TamilNadu: ರಾಜಕೀಯದ ಮೊದಲ ಪಂದ್ಯದಲ್ಲೇ ನಟ ವಿಜಯ್ ಶತಕ, ಮ್ಯಾಜಿಕ್ ನಂಬರ್ ಗೆ ಬೇಕು 10 ಶಾಸಕರ ಬೆಂಬಲ, TVKಗೆ ಮೊದಲ ಅಗ್ನಿ ಪರೀಕ್ಷೆ!

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
Vijay Makes Superhit Debut. But Can TVK Stitch Numbers To Form Government?
ನಟ ವಿಜಯ್ ಮತ್ತು ಟಿವಿಕೆ ಪಕ್ಷ
Updated on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು, ಒಟ್ಟು 108 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆದರೂ ಸರ್ಕಾರ ರಚನೆಗೆ ಟಿವಿಕೆಗೆ ಇನ್ನೂ 10 ಶಾಸಕರ ಬೆಂಬಲ ಬೇಕಿದ್ದು ಇದು ನಟ ವಿಜಯ್ ರ ಮುಂದಿರುವ ಮೊದಲ ಅಗ್ನಿ ಪರೀಕ್ಷೆಯಾಗಿದೆ.

ತಮಿಳುನಾಡು ರಾಜಕೀಯಕ್ಕೆ ನಟ ವಿಜಯ್ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಆದರೆ, ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಬಹುಮತದ ಗಡಿಗಿಂತ ಸ್ವಲ್ಪ ಹಿಂದೆ ಉಳಿದಿದೆ. ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬೇಕಿರುವುದು 118 ಸದಸ್ಯರ ಬೆಂಬಲ. ಆದರೆ ಟಿವಿಕೆ ಬಳಿ ಇದೀಗ 108 ಸ್ಥಾನಗಳು ಮಾತ್ರ ಇದ್ದು ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯತೆ ಇದೆ.

ಈಗಾಗಲೇ ಸ್ವತಃ ನಟ ವಿಜಯ್ ಸಾರ್ವಜನಿಕ ವೇದಿಕೆಗಳಲ್ಲಿ ಸ್ಪಷ್ಟಪಡಿಸಿರುವಂತೆ ತಾವು ಡಿಎಂಕೆಗೆ ನೇರ ಎದುರಾಳಿ ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಅವರ ಪುತ್ರ ಉದಯನಿಧಿ ಸ್ಟಾಲಿನ್ ಸೇರಿದಂತೆ ಡಿಎಂಕೆ ನಾಯಕರುಗಳನ್ನು ಅವಕಾಶ ಸಿಕ್ಕಾಗಲೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಡಿಎಂಕೆ ಪಕ್ಷದ ಸಿದ್ಧಾಂತ ಮತ್ತು ನಟ ವಿಜಯ್ ರ ಸಿದ್ಧಾಂತಕ್ಕೆ ಸಮಾನವಾಗಿದ್ದರೂ ಅವರು ಡಿಎಂಕೆ ಪಕ್ಷದ ಬೆಂಬಲ ಕೇಳುವುದು ಅಸಾಧ್ಯ ಎನ್ನಲಾಗಿದೆ.

Vijay Makes Superhit Debut. But Can TVK Stitch Numbers To Form Government?
Karnataka By-poll & Assembly elections 2026 LIVE updates (KL, TN, AS, WB): ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್ ಗೆಲುವು; ತಮಿಳುನಾಡಿನಲ್ಲಿ ವಿಜಯ್ ಮ್ಯಾಜಿಕ್; ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಗೆಲುವು; ಕೇರಳದಲ್ಲಿ ಯುಡಿಎಫ್ ಅಲೆ

ಅಂತೆಯೇ ಇತ್ತ ಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟ ನಟ ವಿಜಯ್ ಗೆ ಬೆಂಬಲ ಘೋಷಿಸಿದ್ದರೂ ಸೈದ್ದಾಂತಿಕ ವಿಚಾರದಿಂದಾಗಿ ಅವರಿಂದಲೂ ವಿಜಯ್ ಬೆಂಬಲ ಪಡೆಯುವುದು ಅಸಾಧ್ಯ ಎನ್ನಲಾಗಿದೆ. ಹೀಗಾಗಿ ನಟ ವಿಜಯ್ ಇದೀಗ ಮೂರನೇ ಹಾದಿಯತ್ತ ಕಣ್ಣು ಹಾಯಿಸುವಂತಾಗಿದೆ.

ಚುನಾವಣಾ ರಾಜಕೀಯಕ್ಕೆ ವಿಜಯ್ ಅವರು ಐತಿಹಾಸಿಕ ಪ್ರವೇಶ ನೀಡಿದ್ದರೂ, ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆಯನ್ನು ಅವರು ಹೇಗೆ ಹೊಂದಿಸುತ್ತಾರೆ ಎಂಬುದು ಈಗಿನ ಕುತೂಹಲ.

ಹಾಲಿ ಚುನಾವಣಾ ಆಯೋಗದ ಮೂಲಗಳ ಪ್ರಕಾರ ಟಿವಿಕೆ 108 ಸ್ಥಾನಗಳಲ್ಲಿ ಗೆದ್ದಿದ್ದು, ಡಿಎಂಕೆ 72ಮತ್ತು ಎಐಡಿಎಂಕೆ 54 ಸ್ಥಾನಗಳನ್ನು ಪಡೆದಿದೆ. ಇದಲ್ಲದೆ ಡಿಎಂಕೆ ಮೈತ್ರಿಕೂಟ ಪಕ್ಷಗಳಾದ ಕಾಂಗ್ರೆಸ್ 5, ವಿಸಿಕೆ 2 ಸಿಪಿಐ 2, ಡಿಎಂಡಿಕೆ 2 ಮತ್ತು ಐಯುಎಂಲ್ 1 ಸೇರಿದೆ ಒಟ್ಟು 13 ಸ್ಥಾನಗಳನ್ನು ಹೊಂದಿವೆ. ನಟ ವಿಜಯ್ ಸರ್ಕಾರಕ್ಕೆ 10 ಸ್ಥಾನಗಳ ಅಗತ್ಯತೆ ಇದ್ದು ಇದನ್ನು ಹೇಗೆ ಹೊಂದಿಸುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಅತಿದೊಡ್ಡ ಪಕ್ಷಕ್ಕೆ ಆಹ್ವಾನ

ವಾಡಿಕೆಯಂತೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿರುವುದರಿಂದ, ರಾಜ್ಯಪಾಲರು ಮೊದಲು ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಸಾಧ್ಯತೆಯಿದೆ. ಈ ವೇಳೆ ನಟ ವಿಜಯ್ ಬಹುತೇಕ ಹೊರಗಿನ ಪಕ್ಷಗಳ ಬೆಂಬಲ ಪಡೆಯುವ ಸಾಧ್ಯತೆಯೇ ಹೆಚ್ಚು. ಪ್ರಮುಖವಾಗಿ ಟಿವಿಎ ನಾಯಕರು ಸಣ್ಣ ಪಕ್ಷಗಳು ಮತ್ತು ಇತರ ಮೈತ್ರಿಕೂಟಗಳ ಪಕ್ಷಗಳ ಬೆಂಬಲಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಹಾಗಾದರೆ ಯಾವೆಲ್ಲಾ ಪಕ್ಷಗಳು ನಟ ವಿಜಯ್ ಕೈ ಹಿಡಿಯಬಹುದು?

ಈ ಪ್ರಶ್ನೆಗೆ ಮೊದಲ ಉತ್ತರವೇ ಕಾಂಗ್ರೆಸ್.. ತಮಿಳುನಾಡಿನಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಹೊಂದಿದ್ದು, ಈಗಾಗಲೇ ಕಾಂಗ್ರೆಸ್ ನ ಹಿರಿಯ ನಾಯಕರು ವಿಜಯ್ ಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ. ಇದಲ್ಲದೆ ಪಾಟ್ಟಾಳಿ ಮಕ್ಕಳ್ ಕಚ್ಚಿ (PMK) ಕೂಡ 4 ಸ್ಥಾನಗಳನ್ನು ಹೊಂದಿದ್ದು, ಎಡಪಕ್ಷಗಳು ಮತ್ತು ವಿಸಿಕೆ (VCK) 2 ಸ್ಥಾನಗಳನ್ನು ಹೊಂದಿದೆ. ಈ ಮೂರು ಪಕ್ಷಗಳಿಂದ ವಿಜಯ್ ಬೆಂಬಲ ಪಡದರೆ ಟಿವಿಕೆ ಅನಾಯಾಸವಾಗಿ ತಮಿಳುನಾಡಿನಲ್ಲಿ ಸರ್ಕಾರ ರಚಿಸಬಹುದು ಎಂದು ಹೇಳಲಾಗಿದೆ.

Vijay Makes Superhit Debut. But Can TVK Stitch Numbers To Form Government?
Assembly Elections 2026: ತಮಿಳುನಾಡಿನಲ್ಲಿ ಟಿವಿಕೆ ಶಾಕ್; ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಸ್ವೀಪ್; ಕೇರಳದಲ್ಲಿ UDF ಗೆಲುವು!

ಡಿಎಂಕೆ ಬೆಂಬಲ

ಇದಲ್ಲದ ರಾಜಕೀಯ ತಜ್ಞರು ಮತ್ತೊಂದು ಸಾಧ್ಯತೆ ಬಗ್ಗೆ ಚರ್ಚೆ ನಡೆಸುತ್ತಿದ್ದು, ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ ಅಥವಾ ವಿಸಿಕೆ ಪಕ್ಷಗಳು ಹೊಸ ಸರ್ಕಾರದ ಭಾಗವಾಗಲು ವಿಜಯ್ ಅವರ ಕೈ ಹಿಡಿಯುವ ಸಾಧ್ಯತೆಯೂ ಇದೆ. ವಿಜಯ್ ಅವರು ಈವರೆಗೆ ಡಿಎಂಕೆ ಮತ್ತು ಬಿಜೆಪಿ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಎಐಎಡಿಎಂಕೆ (ಬಿಜೆಪಿ ಮೈತ್ರಿ ಇರುವುದರಿಂದ) ಜೊತೆ ನೇರ ಮೈತ್ರಿ ಮಾಡಿಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com