ದೆಹಲಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ನಿವೃತ್ತ ಅಧಿಕಾರಿ ಎಂ.ಎನ್.ಬುಚ್ ಅವರ ಸ್ಮರಣಾರ್ಥ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಪರಸ್ಪರ ಕುಶಲೋಪರಿ ವಿಚಾರಿಸಿದರು.
ನೈರೋಬಿಯ ಉತ್ತರದಲ್ಲಿರುವ ಕೀನ್ಯಾ ಪರ್ವತದ ಕೆಳಗಿನ ಒಲ್-ಪೆಜೆಟಾ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಹಾಯಾರ್ಥ ಕ್ರಿಕೆಟ್ ಪಂದ್ಯ ನಡೆಯಿತು. ಈ ವೇಳೆ ಬ್ರಿಟಿಷ್ ಆರ್ಮಿ ಟ್ರೈನಿಂಗ್ ಯುನಿಟ್ ನ ಸದಸ್ಯನನ್ನು ಔಟ್ ಮಾಡಿದ ಮಸ್ಸಾಯ್ ವಾರಿಯರ್ಸ್ ಪ್ಲೇಯರ್ ಗಳು ಸಂಭ್ರಮಿಸಿದ ಪರಿಯಿದು.
ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ಮಳೆಯ ನಡುವೆಯೇ ಶಾಲಾ ವಿದ್ಯಾರ್ಥಿಗಳು ಸೈಕಲ್ ಸವಾರಿ ಕ್ಯಾಮೆರಾ ಕಣ್ಣಲ್ಲಿ ಕಂಡಿದ್ದು ಹೀಗೆ.
ಮಥುರಾದಲ್ಲಿ ಪ್ರವಾಹ ಸ್ಥಿತಿ... ಮಥುರಾದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ತಲೆದೊರಿದೆ. ಜಲಾವೃತ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಸೈಕಲ್ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವುದು.
ಜರ್ಮನಿಯ ಟೆಕ್‌ನಿಸ್ಚೆ ವಿವಿಗೆ ಭೇಟಿ ನೀಡಿದ ವೇಳೆ ಬ್ರಿಟನ್ ರಾಣಿ ಎಲಿಜಬೆತ್-2 ಅವರಿಗೆ ರೋಬೋಟ್‌ವೊಂದು ಸೆಲ್ಯೂಟ್ ಮಾಡಿದ್ದು ಹೀಗೆ. ರಾಣಿ ಹಾಗೂ ಅವರ ಪತಿ ಪ್ರಿನ್ಸ್ ಫಿಲಿಪ್ ಅವರು ಜೂ.26ರವರೆಗೆ ಜರ್ಮನಿ ಪ್ರವಾಸದಲ್ಲಿದ್ದಾರೆ.
ಗದಗ ಜಿಲ್ಲೆಯ ನರಗುಂದದಲ್ಲಿ ಮಂಗಳವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಉದ್ಘಾಟಿಸಿದರು.
ಜಯಾ ಪ್ರಚಾರ: 29ರಂದು ನಡೆಯುವ ಚೆನ್ನೈನ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಸೋಮವಾರ ಅದ್ಧೂರಿ ಪ್ರಚಾರ ನಡೆಸಿದರು. ಈ ವೇಳೆ ಸ್ನೇಹಿತೆ ಶಶಿಕಲಾ ಜತೆಗೂಡಿ ಬುಲೆಟ್‌ಪ್ರೂಫ್ ವ್ಯಾನ್‌ನಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು
ಶಿಲ್ಪಾ ಸೆಲ್ಫಿ... ಅಂತಾರಾಷ್ಟ್ರೀಯ ಯೋಗದಿನಕ್ಕೆ ಬೆಂಗಳೂರಿನಲ್ಲಿ ಗ್ರಾಮರ್ ತಂದುಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವಚನಾನಂದ ಗುರು ಅವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡು ಸಂಭ್ರಮಿಸಿದರು.
ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಯೋಗಥಾನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗದಿಂದಾಗುವ ಪ್ರಯೋಜನದ ಬಗ್ಗೆ ಅರಿವು ಮೂಡಿಸಲು ವಿಧಾನಸೌಧ ಮುಂದೆ ಫಲಕ ಪ್ರದರ್ಶನ ಮಾಡಿದರು.
ಆಂಟಿ ಗ್ರ್ಯಾವಿಟಿ ಯೋಗ... ಇದು ಹೊಸ ರೀತಿಯ ಯೋಗದ ಮಾದರಿಯಾಗಿದ್ದು, ಗುಜರಾತ್ ನ ಅಹ್ಮದಾಬಾದ್ ನಲ್ಲಿ ಪ್ರದರ್ಶಿಸಲಾಗುತ್ತಿದೆ.
ಸಮುದ್ರ ಮಧ್ಯೆ ಯೋಗಾಭ್ಯಾಸ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಮುದ್ರ ಮಧ್ಯೆ ಯುದ್ಧನೌಕೆಯಲ್ಲಿ ನೌಕಾಪಡೆ ಯೋಧರಿಂದ ಯೋಗಾಭ್ಯಾಸ.
ಮುಂಬೈನಲ್ಲಿ ಮಂಗಳವಾರ ನಡೆದ ಫ್ಯಾಷನ್ ಶೋವೊಂದರಲ್ಲಿ ಬಾಲಿವುಡ್ ನಟಿ ಶೃತಿ ಹಾಸನ್ ಕಾಣಿಸಿಕೊಂಡಿದ್ದು ಹೀಗೆ. ಹೊಸ ಉಡುಗೆಯೊಂದನ್ನು ಪರಿಚಯಿಸುವ ಸಲುವಾಗಿ ಈ ಫ್ಯಾಷನ್ ಶೋ ಏರ್ಪಡಿಸಲಾಗಿತ್ತು.
ಆಹಾ ಮಾವು: ಧಾರವಾಡದಲ್ಲಿ ಸೋಮವಾರ ನಡೆದ ಮಾವು ಮೇಳದಲ್ಲಿ ಮಾವಿನಿಂದ ತಯಾರಿಸಿದ ಬಗೆ ಬಗೆಯ ತಿನಿಸು, ಪೇಯಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿನಿಯರು. ಚಿತ್ರ-ಕೆಪಿಎನ್
ಚಿತ್ರಗಳಲ್ಲಿ ಯಾತ್ರೆ: ಶಿವಶಕ್ತಿ ಸೇವಾ ಮಂಡಳಿ ನಗರದ ವೈ.ಎಚ್.ವೆಂಕಟರಮಣಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಅಮರನಾಥ್ ಯಾತ್ರೆ ಛಾಯಾಚಿತ್ರ ಪ್ರದರ್ಶನವನ್ನು ಸಚಿವರಾದ ರೋಷನ್ ಬೇಗ್ ಹಾಗೂ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು.
ಬಾಕಿ ಪಾವತಿಸುವಂತೆ ಒತ್ತಾಯಿಸಿ ಶುಕ್ರವಾರ ನೈರ್ಮಲ್ಯ ನೌಕರರು ಪೂರ್ವ ದೆಹಲಿಯಲ್ಲಿ ಪ್ರತಿಭನೆ ನಡೆಸುತ್ತಿದ್ದರೆ, ಅಲ್ಲಿಗೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, 'ನಾನೂ ನಿಮ್ಮೊಂದಿಗೆ ಪ್ರತಿಭಟನೆ ಕುಳಿತುಕೊಳ್ಳಲೇ' ಎಂದು ಪ್ರಶ್ನಿಸಿ ಪ್ರತಿಭಟನಾಕಾರರೊಂದಿಗೆ ಕುಳಿತುಬಿಟ್ಟರು.
ಅಭಿಮಾನಿಗಳ ಹರ್ಷೋಗ್ಧಾರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 2018 ರ ಫಿಫಾ ವಿಶ್ವಕಪ್ ನ ಅರ್ಹತಾ ಪಂದ್ಯ ಭಾರತ ಮತ್ತು ಒಮನ್ ನಡುವೆ ನಡೆದಿದ್ದು, ಈ ವೇಳೆ ಅಭಿಮಾನಿಗಳು ಭಾರತ ತಂಡವನ್ನು ಪ್ರೋತ್ಸಾಹಿಸಿದರು.
ಅಗ್ನಿ ಮತ್ತು ಮಳೆ: ಬೆಂಗಳೂರಿನಲ್ಲಿ ಬುಧವಾರ ಸಂಜೆ ದಟ್ಟೈಸಿದ್ದ ಮೋಡಗಳ ನಡುವೆ ಸೂರ್ಯಾಸ್ತದ ಚೆಲುವು ಕಾಣಿಸಿದ್ದು ಹೀಗೆ. ಚಿತ್ರ-ಕೆಪಿಎನ್
ಚಂದದ ಛತ್ರಿ: ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಮಳೆ ಸುರಿದಿದ್ದು, ಎಂ.ಜಿ.ರಸ್ತೆಯಲ್ಲಿ ಚಂದದ ಛತ್ರಿಗಳು ಕಾಣಿಸಿಕೊಂಡಿದ್ದು ಹೀಗೆ. ಚಿತ್ರ-ಕೆಪಿಎನ್
ದಕ್ಷಿಣ ಜರ್ಮನಿಯಲ್ಲಿ ಜಿ-7 ಶೃಂಗಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಒಬಾಮ ಹಾಗೂ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಗಾಢವಾದ ಮಾತುಕತೆಯಲ್ಲಿ ತೊಡಗಿದ ಕ್ಷಣ.
ತಣ್ಣೀರ ಸ್ನಾನ: ಬಿಸಿಲ ಬೇಗೆಯಿಂದ ಬಸವಳಿದಿರುವ ಬಾಲಕರು ಭಾನುವಾರ ದೆಹಲಿಯ ಇಂಡಿಯಾ ಗೇಟ್ ಸಮೀಪದ ಕೊಳದಲ್ಲಿ ಸ್ನಾನ ಮಾಡುತ್ತಿರುವುದು.
ಹನಿ ನೀರು ಅಮೃತ... ಬಿಸಿಲ ತಾಪಕ್ಕೆ ಬಸವಳಿದ ಮಂಗವೊಂದು ದಾಹ ನೀಗಿಸಿಕೊಳ್ಳಲು ನಲ್ಲಿ ನೀರು ಕುಡಿಯುತ್ತೀರುವ ಚಿತ್ರ.
ಮಗುವೊಂದಿಗೆ ಮಗುವಾಗಿ... ಅಮೆರಿಕ ಅಧ್ಯಕ್ಷ ಒಬಾಮ ಅವರು ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಬೆನ್ ರೋಡ್ಸ್ ಅವರ ಪುತ್ರಿ ಎಲ್ಲಾ ಹಾರ್ಪರ್ ರೋಡ್ಸ್ ಜತೆ ಆಟವಾಡಿದ್ದು ಹೀಗೆ.
ಭಾವಿ ಪತ್ನಿಯೊಂದಿಗೆ ರೋಹಿತ್ ಶರ್ಮಾ: ಮುಂಬೈನಲ್ಲಿ ಗುರುವಾರ ನಡೆದ ಕ್ರಿಕೆಟಿಗ ರೋಹಿತ್ ಶರ್ಮಾ ಹಾಗೂ ಅವರ ಭಾವಿ ಪತ್ನಿ ರಿತಿಕಾ ಸಾಜ್ದೆಯವರ ವೀಳ್ಯಶಾಸ್ತ್ರ ಸಮಾರಂಭದಲ್ಲಿ ಇಬ್ಬರೂ ಛಾಯಾಗ್ರಾಹಕರಿಗೆ ಕಾಣಿಸಿಕೊಂಡಿದ್ದು ಹೀಗೆ.
ಮಾಜಿ-ಹಾಲಿ ಪ್ರಧಾನಿಗಳ ಭೇಟಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದೇಶದ ಕೃಷಿ ಕ್ಷೇತ್ರದ ಬೆಳವಣಿಗೆ ಮತ್ತು ರೈತರ ಪರಿಸ್ಥಿತಿ ಬಗ್ಗೆ ಪ್ರಧಾನಿ ಜತೆ ಚರ್ಚಿಸಿದ್ದಾಗಿ ದೇವೇಗೌಡರು ಬಳಿಕ ತಿಳಿಸಿದ್ದಾರೆ.
92ನೇ ವಸಂತಕ್ಕೆ ಕಾಲಿಟ್ಟ ಕರುಣಾನಿಧಿ: ಬುಧವಾರ 92ನೇ ಹುಟ್ಟು ಹಬ್ಬ ಆಚರಿಸಿಕೊಂಡ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರಿಗೆ ಪಕ್ಷದ ಮುಖಂಡರು ಶುಭಕೋರಿದರು.
ಬಿಂಬ ಪ್ರತಿಬಿಂಬ: ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಹೀಗಾಗಿ ಇತಿಹಾಸ ಪ್ರಸಿದ್ಧ ವಿಜಯ ವಿಠಲ ಕಲ್ಲಿನ ರಥದ ಪ್ರತಿಬಿಂಬ ಮಳೆ ನೀರಿನಲ್ಲಿ ಕಂಡು ಬಂದದ್ದು ಹೀಗೆ. -ಕೆಪಿಎನ್ ಚಿತ್ರ
ಸಂಗಾತಿ ಜತೆ ಸೆಲ್ಫಿ ಮುಂಬೈನಲ್ಲಿ ಭಾನುವಾರ ನಿಶ್ಚಿತಾರ್ಥದಲ್ಲಿ ಸೆಲ್ಫಿ ತೆಗೆದುಕೊಂಡ ಕ್ರಿಕೆಟರ್ ಧವಳ್ ಕುಲಕರ್ಣಿ ಮತ್ತು ಆತನ ಬಾಳ ಸಂಗಾತಿ ಶ್ರದ್ಧಾ ಖರ್ಪುಡೆ.
ಜಾಮ್ ನಗರ್ ಜಿಲ್ಲೆ ಕಹಂಬಲಿಯಾ ಗ್ರಾಮದಲ್ಲಿ ದೇವಸ್ಥಾನವೊಂದರ ಉದ್ಘಾಟನೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಎನ್ಆರ್ ಐ ಉದ್ಯಮಿಯೊಬ್ಬ ಗಾಯಕ ಕೀರ್ತಿದಾನ್ ಗಢ್ವಿ ರುಪಾಯಿ ನೋಟುಗಳನ್ನು ತೂರುತ್ತಿದ್ದ ದೃಶ್ಯ.
ಜಾಮ್ ನಗರ್ ಜಿಲ್ಲೆ ಕಹಂಬಲಿಯಾ ಗ್ರಾಮದಲ್ಲಿ ದೇವಸ್ಥಾನವೊಂದರ ಉದ್ಘಾಟನೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಎನ್ಆರ್ ಐ ಉದ್ಯಮಿಯೊಬ್ಬ ಗಾಯಕ ಕೀರ್ತಿದಾನ್ ಗಢ್ವಿ ರುಪಾಯಿ ನೋಟುಗಳನ್ನು ತೂರುತ್ತಿದ್ದ ದೃಶ್ಯ.
ಜಾಮ್ ನಗರ್ ಜಿಲ್ಲೆ ಕಹಂಬಲಿಯಾ ಗ್ರಾಮದಲ್ಲಿ ದೇವಸ್ಥಾನವೊಂದರ ಉದ್ಘಾಟನೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಎನ್ಆರ್ ಐ ಉದ್ಯಮಿಯೊಬ್ಬ ತೂರಿದ ರುಪಾಯಿ ನೋಟುಗಳು ಸಂಗ್ರಹಗೊಂಡ ದೃಶ್ಯ.