ನವರಾತ್ರಿ

ಕರ್ನಾಟಕದಲ್ಲಿ ದಸರಾ, ನೇಪಾಳದಲ್ಲಿ ದಶೈನ್: ವಿಜಯದಶಮಿ ಹಿಂದಿನ ದಂತಕಥೆ ಮತ್ತು ಸಂದೇಶ!
ಪುರಾಣಗಳ ಪ್ರಕಾರ, ಮಹಿಷಾಸುರನು ಕಠಿಣ ತಪಸ್ಸು ಮಾಡಿ ಬ್ರಹ್ಮದೇವರಿಂದ ಒಂದು ಶಕ್ತಿಯುತ ವರವನ್ನು ಪಡೆದಿದ್ದನು. ಆ ವರದ ಪ್ರಕಾರ, ದೇವತೆಗಳಿಗೂ ಸಹ ಅವನನ್ನು ಸೋಲಿಸಲು ಸಾಧ್ಯವಿರಲಿಲ್ಲ.

ಆಯುಧ ಪೂಜೆ: ಕೃತಜ್ಞತೆ, ಸಂಪ್ರದಾಯ-ಕಾಯಕದ ಘನತೆಯ ಸಂಭ್ರಮ
ಆಯುಧ ಪೂಜೆ ಕೇವಲ ಆಯುಧಗಳು ಮತ್ತು ಉಪಕರಣಗಳನ್ನು ಪೂಜಿಸುವ ಹಬ್ಬವಲ್ಲ. ಕಾಯಕದ ಘನತೆ, ಜ್ಞಾನದ ಮೌಲ್ಯ ಹಾಗೂ ಜೀವನೋಪಾಯಕ್ಕೆ ನೆರವಾಗುವ ಪ್ರತಿಯೊಂದು ವಸ್ತುವನ್ನೂ ಗೌರವಿಸಬೇಕು ಎಂಬ ಆಳವಾದ ನಂಬಿಕೆಯನ್ನು ಸಾರುವ ಹಬ್ಬವೂ ಹೌದು.

ಆಕೆಗೆ 30, ಆತನಿಗೆ 75: ತನಗಿಂತ 45 ವರ್ಷದ ಹಿರಿಯ ವ್ಯಕ್ತಿಯೊಂದಿಗೆ ಲವ್ ನಲ್ಲಿ ಬಿದ್ದ ಯುವತಿ; ನವರಾತ್ರಿ ಬಳಿಕ ಮದುವೆ ನಿರೀಕ್ಷೆ! Video
ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ರಚಿಸುವ ರೀನಾ ಎಂಬುವವರು, 75 ವರ್ಷದ ರಾಮ್ ಸಾಗರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನವರಾತ್ರಿಯಲ್ಲಿ ಸರಸ್ವತಿ ಪೂಜೆ: ಜ್ಞಾನ, ವಿದ್ಯೆ ಅಧಿದೇವತೆಯ ಆರಾಧನೆ
ಜ್ಞಾನ, ವಿವೇಕ, ಸಂಗೀತ, ಕಲೆ ಮತ್ತು ವಿದ್ಯೆಯ ಸಾಕಾರ ರೂಪವಾದ ಸರಸ್ವತಿ ದೇವಿಯ ಆರಾಧನೆಯು ನಿಜವಾದ ಸಮೃದ್ಧಿ ಎಂದರೆ ಕೇವಲ ಭೌತಿಕ ಸಂಪತ್ತಲ್ಲ; ಅದು ಮನಸ್ಸಿನ ಶ್ರೀಮಂತಿಕೆ ಮತ್ತು ಹೃದಯದ ನಿರ್ಮಲತೆಯಲ್ಲಿಯೂ ಅಡಗಿದೆ ಎಂಬುದನ್ನು ನೆನಪಿಸುತ್ತದೆ.

ನವರಾತ್ರಿ ಉಪವಾಸದ ಆಚರಣೆ ಹೇಗೆ? ಒಪ್ಪತ್ತು ಊಟ- ಕಟ್ಟುನಿಟ್ಟಾದ ಬ್ರಹ್ಮಚರ್ಯ ಪಾಲನೆ ಕಡ್ಡಾಯ!
ಅಕ್ಟೋಬರ್ 20 ರ ಮಂಗಳವಾರದಂದು ಮಹಾನವಮಿ ಮತ್ತು ಆಯುಧ ಪೂಜೆ ಬರುತ್ತವೆ. ದೀರ್ಘಕಾಲದ ನವರಾತ್ರಿ ಹಬ್ಬವು ಅಕ್ಟೋಬರ್ 21 ರಂದು ವಿಜಯದಶಮಿ ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ.
ಕರ್ನಾಟಕದಲ್ಲಿ ನವರಾತ್ರಿ: ಭಕ್ತಿ, ಸಂಪ್ರದಾಯ, ಸಾಂಸ್ಕೃತಿಕ ವೈಭವದ ಒಂಬತ್ತು ರಾತ್ರಿಗಳು
ನಾಡಿನ ರಾಜವೈಭವ, ಜಾನಪದ ಸಂಪ್ರದಾಯಗಳು, ಕಲಾ ಪರಂಪರೆ ಮತ್ತು ಆದಿಶಕ್ತಿಯ ಮೇಲಿನ ಆಳವಾದ ಭಕ್ತಿಯ ಸುಂದರ ಸಂಗಮ. ಪ್ರಾಚೀನ ಆಚರಣೆಗಳು, ರಾಜಪರಂಪರೆಯ ವೈಭವ ಮತ್ತು ದೈನಂದಿನ ಬದುಕಿನ ಸಾಂಸ್ಕೃತಿಕ ಸಂಪ್ರದಾಯಗಳು ಒಂದಾಗಿ ಬೆರೆತು ನವರಾತ್ರಿಯನ್ನು ಅನನ್ಯ ಅನುಭವವನ್ನಾಗಿಸುತ್ತವೆ.
ಒಂಬತ್ತು ದಿನ, 9 ರೂಪ; ನವರಾತ್ರಿ ನವಶಕ್ತಿಯ ಕಥೆ
ನವರಾತ್ರಿಯ ಒಂಬತ್ತು ದಿನಗಳನ್ನು ದೇವಿಯ ಒಂಬತ್ತು ರೂಪಗಳ ಆರಾಧನೆಗೆ ಸಮರ್ಪಿಸಲಾಗಿದೆ. ಅವುಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ದುರ್ಗಾ ಅಥವಾ ಪರಾಶಕ್ತಿ.

ಬೊಂಬೆಗಳ ಹಿಂದೆ ಅಡಗಿರುವ ಕಥೆಗಳು: ನವರಾತ್ರಿ ಗೊಂಬೆಹಬ್ಬದ ವಿಶೇಷತೆ
ಗೊಂಬೆಗಳನ್ನು ಸಾಮಾನ್ಯವಾಗಿ ಒಂಬತ್ತು ಮೆಟ್ಟಿಲುಗಳಲ್ಲಿ (ಗೊಂಬೆ ಜಗಲಿ) ಜೋಡಿಸಲಾಗುತ್ತದೆ. ಇವು ನವರಾತ್ರಿಯ ಒಂಬತ್ತು ದಿನಗಳು ಮತ್ತು ನವಗ್ರಹಗಳನ್ನು ಸೂಚಿಸುತ್ತವೆ.
ದುರ್ಗೆಯ ಒಂಬತ್ತು ರೂಪಗಳು; ಬದುಕಿಗೆ ಬೆಳಕಾಗುವ 9 ಜ್ಯೋತಿಗಳು!
ದುರ್ಗೆಯ ಪ್ರತಿಯೊಂದು ರೂಪವೂ ಒಂದು ವಿಶಿಷ್ಟ ಗುಣವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯಿದೆ. ಆ ಗುಣಗಳನ್ನು ಇಂದಿನ ಬದುಕಿನೊಂದಿಗೆ ಬೆಸೆಯುವ ಪ್ರಯತ್ನ ಮಾಡಿದರೆ, ನವರಾತ್ರಿ ಕೇವಲ ಆಚರಣೆಯಾಗಿ ಉಳಿಯದೆ ಆತ್ಮಾವಲೋಕನದ ಹಬ್ಬವೂ ಆಗಬಲ್ಲದು.

