ಕಳಪೆ ರಸ್ತೆ ಪ್ರಶ್ನಿಸಿದ್ದೇ ತಪ್ಪಾಯ್ತಾ? ಸಾರ್ವಜನಿಕವಾಗಿ ಯುವಕನ ಕೆನ್ನೆಗೆ ಬಾರಿಸಿದ ಬಿಜೆಪಿ ಸಚಿವ; ಕೇಜ್ರಿವಾಲ್ ಕಿಡಿ

ದೆಹಲಿಯ ಲೋಕೋಪಯೋಗಿ ಸಚಿವ ಪರ್ವೇಶ್ ವರ್ಮಾ ಪಶ್ಚಿಮ ದೆಹಲಿಯ ತಿಲಕ್ ನಗರದಲ್ಲಿ ರಸ್ತೆ ತಪಾಸಣೆ ನಡೆಸುತ್ತಿದ್ದ ವೇಳೆ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದ್ದು, ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
Delhi PWD Minister Parvesh Verma Slaps Youth During Road Inspection
ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಸಚಿವ ಪರ್ವೇಶ್ ವರ್ಮಾ AAP X Handle
Updated on: 

ನವದೆಹಲಿ: ದೆಹಲಿಯ ಲೋಕೋಪಯೋಗಿ (PWD) ಸಚಿವ ಮತ್ತು ಬಿಜೆಪಿ ಮುಖಂಡ ಪರ್ವೇಶ್ ವರ್ಮಾ ಅವರು ರಸ್ತೆ ತಪಾಸಣೆ ವೇಳೆ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದ್ದು, ಆಮ್ ಆದ್ಮಿ ಪಾರ್ಟಿ (AAP) ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ನವದೆಹಲಿಯ ಪಶ್ಚಿಮ ಭಾಗದ ತಿಲಕ್ ನಗರದಲ್ಲಿ ಈ ಹೈಡ್ರಾಮಾ ನಡೆದಿದ್ದು, ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ವಿವಾದ?

ಸಚಿವ ಪರ್ವೇಶ್ ವರ್ಮಾ ಅವರು ತಿಲಕ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆಯೊಂದರ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಸ್ಥಳೀಯ ಆಪ್ ಶಾಸಕ ಜರ್ನೈಲ್ ಸಿಂಗ್, ಹೊಸದಾಗಿ ನಿರ್ಮಿಸುತ್ತಿರುವ ರಸ್ತೆಯ ಗುಣಮಟ್ಟ ತೀರ ಕಳಪೆಯಾಗಿದ್ದು, ಕೈಯಲ್ಲೇ ಕಿತ್ತುಬರುತ್ತಿದೆ ಎಂದು ಸಚಿವರಿಗೆ ತೋರಿಸಿ ಭ್ರಷ್ಟಾಚಾರದ ಪ್ರಶ್ನೆಗಳನ್ನು ಎತ್ತಿದರು. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಶಾಸಕರೊಂದಿಗೆ ಸಚಿವರ ವಾಗ್ವಾದ ನಡೆಯುತ್ತಿದ್ದಾಗ ಜರ್ನೈಲ್ ಸಿಂಗ್ ಅವರ ಬೆಂಬಲಿಗ ಸಾಹಿಬ್ ಸಿಂಗ್ ಎಂಬ ಯುವಕ ಇಡೀ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದನು. ಇದರಿಂದ ಆಕ್ರೋಶಗೊಂಡ ಸಚಿವ ಪರ್ವೇಶ್ ವರ್ಮಾ ಅವರು ಎಡಗೈಯಿಂದ ಆತನ ಮೊಬೈಲ್ ಅನ್ನು ಕೆಳಗೆ ತಳ್ಳಿ, ಬಲಗೈಯಿಂದ ಯುವಕನ ಕೆನ್ನೆಗೆ ಬಾರಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇನ್ನು, ಕಪಾಳಮೋಕ್ಷ ಮಾಡಿದ ತಕ್ಷಣ ಆ ಯುವಕ ಮತ್ತು ಸಚಿವರ ನಡುವೆ ಸಣ್ಣ ಮಟ್ಟದ ದೈಹಿಕ ಘರ್ಷಣೆ ಏರ್ಪಟ್ಟಿದ್ದು, ಕೂಡಲೇ ಸಚಿವರ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಯುವಕನನ್ನು ದೂರ ಸರಿಸಿದ್ದಾರೆ. ಅಲ್ಲಿ ನೆರೆದಿದ್ದ ಜನರು "ಸಾಮಾನ್ಯ ಜನರಿಗೆ ಈ ರೀತಿ ಹೊಡೆಯಲು ಹೇಗೆ ಸಾಧ್ಯ?" ಎಂದು ಸಚಿವರ ವಿರುದ್ಧ ಘೋಷಣೆ ಕೂಗಿದ್ದಾರೆ.

Delhi PWD Minister Parvesh Verma Slaps Youth During Road Inspection
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಮತ್ತೊಂದು ಸಂಕಟ? ಚುನಾವಣಾ ಆಯೋಗದಲ್ಲಿ ಬಿಕ್ಕಟ್ಟಿನ ಬೆನ್ನಲ್ಲೇ 20 ವರ್ಷಗಳ ಹಿಂದಿನ ಆತ್ಮಹತ್ಯೆ ಕೇಸ್ ಕೆದಕಿದ ಮಾಜಿ ಸಚಿವ

ಮುಂದುವರೆದು, ಈ ವೀಡಿಯೋವನ್ನು ಹಂಚಿಕೊಂಡಿರುವ ಆಪ್ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, "ರಸ್ತೆ ಕಾಮಗಾರಿಯ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ಮೋದಿ ಸರ್ಕಾರದ ಸಚಿವರೊಬ್ಬರು ಸಾರ್ವಜನಿಕವಾಗಿ ಯುವಕನಿಗೆ ಹೊಡೆದಿದ್ದಾರೆ. ತಕ್ಷಣ ಈ ಸಚಿವರನ್ನು ಬಂಧಿಸಬೇಕು" ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ನಾಳೆ ತಾವು ಖುದ್ದಾಗಿ ಆ ರಸ್ತೆಯ ಪರಿಶೀಲನೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ

Delhi PWD Minister Parvesh Verma Slaps Youth During Road Inspection
ಬಿಜೆಪಿಯಿಂದ ನನಗೆ ಏನೂ ಸಿಕ್ಕಿಲ್ಲ ಎಂದ ಕ್ಯಾಪ್ಟನ್; ಪಕ್ಷ ತೊರೆಯುತ್ತಾರ ಮಾಜಿ ಸಿಎಂ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com