ರಿಹಾನ್ ಸತ್ಯದ ಪರವಾಗಿದ್ದಾನೆ, ಅವನ ಬಗ್ಗೆ ಹೆಮ್ಮೆಪಡುತ್ತೇನೆ: ಮಗನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ

ನವದೆಹಲಿಯ ಪ್ರತಿಷ್ಠಿತ ಬಿಕಾನೆರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ, ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ.
Priyanka Gandhi Vadra
ಪ್ರಿಯಾಂಕಾ ಗಾಂಧಿ ವಾದ್ರಾ
Updated on: 

ನವೆದಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ, ಛಾಯಾಗ್ರಾಹಕ ರಿಹಾನ್ ವಾದ್ರಾ ಆಯೋಜಿಸಿದ್ದ ಏಕವ್ಯಕ್ತಿ ಕಲಾ ಪ್ರದರ್ಶನ ಆರಂಭಕ್ಕೂ ಮುನ್ನವೇ ಭಾರಿ ರಾಜಕೀಯ ಮತ್ತು ಸಾಂಸ್ಕೃತಿಕ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿಯ ಪ್ರತಿಷ್ಠಿತ ಬಿಕಾನೆರ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ, ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ ಎಂದು ಆರೋಪಿಸಲಾಗಿದೆ.

24 ವರ್ಷದ ರಿಹಾನ್ ವಾದ್ರಾ ‘ನೋ ಐಡಿಯಾ ಈಸ್ ಫೈನಲ್’ ಹೆಸರಿನಲ್ಲಿ ತಮ್ಮ ಮೂರನೇ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ವನ್ಯಜೀವಿಗಳು, ಅಮೂರ್ತ ಕಲೆ ಮತ್ತು ಕಳೆದ ಆರು ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಯುವ ಚಳವಳಿಗಳ ಬೀದಿ ಛಾಯಾಗ್ರಹಣ ಸೇರಿದಂತೆ 100ಕ್ಕೂ ಹೆಚ್ಚು ಕಲಾಕೃತಿಗಳನ್ನು ಇರಿಸಲಾಗಿತ್ತು.

ಆದರೆ, ಪ್ರದರ್ಶನ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಪ್ರದರ್ಶನದ ಬಹುತೇಕ ಅರ್ಧ ಭಾಗವನ್ನು (74 ಫೋಟೋಗಳು) ತೆಗೆದುಹಾಕುವಂತೆ ಬಿಕಾನೆರ್ ಹೌಸ್ ಆಡಳಿತ ಸೂಚಿಸಿದೆ.

Priyanka Gandhi Vadra
ವಿವಾದಕ್ಕೆ ಕಾರಣವಾದ ರಿಹಾನ್ ವಾದ್ರಾ ಫೋಟೋ: ಪ್ರಜಾಪ್ರಭುತ್ವದ ಕಗ್ಗೊಲೆ; ಬಿಕಾನೇರ್ ಹೌಸ್ ವಿರುದ್ಧ ಪ್ರಿಯಾಂಕಾ ಆಕ್ರೋಶ!

ಮಗ ರಿಹಾನ್ ವಾದ್ರಾ ಪರವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಧ್ವನಿ ಎತ್ತಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಅವರು, ನನ್ನ ಮಗನ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತೇನೆ. ನೀನು ಸತ್ಯದ ಪರವಾಗಿ ನಿಲ್ಲು, ಆಗ ಸುಂದರವಾದದ್ದೆಲ್ಲವೂ ನಿನ್ನನ್ನ ಹುಡುಕಿಕೊಂಡು ಬರುತ್ತದೆ ಅಂತ ಬರೆದುಕೊಂಡಿದ್ದಾರೆ.

ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ಮತ್ತೊಬ್ಬರ ಅಭಿವ್ಯಕ್ತಿಗೆ ಹೆದರಿದಾಗ, ತಾವು ರಕ್ಷಿಸಲು ಪ್ರಯತ್ನಿಸುತ್ತಿರುವ ಅಧಿಕಾರವನ್ನ ಈಗಾಗಲೇ ಕಳೆದುಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಹಾರ್ಟ್‌ ಎಮೋಜಿಯನ್ನ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಯಾವಾಗಲೂ ಹೆಮ್ಮೆಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದು ಅತ್ಯಂತ ಹಾಸ್ಯಾಸ್ಪದ. ದೇಶಾದ್ಯಂತ ಯುವಕರ ಧ್ವನಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆಯೋ ಹಾಗೆಯೇ ಇಲ್ಲಿ ಒಬ್ಬ ಯುವ ಕಲಾವಿದನ ಧ್ವನಿಯನ್ನು ಅಡಗಿಸಲಾಗುತ್ತಿದೆ. ಆ ಚಿತ್ರಗಳಲ್ಲಿ ಯಾರ ವಿರುದ್ಧವೂ ಅವಹೇಳನಕಾರಿ ಅಂಶಗಳಿರಲಿಲ್ಲ, ಕೇವಲ ನೈಜ ದೃಶ್ಯಗಳಿದ್ದವು. ಇದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂಬುದನ್ನು ತೋರಿಸುತ್ತದೆ. ಇಂದು ನನ್ನ ಮಗನಿಗೆ ಹೀಗಾಗಿದೆ, ನಾಳೆ ಬೇರೊಬ್ಬ ಕಲಾವಿದನಿಗೂ ಇದು ಸಂಭವಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com