ರಾಹುಲ್- ವಿಜಯ್ ದೋಸ್ತಿಗೆ ಬೆದರಿತೆ ಕೇಂದ್ರ ಸರ್ಕಾರ? ರೀಲ್, ಪೋಟೋ, ಪೋಸ್ಟ್ ಬ್ಲಾಕ್ ಮಾಡಿದ Instagram? ಕಾಂಗ್ರೆಸ್ ಆರೋಪ

ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ವಿಜಯ್ ಜೊತೆಗಿನ ಹಲವು ರೀಲ್ಸ್, ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
Rahul Gandhi with CM Vijay
ಸಿಎಂ ವಿಜಯ್ ಜೊತೆಗೆ ರಾಹುಲ್ ಗಾಂಧಿ
Updated on

ನವದೆಹಲಿ: ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ ನಿಯಮದ ಕಾರಣ ರಾಹುಲ್ ಗಾಂಧಿ ಮತ್ತು ಟಿವಿಕೆ ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಅವರ ರೀಲ್ ಮತ್ತು ಫೋಟೋ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್ "ಬ್ಲಾಕ್" ಮಾಡಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ. ಆದರೆ ಸರ್ಕಾರಿ ಮೂಲಗಳು ಈ ಆರೋಪವನ್ನು ನಿರಾಕರಿಸಿವೆ.

ತಮಿಳುನಾಡು ನೂತನ ಮುಖ್ಯಮಂತ್ರಿ ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ವಿಜಯ್ ಜೊತೆಗಿನ ಹಲವು ರೀಲ್ಸ್, ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕಹಾಗೂ ಗಾಂಧಿಯವರ ಆಪ್ತ ಶ್ರೀವತ್ಸ, ಪ್ರಮಾಣ ವಚನ ಸಮಾರಂಭದಲ್ಲಿನ ಗಾಂಧಿ ಮತ್ತು ದಳಪತಿ ವಿಜಯ್ ಅವರ ರೀಲ್ ಮತ್ತು ಪೋಟೋಗಳ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ ನಿರ್ಬಂಧಿಸಿದೆ". ವೈರಲ್ ರೀಲ್ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ 12 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತ್ತು. ಮತ್ತೊಂದು ಫೋಟೋ 46 ಮಿಲಿಯನ್ ಜನರನ್ನು ತಲುಪಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಯಾಕೆ ಹೀಗೆ ಮಾಡಲಾಗಿದೆ ಎಂಬುದಕ್ಕೆ ಮೆಟಾ ಕಾರಣ ನೀಡಿಲ್ಲ. ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯ (MEITY) ನಿಯಮಗಳಿಂದ ಹೀಗಾಗಿದೆ. ರಾಹುಲ್ ಗಾಂಧಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ದೀರ್ಘಕಾಲದವರೆಗೆ ನಿರ್ಬಂಧಿಸಲಾಗಿದೆ."ಅವರ X, YouTube ವೀಕ್ಷಣೆಗಳು ಮತ್ತು Insta ಫಾಲೋವರ್ಸ್ ಗಳನ್ನು ಹಿಮ್ಮಟ್ಟಿಸಲಾಗುತ್ತಿದೆ. ಭಾರತದ ವಿರೋಧ ಪಕ್ಷದ ನಾಯಕನ ಧ್ವನಿಯನ್ನು ಹೀಗೆಯೇ ನಿರ್ಬಂಧಿಸಲಾಗಿದೆ ಎಂದು ಶ್ರೀವತ್ಸ ಹೇಳಿದ್ದಾರೆ.

Rahul Gandhi with CM Vijay
S Keerthana: ವಿಜಯ್ ಕ್ಯಾಬಿನೆಟ್ ನಲ್ಲಿ ಪಂಚಭಾಷಾ ಪಾರಂಗತೆ; ಅತಿ ಕಿರಿಯ ಶಾಸಕಿ!

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ MeitY ಮೂಲಗಳು, ವಿರೋಧ ಪಕ್ಷದ ನಾಯಕನ ಕೆಲವು ಪೋಸ್ಟ್‌ಗಳನ್ನು ಸಚಿವಾಲಯ ನಿರ್ಬಂಧಿಸಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ತಪ್ಪಾಗಿ ಹೇಳಿಕೊಂಡಿವೆ.ಆ ರೀತಿ ಮಾಡುವುದಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇನ್ಸಾಟಾಗ್ರಾಮ್ ನ ಆಂತರಿಕ ಸಮಸ್ಯೆಯಿಂದ ಇದಾಗಿದ್ದು,ಈಗ ಸರಿಯಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com