ ಸಂಸದೆ ಕಂಗಮಾ ರಣಾವತ್ ಪ್ರಶ್ನಿಸಿದ್ದಾರೆ.

ಬಾಬಾ ರಾಮದೇವ್ ನನ್ನ ಮಲಗುವ ಕೋಣೆಯಲ್ಲಿ ಬಾವಲಿಯಂತೆ ನೇತಾಡುತ್ತಿದ್ದರೇ? ಅವರು ನನ್ನ ಯೌವನದಲ್ಲಿ ನನ್ನನ್ನು ನೋಡಿದ್ದಾರೆಯೇ? ಅವರು ನಿಖರವಾಗಿ ಏನು ನೋಡಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ. ಅವರು ಏನು ನೋಡಿದ್ದಾರೆಂದು ಹೇಳಬೇಕು ಎಂದು ಅವರು ಹೇಳಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಕಂಗನಾ ಅವರು ಯೋಗ ಮತ್ತು ಆಯುರ್ವೇದದಿಂದ ವ್ಯವಹಾರಕ್ಕೆ ರಾಮದೇವ್ ಅವರ ಬದಲಾವಣೆಯನ್ನು ಪ್ರಶ್ನಿಸಿದರು, ನನಗೆ ವ್ಯಕ್ತಿತ್ವದ ಬಗ್ಗೆ ರಾಮ್‌ ದೇವ್ ಪಾಠ ಹೇಳಬಾರದು ಎಂದು ಕಂಗನಾ ಹೇಳಿದ್ದಾರೆ.

ಸನಾತನ ಸಿದ್ಧಾಂತದೊಂದಿಗೆ ಗುರುತಿಸಿಕೊಳ್ಳುವ ರಾಮ್‌ದೇವ್‌ ಅವರು ನಿಮ್ಮನ್ನು ವಿರೋಧಿಸುವ ಹಂತಕ್ಕೆ ಹೇಗೆ ಬಂದರು? ಎಂಬ ಪ್ರಶ್ನೆಗೆ ಉತ್ತರಿಸಿದ ಕಂಗನಾ, ರಾಮ್ ದೇವ್‌ ಅವರ ವ್ಯಾಪಾರ ಹಿತಾಸಕ್ತಿ ಅವರನ್ನು ಸನಾತನ ತತ್ವಶಾಸ್ತ್ರದ ಮೂಲ ಸಿದ್ಧಾಂತಗಳಿಂದ ದೂರ ಕೊಂಡೊಯ್ದಿವೆ ಎಂದು ನಾನು ನಂಬುವುದಾಗಿ ಹೇಳಿದರು.

Kangana ranuat and baba ramdev
ಆಕೆಯನ್ನು ತಡೆದವರು ಯಾರು? ಬಯಸಿದಂತ ಉಡುಪು ಧರಿಸಲಿ ಬಿಡಿ: ಕೃತಿ ಸನೋನ್‌ಗೆ ಕಂಗನಾ ರಣಾವತ್ ತಿರುಗೇಟು

ಅವರ ಸ್ವದೇಶಿ ಚಳವಳಿ ಆರಂಭವಾದಾಗ ಸರ್ಕಾರವು ಅವರಿಗೆ ಸಾಕಷ್ಟು ಪ್ರೋತ್ಸಾಹ ನೀಡಿತ್ತು. ಆದರೆ, ಅವರು ಬಂಡವಾಳಶಾಹಿಯತ್ತ ಸಾಗಿದ್ದಾರೆ ಎಂದು ನನಗೆ ಅನಿಸುತ್ತದೆ. ರಾಮದೇವ್ ಅವರು ಆಯುರ್ವೇದ, ಗಿಡಮೂಲಿಕೆಗಳು ಮತ್ತು ಯೋಗವನ್ನು ಮೀರಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ ಎಂದು ಕಂಗನಾ ಟೀಕಿಸಿದ್ದಾರೆ.

ಆಯುರ್ವೇದ, ಗಿಡಮೂಲಿಕೆಗಳು ಮತ್ತು ಯೋಗ ಕ್ಷೇತ್ರಗಳಲ್ಲಿ ಅವರಿಗೆ ದೊರೆತ ಪ್ರೋತ್ಸಾಹದಿಂದಾಗಿ ಇದೀಗ ಅವರು ಒಳಉಡುಪು ಮತ್ತು ಬನಿಯನ್‌ಗಳನ್ನು ಮಾರಾಟ ಮಾಡುವ ವ್ಯವಹಾರಕ್ಕೂ ಮುಂದಾಗಿದ್ದಾರೆ ಎಂದು ಹೇಳಿದರು. ರಾಮ್‌ದೇವ್‌ ಅವರನ್ನು ಸಂಪೂರ್ಣ ಉದ್ಯಮಿ ಎಂದು ಕರೆದ ಕಂಗನಾ, ಉದ್ಯಮಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನೀವು ಏನಾಗಿಲ್ಲವೋ ಆ ವೇಷವನ್ನು ಧರಿಸಬೇಡಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com