ರಾಹುಲ್‌ ಗಾಂಧಿ ಬಿಜೆಪಿ ಸೇರಿದ್ರೆ ಅವರನ್ನೇ ಮದುವೆ ಆಗ್ತೀನಿ ಎಂದರಾ ಕಂಗನಾ? ವೈರಲ್ ಪೋಸ್ಟ್‌ಗೆ ನಟಿ ಹೇಳಿದ್ದೇನು?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಗೆ ಸೇರಿದರೆ ನಾನು ಅವರನ್ನು "ಮದುವೆಯಾಗುತ್ತೇನೆ" ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ ಎಂದು ವರದಿಯಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
Kangana Ranaut
ಕಂಗನಾ, ರಾಹುಲ್ ಗಾಂಧಿ
Updated on

ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಇತ್ತೀಚಿಗೆ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಗೆ ಸೇರಿದರೆ ನಾನು ಅವರನ್ನು "ಮದುವೆಯಾಗುತ್ತೇನೆ" ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ ಎಂದು ವರದಿಯಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.

ಬಾಲಿವುಡ್ ಆಗಿರಲಿ ಅಥವಾ ರಾಜಕೀಯ ಕ್ಷೇತ್ರವಾಗಲಿ, ನೇರ ಹೇಳಿಕೆಗಳಿಗೆ ಹೆಸರುವಾಸಿಯಾದ ಕಂಗನಾ ಆಗಾಗ್ಗೆ ವಿರೋಧ ಪಕ್ಷದ ನಾಯಕರ ವಿರುದ್ಧ ತೀಕ್ಷ್ಣವಾದ ವಾಗ್ದಾಳಿ ನಡೆಸುತ್ತಾರೆ. ಇತ್ತೀಚಿಗೆ ರಾಹುಲ್ ಗಾಂಧಿ ಅವರನ್ನು ಟಪೋರಿ ಎಂದು ಟೀಕಿಸಿದ್ದರು.

Kangana Ranaut
Video: ರಾಹುಲ್ ಗಾಂಧಿ ದೊಡ್ಡ 'ತಲೆನೋವು'; ಕಂಗನಾ ರನೌತ್ ಹೀಗೆ ಹೇಳಿದ್ಯಾಕೆ?

ಏಪ್ರಿಲ್ 3 ರ ಭಾನುವಾರ, ನಾಟಿವರ್ಲ್ಡ್ ಎಂಬ ಇನ್‌ಸ್ಟಾಗ್ರಾಮ್ ಮೀಮ್ ಪುಟವು ಕಂಗನಾ ಅವರು ಯಾವತ್ತೂ ನೀಡಿದ ಕೆಲವು ಹೇಳಿಕೆಗಳನ್ನು ತಪ್ಪಾಗಿ ಹಂಚಿಕೊಂಡಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ಮತ್ತು ರಾಯ್ ಬರೇಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿಗೆ ಸೇರ್ಪಡೆಯಾದರೆ ಅವರನ್ನು ಮದುವೆಯಾಗಲು ಕಂಗನಾ ಮುಂದಾಗಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ವೈರಲ್ ಪೋಸ್ಟ್ ಗೆ ಕಂಗನಾ ಪ್ರತಿಕ್ರಿಯೆ

ವೈರಲ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಕಂಗನಾ, ತಮ್ಮ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ ಸಾಮಾಜಿಕ ಮಾಧ್ಯಮ ಮೀಮ್ ಪುಟವನ್ನು ಹರಿದು ಹಾಕಿದ್ದು, ಒಂದು ಪೋಸ್ಟ್ ಸಮಸ್ಯಾತ್ಮಕ ಮತ್ತು ಅವಹೇಳನಕಾರಿಯಾಗಿದೆ ಎಂದು ಕಿಡಿ ಕಾರಿದ್ದಾರೆ.

ಮಹಿಳೆಯರ ಸ್ಥಾನ ಏನೇ ಇರಲಿ, ಸಾರ್ವಜನಿಕವಾಗಿ ಅವರನ್ನು ಅಗೌರವಿಸುತ್ತಿರುವ ಮತ್ತೊಂದು ನಿದರ್ಶನ ಇದಾಗಿದೆ ಎಂದು ಅವರು ಗಮನಸೆಳೆದರು. "ಈ ನಕಲಿ ಸುದ್ದಿ ಎಷ್ಟು ಶೋಚನೀಯ. ರಾಜಕೀಯದಲ್ಲಿಯೂ ಮಹಿಳೆಯರಿಗೆ ಯಾವುದೇ ಘನತೆ ಇಲ್ಲ. ಈ ನಕಲಿ ಸುದ್ದಿಗಳನ್ನು ಹರಡುತ್ತಿರುವವರಿಗೆ ನಾಚಿಕೆಯಾಗಬೇಕು" ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com