ಕಪ್ಪು ಸಮುದ್ರದಲ್ಲಿರುವ ಭಾರತೀಯರಿಗೆ ಸುರಕ್ಷತೆ ನೀಡಿ; ವ್ಯಾಪಾರ, ರಕ್ಷಣಾ ಸಹಕಾರ, ಉಕ್ರೇನ್ ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತುಕತೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬ್ರಿಕ್ಸ್‌ (BRICS) ಯಾರ ವಿರುದ್ಧವೂ ಅಲ್ಲ. ಜಗತ್ತಿನ ಎಲ್ಲ ದೇಶಗಳೊಂದಿಗೆ ಕೆಲಸ ಮಾಡಲು ರಷ್ಯಾ ಮುಕ್ತವಾಗಿದೆ, ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಒಪ್ಪಿಗೆ ಸೂಚಿಸಿದರು.
ಕಪ್ಪು ಸಮುದ್ರದಲ್ಲಿರುವ ಭಾರತೀಯರಿಗೆ ಸುರಕ್ಷತೆ ನೀಡಿ; ವ್ಯಾಪಾರ, ರಕ್ಷಣಾ ಸಹಕಾರ, ಉಕ್ರೇನ್ ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತುಕತೆ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕಡಲ ಭದ್ರತೆ, ಪ್ರಮುಖ ಖನಿಜಗಳು, ಕೈಗಾರಿಕಾ ಸಹಭಾಗಿತ್ವ ಮತ್ತು ನಾಗರಿಕ ಪರಮಾಣು ಸಹಕಾರ ಸೇರಿದಂತೆ ವಿಸ್ತರಿಸುತ್ತಿರುವ ಭಾರತ-ರಷ್ಯಾ ಸಹಕಾರದ ವಿವಿಧ ಆಯಾಮಗಳ ಕುರಿತು ಪರಿಶೀಲನೆ ನಡೆಸಿದರು.

“ಸಂವಾದ ಮತ್ತು ರಾಜತಾಂತ್ರಿಕತೆ”ಯೇ ಸಂಘರ್ಷಗಳನ್ನು ಪರಿಹರಿಸುವ ಮುಂದಿನ ಮಾರ್ಗವಾಗಿದೆ ಎಂದು ಮೋದಿ ಪುನರುಚ್ಚರಿಸಿದರು. ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ನೆರವು ನೀಡಲು ಭಾರತ ಸಿದ್ಧವಿದೆ ಎಂದೂ ಅವರು ಹೇಳಿದರು.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬ್ರಿಕ್ಸ್‌ (BRICS) ಯಾರ ವಿರುದ್ಧವೂ ಅಲ್ಲ. ಜಗತ್ತಿನ ಎಲ್ಲ ದೇಶಗಳೊಂದಿಗೆ ಕೆಲಸ ಮಾಡಲು ರಷ್ಯಾ ಮುಕ್ತವಾಗಿದೆ, ಭಾರತದೊಂದಿಗಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಒಪ್ಪಿಗೆ ಸೂಚಿಸಿದರು.

ಶೃಂಗಸಭೆಗೆ ಮುನ್ನ ಬ್ರಿಕ್ಸ್‌ ಉದ್ಯಮ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್, ಆರ್ಕ್ಟಿಕ್ ಸಾರಿಗೆ ಕಾರಿಡಾರ್ ಮತ್ತು ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಸೇರಿದಂತೆ ಮೂಲಸೌಕರ್ಯ ಮತ್ತು ಸರಕು ಸಾಗಣೆ ಯೋಜನೆಗಳಲ್ಲಿ ಪಾಲುದಾರ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ರಷ್ಯಾ ಸಿದ್ಧವಿದೆ ಎಂದರು. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಮಾನವರಹಿತ ಸಾರಿಗೆ, ಹಣಕಾಸು, ಪ್ರವಾಸೋದ್ಯಮ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲೂ ಸಹಕಾರಕ್ಕೆ ರಷ್ಯಾ ಸಿದ್ಧವಿದೆ ಎಂದು ಹೇಳಿದರು.

ಕಪ್ಪು ಸಮುದ್ರದಲ್ಲಿರುವ ಭಾರತೀಯರಿಗೆ ಸುರಕ್ಷತೆ ನೀಡಿ; ವ್ಯಾಪಾರ, ರಕ್ಷಣಾ ಸಹಕಾರ, ಉಕ್ರೇನ್ ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತುಕತೆ
BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ನಾವು ಯಾರ ವಿರುದ್ಧವೂ ಇಲ್ಲ. ನಾವು ನಮ್ಮ ಹಿತಾಸಕ್ತಿಗಳ ಪರವಾಗಿದ್ದೇವೆ ಎಂದು ಪುಟಿನ್ ಹೇಳಿದರು. ಇದೇ ವೇಳೆ ಬ್ರಿಕ್ಸ್‌ ಸಂಘಟನೆಯು ವಿಶ್ವದ ಇತರ ರಾಷ್ಟ್ರಗಳೊಂದಿಗೂ ಸಹಕಾರಕ್ಕೆ ಮುಕ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ದೆಹಲಿ‌ನಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್‌ ಶೃಂಗಸಭೆಯ ಹಿನ್ನೆಲೆಯಲ್ಲಿ ಉಭಯ ನಾಯಕರು ನಡೆಸಿದ ಸಭೆಯಲ್ಲಿ ಈ ಹೇಳಿಕೆಗಳು ಬಂದಿವೆ. ಕೇವಲ ಎರಡು ವಾರಗಳ ಅವಧಿಯಲ್ಲಿ ಮೋದಿ ಮತ್ತು ಪುಟಿನ್ ಭೇಟಿಯಾಗುತ್ತಿರುವುದು ಇದು ಎರಡನೇ ಬಾರಿ.

ಕಳೆದ ವಾರ ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಪುಟಿನ್ ಈ ಹಿಂದೆ ಭೇಟಿಯಾಗಿದ್ದರು. ಸಂಘರ್ಷವನ್ನು ತಕ್ಷಣ ಅಂತ್ಯಗೊಳಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು. ಅಲ್ಲದೆ, “ಅಂತ್ಯವಿಲ್ಲದ ಯುದ್ಧ”ದಿಂದ “ಯುದ್ಧವನ್ನು ಅಂತ್ಯಗೊಳಿಸುವ”ತ್ತ ಸಾಗುವಂತೆ ರಷ್ಯಾ ಅಧ್ಯಕ್ಷರಿಗೆ ಮನವಿ ಮಾಡಿದ್ದರು.

ಸಭೆಯ ವೇಳೆ ಪ್ರಧಾನಿ ಮೋದಿ ಅವರು ಪ್ರಾಚೀನ ತಮಿಳು ಕೃತಿ ತಿರುಕ್ಕುರಳ್‌ನ ರಷ್ಯನ್ ಅನುವಾದದ ಪ್ರತಿಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು.

2026ರ ಆವೃತ್ತಿಯಲ್ಲಿ ಮೂಲ ತಮಿಳು ಪದ್ಯಗಳು, ಅವುಗಳ ಲಿಪ್ಯಂತರ ಮತ್ತು ನಾಯ್ರಾ ಎಂಕ್ರ್ಟ್ಚ್ಯಾನ್ ಅವರ ರಷ್ಯನ್ ಅನುವಾದವನ್ನು ಒಳಗೊಂಡಿದೆ.

ಶುಕ್ರವಾರದ ಅಧಿಕೃತ ಹೇಳಿಕೆಯ ಪ್ರಕಾರ, ಪಶ್ಚಿಮ ಏಷ್ಯಾ ಮತ್ತು ಕಪ್ಪು ಸಮುದ್ರ ಪ್ರದೇಶದಲ್ಲಿನ ಸಂಘರ್ಷಗಳು ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂಘರ್ಷಗಳು ಸಮುದ್ರ ವ್ಯಾಪಾರ ಮತ್ತು ಭಾರತೀಯ ನಾವಿಕರ ಸುರಕ್ಷತೆ ಹಾಗೂ ಭದ್ರತೆ ಮೇಲೆ ಪರಿಣಾಮ ಬೀರಿವೆ.

ಕಪ್ಪು ಸಮುದ್ರದಲ್ಲಿರುವ ಭಾರತೀಯರಿಗೆ ಸುರಕ್ಷತೆ ನೀಡಿ; ವ್ಯಾಪಾರ, ರಕ್ಷಣಾ ಸಹಕಾರ, ಉಕ್ರೇನ್ ಯುದ್ಧ ಕುರಿತು ಪುಟಿನ್ ಜೊತೆ ಮೋದಿ ಮಾತುಕತೆ
BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಸಂಘರ್ಷಗಳನ್ನು ಪರಿಹರಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯೇ ಮುಂದಿನ ಮಾರ್ಗವಾಗಿದೆ ಎಂದು ಪ್ರಧಾನಿ ಮತ್ತೊಮ್ಮೆ ಪುನರುಚ್ಚರಿಸಿದರು. ಶಾಂತಿ ಸ್ಥಾಪನೆಯ ಪ್ರಯತ್ನಗಳಿಗೆ ನೆರವು ನೀಡಲು ಭಾರತ ಸಿದ್ಧವಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾವಿಕರು ಮತ್ತು ಸಮುದ್ರ ವ್ಯಾಪಾರದ ಸುರಕ್ಷತೆಯ ಮೇಲಿನ ಗಮನವು ಭೌಗೋಳಿಕ ರಾಜಕೀಯ ಚರ್ಚೆಗಳಿಗೆ ಭಾರತದ ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಳ ನೇರ ಆಯಾಮವನ್ನು ನೀಡಿದೆ. ಪಶ್ಚಿಮ ಏಷ್ಯಾ ಮತ್ತು ಕಪ್ಪು ಸಮುದ್ರ ಪ್ರದೇಶದಲ್ಲಿನ ಸಂಘರ್ಷಗಳಿಂದ ಸಾಗಣೆ ಮಾರ್ಗಗಳಿಗೆ ಅಡಚಣೆಯಾಗುತ್ತಿದ್ದು, ವಾಣಿಜ್ಯ ಹಡಗುಗಳು ಮತ್ತು ಅವುಗಳ ಸಿಬ್ಬಂದಿಗೆ ಅಪಾಯ ಹೆಚ್ಚುತ್ತಿದೆ.

ಮಾತುಕತೆಯಲ್ಲಿ ಭಾರತ-ರಷ್ಯಾ ನಡುವಿನ ವಿಶಾಲ ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆಯೂ ಚರ್ಚಿಸಲಾಯಿತು. ರಾಜಕೀಯ, ಆರ್ಥಿಕತೆ, ರಕ್ಷಣಾ, ಇಂಧನ, ಬಾಹ್ಯಾಕಾಶ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳ ಚಲನೆ ಹಾಗೂ ಜನರಿಂದ ಜನರ ನಡುವಿನ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಹಕಾರವನ್ನು ಮೋದಿ ಮತ್ತು ಪುಟಿನ್ ಪರಿಶೀಲಿಸಿದರು.

ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶಿಷ್ಟ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಉಭಯ ನಾಯಕರು ಒಪ್ಪಿಕೊಂಡರು. ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆಯೂ ಈ ಸಹಭಾಗಿತ್ವವು “ಗಮನಾರ್ಹ ಬೆಳವಣಿಗೆ” ಮತ್ತು “ಸ್ಥಿತಿಸ್ಥಾಪಕತೆ”ಯನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಅವರು ಹೇಳಿದರು.

ಮುಂದಿನ ಹಂತದ ಭಾರತ-ರಷ್ಯಾ ಸಂಬಂಧದಲ್ಲಿ ವ್ಯಾಪಾರ ಮತ್ತು ಆರ್ಥಿಕ ವೈವಿಧ್ಯೀಕರಣ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯತ್ತ ಭಾರತ ಮತ್ತು ರಷ್ಯಾ ಕೆಲಸ ಮಾಡುತ್ತಿವೆ. ರಷ್ಯಾದಿಂದ ಇಂಧನ ಆಮದು ಗಣನೀಯವಾಗಿ ಹೆಚ್ಚಿರುವುದರಿಂದ ವ್ಯಾಪಾರ ಅಸಮತೋಲನವೂ ಹೆಚ್ಚಾಗಿದೆ.

ರಷ್ಯಾದೊಂದಿಗೆ ದ್ವಿಮುಖ ವ್ಯಾಪಾರವನ್ನು ಹೆಚ್ಚಿಸುವುದರ ಜೊತೆಗೆ, ರಷ್ಯಾಕ್ಕೆ ಭಾರತದ ರಫ್ತುಗಳನ್ನು ಬಲಪಡಿಸಲು ಭಾರತ ಪ್ರಯತ್ನಿಸುತ್ತಿದೆ.

ಆರ್ಥಿಕ ಸಹಕಾರವು ಈಗ ತೈಲ ಮತ್ತು ರಕ್ಷಣಾ ಕ್ಷೇತ್ರಗಳನ್ನು ಮೀರಿ ವಿಸ್ತರಿಸುತ್ತಿದೆ. ವ್ಯಾಪಕ ಕೈಗಾರಿಕಾ ವಿಸ್ತರಣೆಯ ಭಾಗವಾಗಿ ರೈಲು ಮತ್ತು ಸುರಂಗ ನಿರ್ಮಾಣ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಇದರಿಂದ ರಷ್ಯಾದ ಎಂಜಿನಿಯರಿಂಗ್ ಸಾಮರ್ಥ್ಯಗಳನ್ನು ಭಾರತದ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯದ ವಿಸ್ತರಣೆಯೊಂದಿಗೆ ಜೋಡಿಸುವ ಸಾಧ್ಯತೆಯಿದೆ.

ಪ್ರಮುಖ ಖನಿಜಗಳು ಮತ್ತೊಂದು ಕಾರ್ಯತಂತ್ರದ ಆದ್ಯತೆಯಾಗಿ ಹೊರಹೊಮ್ಮುತ್ತಿವೆ. ಅನ್ವೇಷಣೆ, ಸಂಸ್ಕರಣೆ ಮತ್ತು ಮರುಬಳಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಎರಡೂ ದೇಶಗಳು ಪರಿಶೀಲಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದುವರಿದ ಉತ್ಪಾದನೆ, ಸ್ವಚ್ಛ ಇಂಧನ ತಂತ್ರಜ್ಞಾನಗಳು ಮತ್ತು ಕಾರ್ಯತಂತ್ರದ ಕೈಗಾರಿಕೆಗಳಿಗೆ ಅಗತ್ಯವಿರುವ ಖನಿಜಗಳ ಸುರಕ್ಷಿತ ಲಭ್ಯತೆಯ ಕುರಿತು ಹೆಚ್ಚುತ್ತಿರುವ ಕಳವಳದ ಹಿನ್ನೆಲೆಯಲ್ಲಿ ಈ ಸಹಕಾರ ಮಹತ್ವ ಪಡೆದಿದೆ.

ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧ ಉತ್ಪನ್ನಗಳವರೆಗೆ ಉಕ್ಕಿನ ಮೌಲ್ಯ ಸರಪಳಿಯಲ್ಲಿ ಸಹಭಾಗಿತ್ವದ ಸಾಧ್ಯತೆಯನ್ನೂ ಭಾರತ ಮತ್ತು ರಷ್ಯಾ ಪರಿಶೀಲಿಸುತ್ತಿವೆ. ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಆಳಗೊಳಿಸುವುದು ಮತ್ತು ಮೌಲ್ಯವರ್ಧಿತ ವ್ಯಾಪಾರವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ನಾಗರಿಕ ಪರಮಾಣು ಸಹಕಾರವೂ ಮತ್ತೊಂದು ಪ್ರಮುಖ ಆಧಾರಸ್ತಂಭವಾಗಿ ಮುಂದುವರಿದಿದೆ.

ಪರಮಾಣು ಇಂಧನ ಚಕ್ರದ ಸಹಕಾರ ಹಾಗೂ ಭಾರತದಲ್ಲಿರುವ ರಷ್ಯಾ ವಿನ್ಯಾಸದ ಅಣು ರಿಯಾಕ್ಟರ್‌ಗಳಿಗೆ ಅವುಗಳ ಸಂಪೂರ್ಣ ಕಾರ್ಯಾವಧಿಯಲ್ಲಿ ಅಗತ್ಯವಿರುವ ಬೆಂಬಲದ ಬಗ್ಗೆಯೂ ಚರ್ಚಿಸಲಾಯಿತು. ಇದೇ ವೇಳೆ ಮತ್ತೊಂದು ರಷ್ಯಾ ವಿನ್ಯಾಸದ ರಿಯಾಕ್ಟರ್ ಸ್ಥಾಪನೆಗೆ ಸಂಬಂಧಿಸಿದ ಮಾತುಕತೆಗಳನ್ನೂ ಮುಂದುವರಿಸಲು ನಿರ್ಧರಿಸಲಾಗಿದೆ.

ಸೆಪ್ಟೆಂಬರ್ 9ರಿಂದ 11ರವರೆಗೆ ದೆಹಲಿಯಲ್ಲಿ ನಡೆದ ರಷ್ಯಾದ INNOPROM India ಕೈಗಾರಿಕಾ ಪ್ರದರ್ಶನದ ಮೊದಲ ಆವೃತ್ತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಮೋದಿ ಮತ್ತು ಪುಟಿನ್ ಪ್ರದರ್ಶನಕ್ಕೆ ಭೇಟಿ ನೀಡಿ ಭಾಗವಹಿಸಿದ್ದವರೊಂದಿಗೆ ಸಂವಾದ ನಡೆಸಿದರು. ಇದರಿಂದ ವ್ಯಾಪಾರ ಮತ್ತು ಕೈಗಾರಿಕಾ ಬಾಂಧವ್ಯವನ್ನು ವಿಸ್ತರಿಸುವ ಅವರ ಬದ್ಧತೆ ಮತ್ತಷ್ಟು ಸ್ಪಷ್ಟವಾಯಿತು.

ಸಭೆಯು ಮುಂದಿನ ವಾರ್ಷಿಕ ಶೃಂಗಸಭೆಗೆ ವೇದಿಕೆಯನ್ನೂ ಸಿದ್ಧಪಡಿಸಿತು. 24ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಅವರು ಮೋದಿಯವರನ್ನು ರಷ್ಯಾಕ್ಕೆ ಆಹ್ವಾನಿಸಿದರು. ಪ್ರಧಾನಿ ಮೋದಿ ಆಹ್ವಾನವನ್ನು ಸ್ವೀಕರಿಸಿದರು. ಶೃಂಗಸಭೆಯ ದಿನಾಂಕವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಂತಿಮಗೊಳಿಸಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com