'ಟ್ರೋಲ್ ಕಟೆಂಟ್ ಆಗಿ ಬಳಕೆ'..!; ‘ಗರ್ಬಾ, ನವರಾತ್ರಿ ಎಲ್ಲರ ಹಬ್ಬ.. ಮುಸ್ಲಿಮರಿಗೆ ಆಕ್ಷೇಪವೇಕೆ?': Amruta Fadnavis ಸಮರ್ಥನೆ, Video

ಗರ್ಬಾ ಮತ್ತು ಇತರೆ ಹಿಂದೂ ಹಬ್ಬಗಳ ಆಚರಣೆಗಳಲ್ಲಿ ಮುಸ್ಲಿಮರು ಪಾಲ್ಗೊಳ್ಳುವ ಕುರಿತು ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಅಮೃತಾ ಫಡ್ನವಿಸ್ ಸಮರ್ಥಿಸಿಕೊಂಡಿದ್ದಾರೆ.
Amruta Fadnavis Defends Stand On Muslims Joining Celebrations
ಅಮೃತಾ ಫಡ್ನವಿಸ್
Updated on

ಮುಂಬೈ: ಗರ್ಬಾ ಹಾಗೂ ನವರಾತ್ರಿ ನಮ್ಮ ಸುಂದರ ಹಬ್ಬಗಳಾಗಿದ್ದು, ಇವುಗಳಲ್ಲಿ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದಾರೆ.

ಗರ್ಬಾ ಮತ್ತು ಇತರೆ ಹಿಂದೂ ಹಬ್ಬಗಳ ಆಚರಣೆಗಳಲ್ಲಿ ಮುಸ್ಲಿಮರು ಪಾಲ್ಗೊಳ್ಳುವ ಕುರಿತು ತಾವು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಅಮೃತಾ ಫಡ್ನವಿಸ್, ತಮ್ಮ ಹೇಳಿಕೆಯನ್ನು ಮಾಧ್ಯಮಗಳೇ ಅನಗತ್ಯವಾಗಿ ವಿವಾದ ಮಾಡುತ್ತಿವೆ ಎಂದು ಪರೋಕ್ಷ ಕಿಡಿಕಾರಿದರು.

ತಮ್ಮ ಹೇಳಿಕೆಯನ್ನು ಟ್ರೋಲ್ ಕಟೆಂಟ್ ಆಗಿ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಓರ್ವ ಸಾಮಾಜಿಕ ಕಾರ್ಯಕರ್ತೆಯಾಗಿ, ಸಮಾಜದ ಜವಾಬ್ದಾರಿಯುತ ನಾಗರೀಕಳಾಗಿ ನಾನು ಹೇಳಿಕೆ ನೀಡಿದ್ದೆ ಎಂದಿದ್ದಾರೆ.

Amruta Fadnavis Defends Stand On Muslims Joining Celebrations
ಮುಸ್ಲಿಮರನ್ನು ಗರ್ಭಾ-ದಾಂಡಿಯಾ ಕಾರ್ಯಕ್ರಮಗಳಿಂದ ದೂರವಿಡಿ: VHP ಕರೆಗೆ ಅಮೃತಾ ಫಡ್ನವೀಸ್ ವಿರೋಧ!

ಅಂತೆಯೇ ‘ಗರ್ಬಾ ಮತ್ತು ನವರಾತ್ರಿ ನಮ್ಮ ಸುಂದರ ಹಬ್ಬಗಳು. ಜಗತ್ತಿನಾದ್ಯಂತ ನಮ್ಮ ಈ ಹಬ್ಬಗಳನ್ನು ಇಷ್ಟಪಡುತ್ತಾರೆ. ಇಲ್ಲಿ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ಭೇದಭಾವ ಇರಬಾರದು. ಭಕ್ತಿ ಮತ್ತು ಗೌರವದಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸುವ ಯಾರನ್ನಾದರೂ ಸ್ವಾಗತಿಸಬೇಕು’ ಎಂದು ಅಮೃತಾ ಫಡ್ನವೀಸ್ ಹೇಳಿದ್ದಾರೆ.

ಅಲ್ಲದೆ ನಮ್ಮ ಧರ್ಮವನ್ನು ಪ್ರಚಾರ ಮಾಡಲು ನಮ್ಮ ಜಗತ್ತಿಗೆ ಮುಕ್ತವಾಗಿಡಬೇಕು. ಇಂತಹ ಸುಂದರ ಕಾರ್ಯಕ್ರಮಗಳೇ ನಮ್ಮ ಧರ್ಮವನ್ನು ಪ್ರಪಂಚಕ್ಕೆ ಪರಿಚಯಿಸುತ್ತವೆ. ಹಬ್ಬಗಳು ಜನರನ್ನು ಒಗ್ಗೂಡಿಸುವ ವೇದಿಕೆಗಳಾಗಬೇಕು ಹಾಗೂ ಭಕ್ತಿ ಮತ್ತು ಗೌರವದಿಂದ ಭಾಗವಹಿಸುವವರಿಗೆ ಧರ್ಮದ ಆಧಾರದ ಮೇಲೆ ನಿರ್ಬಂಧ ವಿಧಿಸಬಾರದು ಎಂದು ಅವರು ಹೇಳಿದರು.

ಆ ಮೂಲಕ ಮುಸ್ಲಿಮರು ನವರಾತ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಯಸಿದರೆ ಅದಕ್ಕೆ ಯಾವುದೇ ಆಕ್ಷೇಪ ಇರಬಾರದು ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಅವರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com