ಬೆಂಗಳೂರಿನ ವಿಜಯಾ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ಸ್ವಾಗತಿಸಿದ್ದು ಹೀಗೆ... (ಚಿತ್ರ- ನಾಗರಾಜ ಗಡೇಕಲ್)
ಮಾರ್ಚ್ 23ರಂದು ನಿಧನರಾದ ಸಿಂಗಾಪುರದ ಸ್ಥಾಪಕ ಮತ್ತು ಮೊದಲ ಪ್ರಧಾನಿ ಲೀ ಕ್ವಾನ್ ಯೂ ಅವರ ಅಂತ್ಯಕ್ರಿಯೆಯಲ್ಲಿ ಪಾಲೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶಕರ ಪುಸ್ತಕದಲ್ಲಿ ಲೀ ಅವರ ಬಗ್ಗೆ ಬರೆಯುತ್ತಿರುವುದು.
ಜೊತೆ ಜೊತೆಯಾಗಿ..! ಭಾರತದ ತಂಡದ ಉಪ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ಜೊತೆಯಾಗಿ ಸ್ವದೇಶಕ್ಕೆ ಬಂದಿಳಿದಿದ್ದಾರೆ. ವಿಶ್ವಕಪ್ ಸೆಮಿಫೈನಲ್ ವೀಕ್ಷಿಸಲು ಸಿಡ್ನಿಗೆ ತೆರಳಿದ್ದ ಅನುಷ್ಕಾ ಶರ್ಮಾ ಟೀಂ ಇಂಡಿಯಾ ಸೋಲಿನ ನಂತರ ತನ್ನ ಬಾಯ್ ಫ್ರೆಂಡ್ ವಿರಾಟ್ ಕೊಹ್ಲಿ ಜತೆ ಬರುತ್ತಿರುವ
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟೇಲಿಯಾ ವಿರುದ್ಧ ಸೋಲು ಅನುಭವಿಸಿದ ನಂತರ ಆಕ್ರೋಶಗೊಂಡ ಅಭಿಮಾನಿಗಳು ಅಹಮದಾಬಾದ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಆತನ ಪ್ರೇಯಸಿ ಅನುಷ್ಕಾ ಶರ್ಮಾ ಅವರ ಚಿತ್ರಕ್ಕೆ ಬೆಂಕಿ ಹಚ್ಚಿದರು.
ವಿದೇಶಿ ಪ್ರವಾಸಿಯ ಸೆಲ್ಫೀ... ದೆಹಲಿಯ ರಾಷ್ಟ್ರಪತಿ ಭವನದ ಮುಂದೆ ಬುಧವಾರ ವಿದೇಶಿ ಪ್ರವಾಸಿಯೊಬ್ಬರು ಸೆಲ್ಫೀ ತೆಗೆದುಕೊಂಡಿದ್ದು ಹೀಗೆ.
ಹುತಾತ್ಮರಿಗೆ ನಮನ... ಹುತಾತ್ಮರ ದಿನವಾದ ಸೋಮವಾರ ಪಂಜಾಬ್ನ ಹುಸೇನಿವಾಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಭಗತ್ ಸಿಂಗ್, ರಾಜ್ ಗುರ್ ಮತ್ತು ಸುಖದೇವ್ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.
ಮೇ 17ರಂದು ನಡೆಯಲಿರುವ 2015ರ ಟಿಸಿಎಸ್ ವರ್ಲ್ಡ್ 10 ಕೆ ಆವೃತ್ತಿಗಾಗಿ ನೈಕ್ ಇಂಡಿಯಾ ಬೆಂಗಳೂರು ಓಟಗಾರರಿಗೆ ವಿಶೇಷವಾಗಿ ತಯಾರಿಸಿರುವ ನೈಕ್ ರೇಸ್ ಡೇ ಟೀಶರ್ಟ್ನ್ನು ನಟ ಪುನೀತ್ ರಾಜ್ಕುಮಾರ್ ಅವರು ಬಿಡುಗಡೆ ಮಾಡಿದರು. ನೈಕ್ ಇಂಡಿಯಾ ಮಾರುಕಟ್ಟೆ ವಿಭಾಗದ ನಿರ್ದೇಶಕ ಅವಿನಾಶ್ ಪಂತ್ ಉಪಸ್ಥಿತರಿದ್ದರು.
ಮುಂಬೈನಲ್ಲಿ ಶನಿವಾರ 'ಗುಡಿ ಪಡ್ವ' ಆಚರಣೆ ವೇಳೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಪತ್ನಿ ಐಶ್ವರ್ಯ ರೈ ಬಚ್ಚನ್ ಕಾಣಿಸಿಕೊಂಡಿದ್ದು ಹೀಗೆ.
ಕಪ್ಪು ಸೂರ್ಯ... ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟಗಳ ಹಲವು ಭಾಗಗಳಲ್ಲಿ ಶತಮಾನದ ಮೊದಲ ಸೂರ್ಯಗ್ರಹಣ ಶುಕ್ರವಾರ ಕಂಡು ಬಂದಿತು. ನಾರ್ವೆ ವ್ಯಾಪ್ತಿಯಲ್ಲಿರುವ ಆರ್ಕ್ ಟಿಕ್ ಸಮುದ್ರದ ಸ್ವಾಲ್ ಬಾರ್ಡ್ ದ್ವೀಪದಲ್ಲಿ ದಿನಕರ ಕಪ್ಪಾಗಿ ಕಂಡದ್ದು ಹೀಗೆ.
ಯುಗಾದಿ-ಖರೀದಿ..ಯುಗಾದಿ ಹಬ್ಬದ ನಿಮಿತ್ತ ಶುಕ್ರವಾರ ಗ್ರಾಹಕರು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಹೂ ಮತ್ತು ಪೂಜಾ ಸಾಮಾಗ್ರಿಗಳ ಖರೀದಿ ಮಾಡಿದರು.
ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾಗೆ ಮರಳು ಶಿಲ್ಪಿ ಸದರ್ಶನ್ ಪಟ್ನಾಯಕ್ ಅವರು ಭುವನೇಶ್ವರದಲ್ಲಿ ಅಭಿನಂದನೆ ಸಲ್ಲಿಸಿದ್ದು ಹೀಗೆ.
ಬಿಕಾನೆರ ಬೆಡಗಿಯರ ಕ್ರಿಕೆಟ್ ಆಟ... ರಾಜಸ್ಥಾನದ ಬಿಕಾನೆರದಲ್ಲಿ ಗುರುವಾರ ಮಹಿಳೆಯರು ಕ್ರಿಕೆಟ್ ಆಟವಾಡಿದ್ದು ಹೀಗೆ...
ಗುಜರಾತ್ನ ಅಹಮದಾಬಾದ್ನಲ್ಲಿ ಬುಧವಾರ ವಿಶ್ವದ ಮೊದಲ ಸೋಲಾರ್ ವಿಮಾನ 'ಸೋಲಾರ್ ಇಂಪಲ್ಸ್' ಬಳಿ ಜನಪದ ಕಲಾವಿದರು ಪೋಸ್ ನೀಡಿದ್ದು ಹೀಗೆ.
ವಿಧಾನಸೌಧದಲ್ಲಿ ಸೋಮವಾರ ಬಜೆಟ್ ಅಧಿವೇಶನದ ವೇಳೆ ಮಂಗಳೂರಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ವೀಕ್ಷಕ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಗಜಚುಂಬನ... ನೋಡಿ, ಮನುಷ್ಯರನ್ನೇ ನಾಚಿಸುವಂತೆ ಆಫ್ರಿಕಾದ ಈ ಆನೆಗಳು ತುಟಿಗೆ ತುಟಿಗೆಯನ್ನೊತ್ತಿ ಚುಂಬಿಸುತ್ತಿವೆ. ದಕ್ಷಿಣ ಆಫ್ರಿಕಾದ ಕರೀಗಾ ಗೇಮ್ ರಕ್ಷಿತಾರಣ್ಯದಲ್ಲಿ ಈ ಹೃದಯಸ್ಪರ್ಶಿ ದೃಶ್ಯವನ್ನು ಜಾಕ್ವಿಸ್ ಮತ್ತಿಸೇನ್ ಎಂಬುವರು ಸೆರೆಹಿಡಿದಿದ್ದಾರೆ. ಈ ಆನೆಗಳ 'ಒಂದು ಮುತ್ತಿನ ಕಥೆ' ನೋಡಿದವರಿಗೆ
ಸ್ವಲ್ಪ ತಡಿರಲಾ...! ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಶುಭಾಶಯ ಕೋರಿದ ಶಾಸಕರಿಗೆ ನಗುಮುಖದಲ್ಲೇ ಪ್ರತಿಕ್ರಿಯಿಸಿದ್ದು ಹೀಗೆ.
ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶುಕ್ರವಾರ ತರಬೇತಿನಿರತ ಅಧಿಕಾರಿಯೊಬ್ಬರು ತಮ್ಮ ಕೌಶಲ್ಯ ಪ್ರದರ್ಶಿಸಿದ್ದು ಹೀಗೆ...
ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಫಿಲಿಪ್ ಹಮ್ಮೊಂಡ್ ಅವರು ದೆಹಲಿಯ ರಾಜ್ಘಾಟ್ನಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಪೋಸ್ ಕೊಟ್ಟಿದ್ದು ಹೀಗೆ.
ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಂಗಳವಾರ 1 ರುಪಾಯಿಗೆ ರೊಟ್ಟಿ ಮಾರುವ ಮೂಲಕ ಪ್ರತಿಭಟನೆ ನಡೆಸಿದರು.
ಹಿಮ ಮಾನವ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ದಾಲ್ ಲೇಕ್ ಸರೋವರದ ಬಳಿ ಸೋಮವಾರ ಶ್ರೀನಗರದ ವ್ಯಕ್ತಿಯೊಬ್ಬ ಹಿಮ ಮಾನವನನ್ನು ನಿರ್ಮಿಸುತ್ತಿರುವುದು.
ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಭಾನುವಾರ ಐಎಫ್ಐಎಂ ಬ್ಯುಸಿನೆಸ್ ಸ್ಕೂಲ್ ಹಮ್ಮಿಕೊಂಡಿದ್ದ ಹೆಣ್ಣುಮಕ್ಕಳ ರಕ್ಷಣೆಗಾಗಿನ ಜಾಗೃತಿ ಜಾಥಾದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಹಾಕಿದರು.
ಶಿಕಾರಿ... ದಕ್ಷಿಣ ಕ್ಯಾಲಿಪೋರ್ನಿಯಾದ ಹಂಟಿಂಗ್ಟನ್ ಕಡಲ ತೀರದಲ್ಲಿ ಹದ್ದೊಂದು ಮರಿ ಬಾತುಕೋಳಿಯನ್ನು ಶಿಕಾರಿ ಮಾಡಿದಾಗ ಕಂಡ ದೃಶ್ಯ.
ವಾಟಾಳ್ ಹೋಳಿ... ಹೋಳಿ ಹಬ್ಬ ಹಿನ್ನೆಲೆಯಲ್ಲಿ ಗುರುವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರು ಕತ್ತೆಗಳೊಂದಿಗೆ ಹೋಳಿ ಆಚರಿಸಿದಾಗ ಕಾರ್ಯಕರ್ತರು ಸುರಿದ ಬಣ್ಣದಲ್ಲಿ ಮಿಂದೆದ್ದರು.
ಬೆಂಗಳೂರಿನ ಕಬ್ಬನ್ಪಾರ್ಕ್ನಲ್ಲಿ ಬುಧವಾರ 'ಪರಿಸರ ಸ್ನೇಹಿ' ಶೌಚಾಲಯ ಉದ್ಘಾಟನೆ ವೇಳೆ ರೂಪದರ್ಶಿಗಳು ಪೋಸ್ ಕೊಟ್ಟಿದ್ದು ಹೀಗೆ.
ಲಕ್ಕಿ ಸವಾರಿ! ಮರಕುಟಿಗವೊಂದರ ಮೇಲೆ ಮರಿ ವೀಸಲ್(ಮುಂಗುಸಿ ಜಾತಿಯ ಚತುಷ್ಟಾದಿ)ವೊಂದು ಸವಾರಿ ಮಾಡುತ್ತಿರುವ ದೃಶ್ಯ ಲಂಡನ್ನ ಹಾರ್ನ್ಚರ್ಚ್ನ ರಾಷ್ಟ್ರೀಯ ಉದ್ಯಾನವನದಲ್ಲಿ ಫೊಟೋಗ್ರಾಫರ್ನ ಕಣ್ಣಿಗೆ ಬಿದ್ದಿದ್ದು ಹೀಗೆ.
ಫ್ರೆಂಚ್ ಪ್ರವಾಸಿಗರಿಂದ ಹೋಳಿ ಆಚರಣೆ:ಉತ್ತರ ಪ್ರದೇಶದ ವಾರಣಾಸಿಯಲ್ಲಿ ಫ್ರೆಂಚ್ ಪ್ರವಾಸಿಗರು ಹೋಳಿ ಆಚರಿಸಿದ್ದು ಹೀಗೆ.
ಇದು ಗಿಟಾರ್ ಓತಿಕ್ಯಾತ:ಓತಿಕ್ಯಾತ ಕೊಂಬೆಯೊಂದಕ್ಕೆ ಆತುಕೊಂಡು ಗಿಟಾರ್ ನುಡಿಸುವಂತಾ ಅಪರೂಪದ ದೃಶ್ಯ ಇಂಡೋನೇಷ್ಯಾದ ಛಾಯಾಗ್ರಾಹಕರೊಬ್ಬರ ಕ್ಯಾಮೆರಾ ಕಣ್ಣಿನಲ್ಲಿ ಹೀಗೆ ಸೆರೆಯಾಗಿದೆ.