ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ! ಪ್ರಸಿದ್ಧ ದೊಡ್ಲ ಡೇರಿ ವಿರುದ್ಧ FSSAI ಕ್ರಿಮಿನಲ್ ಕೇಸ್

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ, ಹೈದರಾಬಾದ್ ಮೂಲದ ಪ್ರಮುಖ ಡೈರಿ ಸಂಸ್ಥೆಯಾದ ದೊಡ್ಲ ಡೇರಿ ಕಂಪನಿಯ ಫುಲ್ ಕ್ರೀಮ್ ಹಾಲು ಮಾದರಿಯಲ್ಲಿ ಡಿಟರ್ಜೆಂಟ್ ಮತ್ತು ಕಾಸ್ಟಿಕ್ ಸೋಡಾ ಅಂಶಗಳು ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
Detergent and Caustic Soda Found in Dodla Milk: FSSAI Orders Criminal Action Over Toxic Adulteration
ಪ್ರಸಿದ್ಧ ದೊಡ್ಲ ಡೇರಿ ವಿರುದ್ಧ FSSAI ಕ್ರಿಮಿನಲ್ ಕೇಸ್Online Desk
Updated on: 

ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ವ್ಯಾಪಕವಾಗಿ ಮಾರಾಟವಾಗುವ, ಹೈದರಾಬಾದ್ ಮೂಲದ ಪ್ರಮುಖ ಡೈರಿ ಸಂಸ್ಥೆಯಾದ ದೊಡ್ಲ ಡೇರಿ ಕಂಪನಿಯ ಫುಲ್ ಕ್ರೀಮ್ ಹಾಲು ಮಾದರಿಯಲ್ಲಿ ಡಿಟರ್ಜೆಂಟ್ ಮತ್ತು ಕಾಸ್ಟಿಕ್ ಸೋಡಾ ಅಂಶಗಳು ಪತ್ತೆಯಾಗಿದ್ದು, ಕಂಪನಿಯ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆದೇಶಿಸಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮಾರುಕಟ್ಟೆ ಹೊಂದಿರುವ ದೊಡ್ಲ ಡೇರಿಯ ಹಾಲಿನ ಮಾದರಿಯನ್ನು ಪರಿಶೀಲಿಸಿದಾಗ ಈ ಗಂಭೀರ ಸುರಕ್ಷತಾ ಉಲ್ಲಂಘನೆ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಪರೀಕ್ಷೆ ನಡೆದಿದ್ದು ಹೇಗೆ?

ಆಹಾರ ಸುರಕ್ಷತಾ ಅಧಿಕಾರಿಗಳು ಮೊದಲು ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆಗ ಹಾಲಿನಲ್ಲಿ ಇರಬೇಕಾದ ಕನಿಷ್ಠ ಕೊಬ್ಬಿನಾಂಶ ನಿಯಮಾವಳಿಗಳಿಗಿಂತ ತೀರಾ ಕಡಿಮೆ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಲನ್ನು ಕಳಪೆ ಗುಣಮಟ್ಟದ್ದು ಎಂದು ಘೋಷಿಸಿದ್ದರು. ಆದರೆ, ಸರ್ಕಾರದ ಈ ವರದಿಯನ್ನು ಒಪ್ಪದ ದೊಡ್ಲ ಡೇರಿ ಸಂಸ್ಥೆ, ಹಾಲಿನ ಸ್ಯಾಂಪಲ್‌ಗಳನ್ನು ಮರುಪರಿಶೀಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸಿತು. ಕಂಪನಿಯ ಕೋರಿಕೆಯಂತೆ ಹಾಲಿನ ಮಾದರಿಗಳನ್ನು ಉನ್ನತ ಮಟ್ಟದ ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಆದರೆ, ಈ ಅಂತಿಮ ವರದಿಯಲ್ಲಿ ಹಾಲಿನಲ್ಲಿ ಕೇವಲ ಫ್ಯಾಟ್ ಕೊರತೆಯಷ್ಟೇ ಅಲ್ಲದೆ, ಅಪಾಯಕಾರಿ ರಾಸಾಯನಿಕಗಳಾದ ಡಿಟರ್ಜೆಂಟ್ ಮತ್ತು ಕಾಸ್ಟಿಕ್ ಸೋಡಾ ಮಿಶ್ರಣವಾಗಿರುವುದು ಖಚಿತಪಟ್ಟಿತು.

Detergent and Caustic Soda Found in Dodla Milk: FSSAI Orders Criminal Action Over Toxic Adulteration
ಟೈರ್ ಪಂಕ್ಚರ್ ನೆಪ ಹೇಳಿ ಕ್ಲೈಮ್ ತಿರಸ್ಕರಿಸಿದ್ದ ಇನ್ಶೂರೆನ್ಸ್ ಕಂಪನಿಗೆ ಮುಖಭಂಗ: 14 ವರ್ಷದ ಬಳಿಕ BMW ಮಾಲೀಕನಿಗೆ ಸಿಕ್ತು 1.4 ಕೋಟಿ ರೂ.!

ಸೇವನೆಗೆ ಯೋಗ್ಯವಲ್ಲ ಎಂದು ಘೋಷಣೆ

ರಾಸಾಯನಿಕ ಪತ್ತೆಯಾದ ಬೆನ್ನಲ್ಲೇ ಈ ಹಾಲನ್ನು ಮಾನವನ ಆರೋಗ್ಯಕ್ಕೆ ಸಂಪೂರ್ಣ ಹಾನಿಕಾರಕ ಹಾಗೂ ಅಸುರಕ್ಷಿತ ಆಹಾರ ಎಂದು ಆಹಾರ ನಿಯಂತ್ರಕ ಸಂಸ್ಥೆ ವರ್ಗೀಕರಿಸಿದೆ. ಇಂತಹ ಹಾಲನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ತೀವ್ರ ಹಾನಿ ಉಂಟಾಗುತ್ತದೆ. ಜೊತೆಗೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿರುವುದರಿಂದ, ದೊಡ್ಲ ಡೇರಿ ಸಂಸ್ಥೆ ಹಾಗೂ ಹಾಲಿನ ಉತ್ಪಾದನೆ ಮತ್ತು ಮಾರುಕಟ್ಟೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಉನ್ನತ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಏತನ್ಮಧ್ಯೆ, ಕೇವಲ ದೊಡ್ಲ ಡೈರಿ ಮಾತ್ರವಲ್ಲದೆ, ಪ್ರಿಯಗೋಲ್ಡ್ ಬಿಸ್ಕತ್ ತಯಾರಿಸುವ ಸೂರ್ಯ ಫುಡ್ ಆ್ಯಂಡ್ ಆಗ್ರೋ ಲಿಮಿಟೆಡ್ ಹಾಗೂ ಯುಇಐಆರ್ ಆರ್ಗ್ಯಾನಿಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಳಿಗಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ನರ್ಪಧಾಮ್ ಫುಡ್ಸ್, ಸನ್ ರಿಡ್ಜಸ್ ಹೆಲ್ತ್ ಕೇರ್ಸ್ ಮತ್ತು ಶಾ ಕಾಂತಿಲಾಲ್ ಜಯಂತಿಲಾಲ್ ಸಂಸ್ಥೆಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com