ಹಸಿರು ಅಮೋನಿಯಾ- ಮೆಥನಾಲ್‌ ಪೂರೈಕೆಗೆ ಭಾರತ-ಜಪಾನ್‌ ಒಪ್ಪಂದ!

ದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಭಾರತ ಜಪಾನ್‌ನ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.
ACME with Japan's IHI Corporation
ಜಪಾನ್‌ನ IHI ಕಾರ್ಪೊರೇಷನ್‌ನೊಂದಿಗೆ ಎಸಿಎಂಇ ಒಪ್ಪಂದ
Updated on

ನವದೆಹಲಿ: ಹಸಿರು ಹೈಡ್ರೋಜನ್‌ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ಸ್ಥಾನ ಪಡೆದಿರುವ ಭಾರತ ಇದೀಗ ಜಪಾನ್‌ನೊಂದಿಗೆ ಹಸಿರು ಅಮೋನಿಯಾ ಮತ್ತು ಮೆಥನಾಲ್ ಪೂರೈಕೆಗೆ ಒಪ್ಪಂದ ಮಾಡಿಕೊಂಡಿದೆ.

ದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರ ಸಮ್ಮುಖದಲ್ಲಿ ಭಾರತ ಜಪಾನ್‌ನ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

ಜಪಾನಿನ ಪ್ರಮುಖ ಕಂಪನಿಗಳಾದ IHI ಕಾರ್ಪೊರೇಷನ್ ಫಾರ್ ಗ್ರೀನ್ ಅಮೋನಿಯಾ ಮತ್ತು ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಕಂಪನಿ, ಇಂಕ್. (MGC) ನೊಂದಿಗೆ ಗ್ರೀನ್ ಮೆಥನಾಲ್‌ಗಾಗಿ ದೀರ್ಘಾವಧಿಯ ಆಫ್‌ಟೇಕ್ ಒಪ್ಪಂದವನ್ನು ಪಡೆದುಕೊಂಡಿದೆ.

ಜಪಾನ್‌ನ IHI ಕಾರ್ಪೊರೇಷನ್‌ನೊಂದಿಗೆ ವರ್ಷಕ್ಕೆ ಒಟ್ಟು 4,05,000 ಟನ್‌ಗಳ (405 kTPA) ಹಸಿರು ಅಮೋನಿಯಾ ಪೂರೈಕೆಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, ACME ಕ್ಲೀನ್‌ಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಪ್ಯಾರದೀಪ್ ಸೌಲಭ್ಯದಿಂದ ವರ್ಷಕ್ಕೆ 1,00,000 ಟನ್‌ಗಳ (100 kTPA) ಹಸಿರು ಮೆಥನಾಲ್ ಪೂರೈಕೆಗಾಗಿ ಮಿತ್ಸುಬಿಷಿ ಗ್ಯಾಸ್ ಕೆಮಿಕಲ್ ಕಂಪನಿ, ಇಂಕ್‌ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌, ಸೌರಶಕ್ತಿ ನಿಗಮ (SECI) ನಡೆಸುವ ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಉತ್ಪಾದನೆಗೆ ಆರ್ಥಿಕ ನೆರವು ನೀಡುತ್ತದೆ. SIGHT ಕಾರ್ಯಕ್ರಮದಡಿ ACME ಗ್ರೂಪ್‌ಗೆ ವರ್ಷಕ್ಕೆ 3,70,000 ಟನ್‌ಗಳ (370 kTPA) ಉತ್ಪಾದನಾ ಸಾಮರ್ಥ್ಯದ ಗುರಿ ನೀಡಲಾಗಿದೆ. ಇದು ಈ ರಫ್ತು-ಆಧಾರಿತ ಒಪ್ಪಂದಗಳಿಗೆ ಅಡಿಪಾಯ ಹಾಕಿದೆ.

ಈ ವೇಳೆ ಸಚಿವ ಪ್ರಲ್ಹಾದ ಜೋಶಿ, ʼACME-IHI ಗ್ರೀನ್ ಹೈಡ್ರೋಜನ್ ಯೋಜನೆಗೆ ಜಪಾನ್ ತನ್ನ CfD ಸಬ್ಸಿಡಿ ಬೆಂಬಲ ವಿಸ್ತರಿಸುವ ನಿರ್ಧಾರವನ್ನು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಬಲವಾದ ಮತ್ತು ಭವಿಷ್ಯಕ್ಕೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.

ಹಸಿರು ಇಂಧನ ವಲಯದಲ್ಲಿ ಭಾರತ ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುತ್ತಿದ್ದು, ಅಂತರಾಷ್ಟ್ರೀಯ ಪಾಲುದಾರಿಕೆಗಳನ್ನು ನಿರ್ಮಿಸುವ ಜತೆಗೆ ಭಾರತೀಯ ಹಸಿರು ಹೈಡ್ರೋಜನ್ ಮತ್ತದರ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತಿದೆ ಎಂದು ಪ್ರತಿಪಾದಿಸಿದರು. ಟಕೆಹಿಕೊ ಮಾಟ್ಸುವೊ, ಉಪಾಧ್ಯಕ್ಷರು ಜಪಾನ್ ಸರ್ಕಾರದ ಸಚಿವೆ METI ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಈ ಒಪ್ಪಂದ ಶುದ್ಧ ಇಂಧನದಲ್ಲಿ ಭಾರತ-ಜಪಾನ್ ಸಹಕಾರವನ್ನು ಮತ್ತಷ್ಟು ಆಳಗೊಳಿಸುತ್ತದೆ ಎಂದರು.

ACME with Japan's IHI Corporation
ಮುಂದಿನ ಐದು ವರ್ಷ ಕರ್ನಾಟಕದಲ್ಲಿ 25,000 ಮೆಗಾವಾಟ್ ಹಸಿರು ಇಂಧನ ಉತ್ಪಾದನೆ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಭಾರತದ ಹಸಿರು ಇಂಧನ ವಲಯ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತಿದೆ. ಹಸಿರು ಅಮೋನಿಯಾ ಮತ್ತು ಹಸಿರು ಮೆಥನಾಲ್‌ಗಾಗಿ ಜಪಾನ್‌ನೊಂದಿಗೆ ಮಾರುಕಟ್ಟೆ ಸಂಪರ್ಕವನ್ನು ಸೃಷ್ಟಿಸಿದೆ. ನಮ್ಮ ಹಸಿರು ಹೈಡ್ರೋಜನ್ ವಲಯವು ವಾಣಿಜ್ಯಿಕವಾಗಿ ಪ್ರಬುದ್ಧವಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com