ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬೆನ್ನಲ್ಲೇ NDA ಸಂಸದೀಯ ಸಭೆ: ಪ್ರಧಾನಿ ಮೋದಿಗೆ ಸನ್ಮಾನ; Video

ಸಭೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ದೊರೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪ್ರಧಾನಮಂತ್ರಿಯನ್ನೂ, ಹಾಜರಿದ್ದ ಎಲ್ಲಾ ಎನ್‌ಡಿಎ ಸಂಸದರನ್ನು ಸ್ವಾಗತಿಸಿದರು.
PM Narendra Modi, Defence Minister Rajnath Singh, BJP National President Nitin Nabin and others during the NDA Parliamentary Party meeting
ದೆಹಲಿಯ ಸಂಸತ್ ಆವರಣದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಇತರರು
Updated on

ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಘೋಷಣೆಯಾದ ಬೆನ್ನಲ್ಲೇ ಇಂದು ಮಂಗಳವಾರ ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ ಆವರಣದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದರು.

ಸಭೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ದೊರೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪ್ರಧಾನಮಂತ್ರಿಯನ್ನೂ, ಹಾಜರಿದ್ದ ಎಲ್ಲಾ ಎನ್‌ಡಿಎ ಸಂಸದರನ್ನು ಸ್ವಾಗತಿಸಿದರು. ಇದು ಅಧಿವೇಶನದ ಅವಧಿಯಲ್ಲಿ ಮೈತ್ರಿಕೂಟದ ಬಲವಾದ ಏಕತೆಯನ್ನು ಎತ್ತಿ ತೋರಿಸಿತು.

ಎನ್‌ಡಿಎ ಸಂಸದರು ಸಂಸತ್ತಿನ ಎರಡೂ ಸದನಗಳಲ್ಲಿ ಬಜೆಟ್ ಅಧಿವೇಶನದ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ತಂತ್ರದ ಕುರಿತು ಚರ್ಚೆ ನಡೆಸಿದರು.

ಈ ಅಧಿವೇಶನದಲ್ಲಿ ಸರ್ಕಾರ ಕೆಲವು ಮಸೂದೆಗಳನ್ನು ತರಲು ಸಿದ್ಧವಾಗಿದೆ. ಆದ್ದರಿಂದ ತಂತ್ರದಲ್ಲಿ ಏಕತೆ ಮತ್ತು ಏಕರೂಪತೆ ಅತ್ಯಂತ ಅಗತ್ಯವಾಗಿದೆ. ನಾವು ಚರ್ಚಿಸಿ, ಈಗಿರುವಂತೆ ಬದ್ಧತೆಯಿಂದ ಮುಂದುವರಿಯಲು ನಿರ್ಧರಿಸಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಬ್ಬ ಎನ್‌ಡಿಎ ಸಂಸದರು ಹೇಳಿದರು.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತದಲ್ಲಿ ಯುವಜನತೆಗೆ ಪ್ರತಿದಿನ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದರು.

ಜಗತ್ತಿನ ಎರಡು ಅತ್ಯಂತ ಬಲಿಷ್ಠ ಪ್ರಜಾಸತ್ತಾತ್ಮಕ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಗಾಢವಾಗುತ್ತಿರುವ ಪರಿಣಾಮ ಬಹಳ ಧನಾತ್ಮಕ ಮತ್ತು ದೂರಗಾಮಿ ಆಗಲಿದೆ ಎಂದು ಅವರು ಹೇಳಿದರು.

PM Narendra Modi, Defence Minister Rajnath Singh, BJP National President Nitin Nabin and others during the NDA Parliamentary Party meeting
'ಅಪಾರ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ': ಸುಂಕ ಕಡಿತದ ನಂತರ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com