

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ನಟ ವಿಜಯ್ ರ ಟಿವಿಕೆ ಪಕ್ಷ ಸರ್ಕಾರ ರಚನೆಗೆ ಮೊದಲು ಬೆಂಬಲ ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕನೂ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸದೇ ಇದ್ದದ್ದು ಅಚ್ಚರಿಗೆ ಕಾರಣವಾಯಿತು.
ಹೌದು.. ನಟ ವಿಜಯ್ ಅವರ ಹೊಸ ಸಚಿವ ಸಂಪುಟದಲ್ಲಿ ಒಂಬತ್ತು ಸಚಿವರಿದ್ದು, ಯುವ ಹಾಗೂ ಅನುಭವಿಗಳ ಮಿಶ್ರಣವಾಗಿದ್ದಾರೆ. ಟಿವಿಕೆ ಮುಖ್ಯಸ್ಥ ವಿಜಯ್ ಅವರ ಆಪ್ತ ತಂಡದ ಸದಸ್ಯರಿಗೂ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದೆ. ಆದರೆ, ಟಿವಿಕೆಗೆ ಬಹುಮತ ತಲುಪಲು ಮೊದಲಿಗೆ ಬೆಂಬಲ ನೀಡಿದ್ದ Rahul Gandhi ಅವರ ಕಾಂಗ್ರೆಸ್ ಪಕ್ಷದ ಒಬ್ಬ ನಾಯಕನಿಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ.
ರಾಜಕೀಯ ವಿಶ್ಲೇಷಕರ ಪ್ರಕಾರ, ಚುನಾವಣಾ ಪ್ರಚಾರದ ಸಮಯದಲ್ಲೇ ಕಾಂಗ್ರೆಸ್ ವಿಜಯ್ ಅವರ ಮೇಲೆ ವಿಶೇಷ ಗಮನಹರಿಸುತ್ತಿರುವ ಸೂಚನೆಗಳು ಕಂಡುಬಂದಿದ್ದವು. ರಾಹುಲ್ ಗಾಂಧಿ ನಟ ವಿಜಯ್ ಅವರ ರಾಜಕೀಯ ಭವಿಷ್ಯದ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಅದರಿಂದಲೇ ಚುನಾವಣೆಗೆ ಮುನ್ನ ಡಿಎಂಕೆ ಕರೆದಿದ್ದ ಹಲವು ಸಭೆಗಳಿಗೆ ಕಾಂಗ್ರೆಸ್ ಹಾಜರಾಗಿರಲಿಲ್ಲ ಎಂದು ವರದಿಯಾಗಿದೆ. ಇಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಮಾಡಿದ ಟೀಕೆಗಳನ್ನು ಡಿಎಂಕೆಯೇ ಈಗಾಗಲೇ ವ್ಯಕ್ತಪಡಿಸಿತ್ತು.
ಕಾಂಗ್ರೆಸ್ ನಿಂದ ಬೆನ್ನಿಗೆ ಚೂರಿ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದ ವಿಚಾರ ತಿಳಿದ ಕೂಡಲೇ ಡಿಎಂಕೆ ತನ್ನ ಆಕ್ರೋಶ ಹೊರಹಾಕಿತ್ತು. 'ಹಿಂಬದಿಯಿಂದ ಇರಿತ' ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ನಮ್ಮ ಮೇಲೆ ಮಾಡಿದ್ದನ್ನು, ಬಿಜೆಪಿಯು ಅನೇಕ ರಾಜ್ಯಗಳಲ್ಲಿ ಮಾಡುತ್ತದೆ' ಎಂದು ಮಾಜಿ ಮುಖ್ಯಮಂತ್ರಿ M. K. Stalin ಅವರ ಸಮ್ಮುಖದಲ್ಲಿ ಅಂಗೀಕರಿಸಲಾದ ಡಿಎಂಕೆ ನಿರ್ಣಯದಲ್ಲಿ ಹೇಳಲಾಗಿದೆ.
'ನಮ್ಮ ಪಕ್ಷದ ನಾಯಕರಿಗೆ ಕಾಂಗ್ರೆಸ್ ದೊಡ್ಡ ದ್ರೋಹ ಮಾಡಿದೆ. ಗೆಲುವಿಗೆ ಧನ್ಯವಾದ ಹೇಳಲು ಕೂಡ ಅವರು ಸ್ವತಃ ಬಂದಿಲ್ಲ. ಆದರೂ ಸ್ಟಾಲಿನ್ ಸಹಿಷ್ಣುತೆ ಮತ್ತು ಜವಾಬ್ದಾರಿಯುತ ನಿಲುವು ತೋರಿದರು' ಎಂದು ಡಿಎಂಕೆ ಪಕ್ಷ ತನ್ನ ನಿರ್ಣಯದಲ್ಲಿ ಹೇಳಿದೆ.
ಅಂತೆಯೇ ಕಾಂಗ್ರೆಸ್ ತನ್ನ ಹಳೆಯ ಸ್ವಭಾವವನ್ನು ಬದಲಿಸಿಲ್ಲ ಎಂದು ಸ್ಟಾಲಿನ್ ಪಕ್ಷ ಟೀಕಿಸಿದ್ದು, ನಮ್ಮ ಮೈತ್ರಿಯಲ್ಲಿ ಕಾಂಗ್ರೆಸ್‌ಗೆ ಒಂದು ರಾಜ್ಯಸಭಾ ಸ್ಥಾನ ಹಾಗೂ 28 ವಿಧಾನಸಭಾ ಸ್ಥಾನಗಳನ್ನು ನೀಡಲಾಗಿತ್ತು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಮೈತ್ರಿ ಪಕ್ಷಗಳ ಕಠಿಣ ಪರಿಶ್ರಮದಿಂದ ದೊರೆತ ಗೆಲುವನ್ನು ಅಪಾಯಕ್ಕೆ ಒಳಪಡಿಸಿ, ಕೇವಲ ಮೂರು ದಿನಗಳಲ್ಲಿ ಅದು ಪರ್ಯಾಯ ಪಕ್ಷದತ್ತ ತಿರುಗಿತು ಎಂದು ಡಿಎಂಕೆ ಆರೋಪಿಸಿದೆ.
Advertisement