'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಪೊಲೀಸ್ ಎಫ್‌ಐಆರ್ ಪ್ರಕಾರ, ಸುಹೈಲ್ ಸಜೀವ್ ಎಂಬಾತ ಚಲಾಯಿಸುತ್ತಿದ್ದ ವೇಗದ ಮಿನಿ ಕೂಪರ್ ಕಾರು, ಮೂವರು ಯುವಜನರು ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
Kerala Teen After Killing 3 With Mini Cooper
ಕೇರಳದಲ್ಲಿ ಹಿಟ್ ಅಂಡ್ ರನ್
Updated on: 

ಕೊಚ್ಚಿ: ಕೇರಳದಲ್ಲಿ ಭೀಕರ ಹಿಟ್ ಅಂಡ್ ರನ್ ಅಪಘಾತ ನಡೆದಿದ್ದು, ಮದ್ಯದ ಅಮಲಿನಲ್ಲಿ ದುಬಾರಿ ಮಿನಿ ಕೂಪರ್ ಕಾರು ಚಲಾಯಿಸಿದ ಯುವಕನೋರ್ವ ಅಜಾಗರೂಕ ಚಾಲನೆಗೆ ಮೂವರು ಬಲಿಯಾಗಿರುವ ಘಟನೆ ನಡೆದಿದೆ.

ಭಾನುವಾರ ಮುಂಜಾನೆ ಸುಮಾರು 1.45ರ ವೇಳೆಗೆ ಕೊಚ್ಚಿನ್ ನ ನೆಡುಂಬಸ್ಸೇರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಮಿನಿ ಕೂಪರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕ-ಯುವತಿಯರು ಮೃತಪಟ್ಟಿದ್ದಾರೆ.

ಪೊಲೀಸ್ ಎಫ್‌ಐಆರ್ ಪ್ರಕಾರ, ಸುಹೈಲ್ ಸಜೀವ್ ಎಂಬಾತ ಚಲಾಯಿಸುತ್ತಿದ್ದ ವೇಗದ ಮಿನಿ ಕೂಪರ್ ಕಾರು, ಮೂವರು ಯುವಜನರು ಪ್ರಯಾಣಿಸುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಕಾರು ಸ್ಕೂಟರ್ ಅನ್ನು ಸುಮಾರು 100 ಮೀಟರ್‌ಗಳಷ್ಟು ದೂರ ಎಳೆದೊಯ್ದ ಬಳಿಕ ನಿಂತಿದೆ ಎಂದು ವರದಿಯಾಗಿದೆ.

Kerala Teen After Killing 3 With Mini Cooper
ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೂವರ ದಾರುಣ ಅಂತ್ಯ

ಅಪಘಾತದಲ್ಲಿ ಮೃತಪಟ್ಟವರನ್ನು ವಯನಾಡಿನ ಮಡಕ್ಕಿಮಲ ನಿವಾಸಿ ದೇವಿಕಾ (21), ಪಾಲಕ್ಕಾಡ್‌ನ ಗೋಪಿಕಾ (22) ಹಾಗೂ ಕರ್ನಾಟಕದ ಮಂಗಳೂರಿನ ಇಜಾಜ್ (21) ಎಂದು ಗುರುತಿಸಲಾಗಿದೆ. ಮೂವರೂ ಕಾಕ್ಕನಾಡ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಚಹಾ ಕುಡಿಯಲು ವಿಮಾನ ನಿಲ್ದಾಣದ ಸಮೀಪದ ಪ್ರದೇಶಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.

ಅಪಘಾತದಲ್ಲಿ ದೇವಿಕಾ ಮತ್ತು ಗೋಪಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಜಾಜ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

'ಅಪ್ಪ ಎಲ್ಲ ನೋಡಿಕೊಳ್ಳುತ್ತಾರೆ' : ಆರೋಪಿ ಉಡಾಫೆ ಮಾತು

ಅಪಘಾತದ ಬಳಿಕ ಆರೋಪಿ ಸುಹೈಲ್ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸದೆ ಉಡಾಫೆಯಾಗಿ ಮಾತನಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ರಸ್ತೆ ಇರೋದೇ ಯಾವುದಕ್ಕೆ? ಡ್ರೈವಿಂಗ್ ಮಾಡಲಿಕ್ಕೆ ಅಲ್ವಾ?.. ಈ ಪ್ರಕರಣವನ್ನು ತನ್ನ ತಂದೆ ನೋಡಿಕೊಳ್ಳುತ್ತಾರೆ” ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ಆರೋಪಿ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹಲವು ಬಾರ್‌ಗಳಲ್ಲಿ ಮದ್ಯ ಸೇವನೆ ಮಾಡಿದ್ದ ಆರೋಪ

ಅಪಘಾತಕ್ಕೂ ಮುನ್ನ ಆರೋಪಿ ಹಲವು ಬಾರ್‌ಗಳಲ್ಲಿ ಮದ್ಯ ಸೇವಿಸಿದ್ದ ಎನ್ನುವ ಆರೋಪ ಕೇಳಿಬಂದಿದೆ. ಕೇರಳದಲ್ಲಿ ಕಾನೂನುಬದ್ಧವಾಗಿ ಮದ್ಯ ಸೇವಿಸಲು ಕನಿಷ್ಠ ವಯಸ್ಸು 23 ವರ್ಷವಾಗಿರುವುದರಿಂದ, 19 ವರ್ಷದ ಯುವಕನಿಗೆ ಮದ್ಯ ಪೂರೈಸಿದ್ದರೆ ಅದು ಕಾನೂನುಬಾಹಿರವಾಗುತ್ತದೆ.

ಮದ್ಯ ಪೂರೈಸಿದ ಬಾರ್‌ಗಳ ವಿರುದ್ಧ ಕ್ರಮಕ್ಕೆ ಸೂಚನೆ

ಘಟನೆ ಕುರಿತು ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿರುವ ಬೆನ್ನಲ್ಲೇ, ಕೇರಳದ ಅಬಕಾರಿ ಸಚಿವ ಎಂ. ಲಿಜು ಅವರು ಆರೋಪಿಗೆ ಮದ್ಯ ಪೂರೈಸಿದ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಅಬಕಾರಿ ಆಯುಕ್ತರು ಹಾಗೂ ಎರ್ನಾಕುಲಂ ಜಂಟಿ ಅಬಕಾರಿ ಆಯುಕ್ತರಿಗೆ ನಿರ್ದೇಶನ ನೀಡಿರುವ ಸಚಿವರು, ಆರೋಪಿಗೆ ಮದ್ಯ ಪೂರೈಸಿದ ಸಂಸ್ಥೆಗಳನ್ನು ಗುರುತಿಸಿ ಅವುಗಳ ವಿರುದ್ಧ ತಕ್ಷಣ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ.

ಆರೋಪಿಗೆ ಹಲ್ಲೆ ನಡೆಸಿದ ಯುವಕರ ಗುಂಪು

ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಕೂಡ ಹೊರಬಂದಿದೆ. ವೈದ್ಯಕೀಯ ಪರೀಕ್ಷೆಗಾಗಿ ಆರೋಪಿಯನ್ನು ಕರೆದೊಯ್ಯುತ್ತಿದ್ದ ವೇಳೆ ಯುವಕರ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com