ಅಮೆರಿಕ ಮಧ್ಯಂತರ ಚುನಾವಣೆ ಫಲಿತಾಂಶ: 'Mr. ಪ್ರಧಾನಿ ಮೋದಿ ಎಚ್ಚರ.. ಭಾರತದಲ್ಲೂ ಇದೇ ಮರುಕಳಿಸುತ್ತೆ': ಕಾಂಗ್ರೆಸ್ ನಾಯಕಿ Shama Mohamed

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಸಾಧಿಸಿರುವ ಗೆಲುವನ್ನು ಉಲ್ಲೇಖಿಸಿ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ವ್ಯವಸ್ಥೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
Congress leader Shama Mohamed as Dems win midterms
ಕಾಂಗ್ರೆಸ್ ಶಾಸಕ ಶಮಾ ಮೊಹಮದ್
Updated on: 

ನವದೆಹಲಿ: ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆಲುವು ಕಂಡ ಬೆನ್ನಲ್ಲೇ ಇದೇ ವಿಚಾರವಾಗಿ ಮೋದಿ ಸರ್ಕಾರಕ್ಕೆ ತಿವಿದಿರುವ ಕಾಂಗ್ರೆಸ್ ನಾಯಕಿ ಶಮಾ ಮೊಹಮದ್, ಭಾರತದಲ್ಲೂ ಇದೇ ಮರುಕಳಿಸುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಸಾಧಿಸಿರುವ ಗೆಲುವನ್ನು ಉಲ್ಲೇಖಿಸಿ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ವ್ಯವಸ್ಥೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ಅಮೆರಿಕದಲ್ಲಿ ನಡೆದಿರುವ ರಾಜಕೀಯ ಬದಲಾವಣೆ ಭಾರತದಲ್ಲೂ ಶೀಘ್ರದಲ್ಲೇ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.

ನವೆಂಬರ್ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಶಮಾ ಮೊಹಮ್ಮದ್ ಈ ಪ್ರತಿಕ್ರಿಯೆ ನೀಡಿದ್ದಾರೆ.

Congress leader Shama Mohamed as Dems win midterms
‘ಅಂಧಭಕ್ತ’, ‘ಗೋದಿ ಮೀಡಿಯಾ’ ಪದಗಳಿಂದ ಬೇಸರವಾಗಿದೆಯೇ?: ರಾಜಕೀಯ ಕೈಗೊಂಬೆಗಳಿಗೆ ಹೊಸ ಪರ್ಯಾಯ ಪದ ಸೂಚಿಸಿದ ಶಶಿ ತರೂರ್..!

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಅಮೆರಿಕದ ಮಧ್ಯಂತರ ಚುನಾವಣೆ ನಮಗೆ ಒಂದು ಸಂದೇಶ ನೀಡಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು, ಆರ್ಥಿಕತೆಯ ಬಗ್ಗೆ ಸುಳ್ಳು ಹೇಳುವವರು ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವವರನ್ನು ಜನರು ಅಧಿಕಾರದಿಂದ ಹೊರಹಾಕುತ್ತಾರೆ.

1932ರ ಬಳಿಕ ಕಾನ್ಸಾಸ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಗೆದ್ದಿರಲಿಲ್ಲ. ಆದರೆ ಈಗ ಅದು ಸಾಧ್ಯವಾಗಿದೆ. ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾದಾಗ ಅಸಾಧ್ಯವೆನಿಸಿದ್ದೂ ಸಾಧ್ಯವಾಗಬಹುದು. ಭಾರತದಲ್ಲೂ ಶೀಘ್ರದಲ್ಲೇ ಇದೇ ಬದಲಾವಣೆ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.

ಕಾನ್ಸಾಸ್‌ನಲ್ಲಿ 1932ರ ಬಳಿಕ ಡೆಮಾಕ್ರಟಿಕ್ ಗೆಲುವು!

ಅಮೆರಿಕದ ಕಾನ್ಸಾಸ್ ರಾಜ್ಯದಲ್ಲಿ 1932ರ ಬಳಿಕ ಮೊದಲ ಬಾರಿಗೆ ಡೆಮಾಕ್ರಟಿಕ್ ಪಕ್ಷ ಸೆನೆಟ್ ಸ್ಥಾನ ಗೆದ್ದಿದೆ ಎಂಬುದು ಈ ಚುನಾವಣೆಯ ಪ್ರಮುಖ ಬೆಳವಣಿಗೆಯಾಗಿದೆ. ಆಡಂ ಹ್ಯಾಮಿಲ್ಟನ್ ಅವರು ರಿಪಬ್ಲಿಕನ್ ಪಕ್ಷದ ಹಾಲಿ ಸದಸ್ಯ ರೋಜರ್ ಮಾರ್ಷಲ್ ಅವರನ್ನು ಸೋಲಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ ಟೆಕ್ಸಾಸ್ ಮತ್ತು ಅಯೋವಾ ಸೇರಿದಂತೆ ಹಲವು ರಾಜ್ಯಗಳಲ್ಲೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.

ಈ ಚುನಾವಣೆಯಲ್ಲಿ ಸೆನೆಟ್ ಮತ್ತು ರಾಜ್ಯಪಾಲರ ಸ್ಥಾನಗಳ ಸ್ಪರ್ಧೆಗಳಲ್ಲೂ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸಿದ್ದು, ರಿಪಬ್ಲಿಕನ್ ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಕೆಲವು ರಾಜ್ಯಗಳಲ್ಲೂ ಗೆಲುವು ದಾಖಲಿಸಿದೆ.

ಅಮೆರಿಕದ ಚುನಾವಣಾ ಫಲಿತಾಂಶವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕಿ ಮಾಡಿರುವ 'ಭಾರತದಲ್ಲೂ ಶೀಘ್ರ ಬದಲಾವಣೆ' ಎಂಬ ಹೇಳಿಕೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X