200 ಕೋ ರೂ.ಸುಲಿಗೆ ಪ್ರಕರಣ: ಜಾಕ್ವೆಲಿನ್, ಸುಖೇಶ್ ವಿರುದ್ಧ ಚಾರ್ಜ್ ಶೀಟ್ ದಾಖಲು; 'ರಾರಾ ರಕ್ಕಮ್'ಗೆ ಸಂಕಷ್ಟ!

ಮೇ 30 ರಂದು, ಜಾಕ್ವೆಲಿನ್ ಫರ್ನಾಂಡಿಸ್, ಕಿಂಗ್‌ಪಿನ್ ಸುಕೇಶ್ ಚಂದ್ರಶೇಖರ್ ಸೇರಿದಂತೆ ಒಟ್ಟು 17 ಜನರ ವಿರುದ್ಧ ಶಾರ್ಜ್​ಶೀಟ್​ ದಾಖಲಿಸಲು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು.
Court formally frames charges against Jacqueline Fernandez, Sukesh in PMLA case
ಸುಕೇಶ್ ಚಂದ್ರಶೇಖರ್ ಮತ್ತು ನಟಿ ಜಾಕ್ವೆಲಿನ್ ಫರ್ನಾಂಡಿಸ್
Updated on

ನವದೆಹಲಿ: 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 'ರಾರಾ ರಕ್ಕಮ್ಮ' ಖ್ಯಾತಿಯ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಈಗ ಕಾನೂನಿನ ಸಂಕೋಲೆ ಮತ್ತಷ್ಟು ಬಿಗಿಯಾಗಿದೆ.

ದೆಹಲಿ ನ್ಯಾಯಾಲಯವು ಬುಧವಾರ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಬಹು ಕೋಟಿ ವಂಚಕ ಸುಖೇಶ್ ಚಂದ್ರಶೇಖರ್ ಮತ್ತು ಇತರ 15 ಜನರ ವಿರುದ್ಧ 200 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಧಿಕೃತವಾಗಿ ಚಾರ್ಜ್ ಶೀಟ್ ದಾಖಲಿಸಿದೆ.

ದೆಹಲಿ ಪೊಲೀಸರ ವಿಶೇಷ ಘಟಕ ದಾಖಲಿಸಿದ ಪ್ರತ್ಯೇಕ ಪ್ರಕರಣದಲ್ಲಿ, ನ್ಯಾಯಾಲಯವು ಸುಕೇಶ್ ಚಂದ್ರಶೇಖರ್ ಮತ್ತು ಇತರ 20 ಜನರ ವಿರುದ್ಧ ಕಠಿಣ MCOCA ನಿಬಂಧನೆ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಆರೋಪಗಳನ್ನು ಹೊರಿಸಿದೆ.

Court formally frames charges against Jacqueline Fernandez, Sukesh in PMLA case
Money laundering case: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು 'ಸುಪ್ರೀಂ' ನಕಾರ

ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಮತ್ತು ಇತರ ಹಲವರು ಬುಧವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದರು.

ಮೇ 30 ರಂದು, ಜಾಕ್ವೆಲಿನ್ ಫರ್ನಾಂಡಿಸ್, ಕಿಂಗ್‌ಪಿನ್ ಸುಕೇಶ್ ಚಂದ್ರಶೇಖರ್ ಸೇರಿದಂತೆ ಒಟ್ಟು 17 ಜನರ ವಿರುದ್ಧ ಶಾರ್ಜ್​ಶೀಟ್​ ದಾಖಲಿಸಲು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು.

ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ, ಜಾಕ್ವೆಲಿನ್ ಫರ್ನಾಂಡಿಸ್ ಕೇವಲ ಉಡುಗೊರೆ ಪಡೆದ ನಟಿಯಲ್ಲ, ಬದಲಿಗೆ ಸುಕೇಶ್ ಮಾಡಿದ್ದ ಕಳ್ಳತನದ ದುಡ್ಡನ್ನು ಮರೆಮಾಚಲು ಆತನ ಜೊತೆ ಕೈಜೋಡಿಸಿದ್ದರು ಎನ್ನುವುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಹೇಳಿದ್ದರು.

ಪ್ರಾಥಮಿಕ ದಾಖಲೆಗಳನ್ನು ನೋಡಿದರೆ ಜಾಕ್ವೆಲಿನ್ ಫರ್ನಾಂಡಿಸ್ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 3 ರ ಅಡಿಯಲ್ಲಿ ತಪ್ಪು ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಸೆಕ್ಷನ್ 4 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಡ್ಜ್ ಪ್ರಶಾಂತ್ ಶರ್ಮಾ ಮೇ 30 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com