PaK ಮಧ್ಯಸ್ಥಿಕೆಯಲ್ಲಿ US-Iran ಒಪ್ಪಂದ: ಮೋದಿ ವಿದೇಶಾಂಗ ನೀತಿಗೆ ಹಿನ್ನಡೆ; ಕಾಂಗ್ರೆಸ್ ವಾಗ್ದಾಳಿ

ಅಮೆರಿಕಾ-ಇರಾನ್ ಒಪ್ಪಂದಕ್ಕೆ ‘ಇಸ್ಲಾಮಾಬಾದ್ MoU’ ಎಂದು ಹೆಸರು ಬಂದಿರುವುದು ಪಾಕಿಸ್ತಾನದ ಹೊಸ ಪ್ರಾದೇಶಿಕ ಸ್ಥಾನಮಾನ ಮತ್ತು ಜಾಗತಿಕ ಪ್ರಭಾವವನ್ನು ತೋರಿಸುತ್ತದೆ.
Jairam Ramesh
ಜೈರಾಮ್ ರಮೇಶ್
Updated on

ನವದೆಹಲಿ: ಅಮೆರಿಕಾ-ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ‘ಇಸ್ಲಾಮಾಬಾದ್ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ ಎಂದು ಹೆಸರಿಡಲಾಗಿರುವುದನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಇದು ಪಾಕಿಸ್ತಾನದ ಹೆಚ್ಚುತ್ತಿರುವ ಜಾಗತಿಕ ಪ್ರಭಾವದ ಸಂಕೇತ ಎಂದು ಹೇಳಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ‘ಇಸ್ಲಾಮಾಬಾದ್ MoU’ ಎಂಬ ಹೆಸರೇ ಪಾಕಿಸ್ತಾನದ ಹೆಚ್ಚುತ್ತಿರುವ ಜಾಗತಿಕ ಪ್ರಭಾವ ಮತ್ತು ಭಾರತದ ರಾಜತಾಂತ್ರಿಕ ಹಿನ್ನಡೆಯ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.

2008ರ ಮುಂಬೈ ಉಗ್ರ ದಾಳಿಯ ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಪ್ರತ್ಯೇಕಗೊಳಿಸಿದ್ದರು. ಆದರೆ, ಇಂದು ಅಮೆರಿಕಾ-ಇರಾನ್ ಒಪ್ಪಂದಕ್ಕೆ ‘ಇಸ್ಲಾಮಾಬಾದ್ MoU’ ಎಂದು ಹೆಸರು ಬಂದಿರುವುದು ಪಾಕಿಸ್ತಾನದ ಹೊಸ ಪ್ರಾದೇಶಿಕ ಸ್ಥಾನಮಾನ ಮತ್ತು ಜಾಗತಿಕ ಪ್ರಭಾವವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಈ ಒಪ್ಪಂದವು ಸಂಪೂರ್ಣವಾಗಿ ಜಾರಿಯಾದರೆ ಮಹತ್ವದ ರಾಜತಾಂತ್ರಿಕ ಸಾಧನೆಯಾಗಬಹುದು. ಆದರೆ, ಅದು ಎರಡೂ ರಾಷ್ಟ್ರಗಳ ನಡುವೆ ‘ಮೆಮೊರಾಂಡಂ ಆಫ್ ಮಿಸ್‌ಅಂಡರ್‌ಸ್ಟ್ಯಾಂಡಿಂಗ್’ ಆಗುವ ಸಾಧ್ಯತೆಯೂ ಇದೆ. ಮುಂದಿನ 60 ದಿನಗಳು ಅತ್ಯಂತ ನಿರ್ಣಾಯಕವಾಗಲಿವೆ ಎಂದು ತಿಳಿಸಿದ್ದಾರೆ.

ಇರಾನ್ ಈ ಒಪ್ಪಂದದಿಂದ ಅನಿರೀಕ್ಷಿತ ಲಾಭಗಳನ್ನು ಗಳಿಸಿದ್ದು, ತನ್ನ ಪ್ರತಿರೋಧ ಸಾಮರ್ಥ್ಯ ಮತ್ತು ಸ್ಥೈರ್ಯವನ್ನು ಪ್ರದರ್ಶಿಸಿದೆ. ಜೊತೆಗೆ, ಇರಾನ್ ಪ್ರತಿದಾಳಿಗಳ ಹೊರೆ ಹೊತ್ತಿದ್ದ ಗಲ್ಫ್ ಸಹಕಾರ ಮಂಡಳಿ (GCC) ರಾಷ್ಟ್ರಗಳು ಈ ಒಪ್ಪಂದವನ್ನು ಎಚ್ಚರಿಕೆಯಿಂದ ಸ್ವಾಗತಿಸಿದ್ದು, ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಇದೇ ವೇಳೆ, ಬೆಂಜಮಿನ್ ನೆತನ್ಯಾಹು ಅವರಿಗೆ ಈ ಒಪ್ಪಂದವು ರಾಜತಾಂತ್ರಿಕ ಸೋಲಾಗಿದೆ ಎಂದು ಟೀಕಿಸಿದ ಅವರು, ನೆತನ್ಯಾಹು ಈಗ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಲೆಬನಾನ್, ಗಾಜಾ ಮತ್ತು ವೆಸ್ಟ್ ಬ್ಯಾಂಕ್ ವಿಷಯಗಳಲ್ಲಿ ನೆತನ್ಯಾಹು ಅವರ ಕ್ರಮಗಳಿಗೆ ಮೋದಿ ಮಾತ್ರ ಇನ್ನೂ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಮೆರಿಕಾ ಮತ್ತು ಇಸ್ರೇಲ್ ಆರಂಭಿಸಿದ್ದ ಯುದ್ಧವು ತನ್ನ ಮೂಲ ಗುರಿಗಳನ್ನು ಸಾಧಿಸಲು ವಿಫಲವಾಗಿದೆ. ಈ ಬೆಳವಣಿಗೆ ಸೇನಾ ಶಕ್ತಿಯ ಮಿತಿಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಹೇಳಿದ ಜೈರಾಮ್ ರಮೇಶ್, ಪ್ರಧಾನಿ ಮೋದಿ ಅವರ ಟ್ರಂಪ್ ಪರ ಧೋರಣೆಯನ್ನೂ ಟೀಕಿಸಿದ್ದಾರೆ.

Jairam Ramesh
ಮಧ್ಯಪ್ರಾಚ್ಯ ಸಂಘರ್ಷ ಕೊನೆಗೂ ಅಂತ್ಯ: Pak ಮಧ್ಯಸ್ಥಿಕೆಯಲ್ಲಿ US-Iran ನಡುವೆ ಶಾಂತಿ ಒಪ್ಪಂದ; ನೌಕಾ ದಿಗ್ಬಂಧನ ತೆರವು, Hormuz ಜಲಸಂಧಿ ಓಪನ್‌!

ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಅಮೆರಿಕಾ ಮತ್ತು ಇರಾನ್ ರಾಷ್ಟ್ರಾಧ್ಯಕ್ಷರು ‘ಇಸ್ಲಾಮಾಬಾದ್ ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್’ಗೆ ಸಹಿ ಹಾಕಿದ್ದು, ತಾವು ಮಧ್ಯಸ್ಥರಾಗಿ ಅದನ್ನು ಅನುಮೋದಿಸಿದ್ದಾಗಿ ಘೋಷಿಸಿದ್ದರು.

ಒಪ್ಪಂದದ ಮೊದಲ ಹಂತವಾಗಿ ಇರಾನ್ ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಿದ್ದು, ಅಮೆರಿಕಾ ತನ್ನ ನೌಕಾ ದಿಗ್ಬಂಧನವನ್ನು ಹಿಂಪಡೆಯಲಿದೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com