

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅವರ ಸರಳತೆ ಹಾಗೂ ಹಿರಿಯರ ಮೇಲೆ ತೋರಿಸುವ ಗೌರವ ಎಂದು ನೆಟ್ಟಿಗರು ಫಿದಾ ಆಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಶೂ ಹಾಕಲು, ಸಿಬ್ಬಂದಿಯೊಬ್ಬರು ಕಾಲಿನಿಂದ ಮುಂದೆ ತಳ್ಳಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ರಾಹುಲ್ ಗಾಂಧಿ ಕ್ಷಣವೂ ಯೋಚಿಸದೆ ಸ್ವತಃ ಮುಂದೆ ಬಂದು, ಚಪ್ಪಲಿಗಳನ್ನು ಕೈಯಲ್ಲಿ ಎತ್ತಿಕೊಂಡು ಖರ್ಗೆ ಅವರ ಪಾದಗಳ ಬಳಿ ಕಾಳಜಿಯಿಂದ ಇಟ್ಟರು.
ಈ ಸಹಜ ನಡೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದನ್ನು ವಿನಯ, ಉತ್ತಮ ಸಂಸ್ಕಾರ ಹಾಗೂ ನಿಜವಾದ ನಾಯಕತ್ವದ ಉದಾಹರಣೆಯೆಂದು ಪ್ರಶಂಸಿಸುತ್ತಿದ್ದಾರೆ.
Advertisement