ಪೋಪ್ ಆಗಮನದ ಸಂಭ್ರಮ... ಪೋಪ್ ಫ್ರಾನ್ಸಿಸ್ ಅವರು ಈಗ ಉಗಾಂಡ ಪ್ರವಾಸದಲ್ಲಿದ್ದಾರೆ. ಉಗಾಂಡಾಗೆ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ಭಾರಿ ಸಂಖ್ಯೆಯ ಜನ ಆಗಮಿಸಿದ್ದರು. ಅವರತ್ತ ಪೋಪ್ ಕೈ ಬೀಸುತ್ತಿರುವ ದೃಶ್ಯ.
ನಾಯಕರ ಸಮಾಗಮ... ಜಿಎಸ್ ಟಿ ಸಂಬಂಧ ಚರ್ಚೆಗಾಗಿ ತಮ್ಮ ನಿವಾಸಕ್ಕೆ ಶುಕ್ರವಾರ ಆಗಮಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬೀಳ್ಕೊಟ್ಟ ಪ್ರಧಾನಿ ಮೋದಿ.
ಹೊಸ ಪೈರು-ಹೊಸ ಕೊಯ್ಲು: ಬೆಂಗಳೂರಿನಲ್ಲಿ ಕೊಡವ ಸಮಾಜ ಬಾಂಧವರು ಪುತ್ತರಿ ನಮ್ಮೆನ ಎಂಬ ಸುಗ್ಗಿ ಕಾರ್ಯಕ್ರಮವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಿದರು.
ಸೆಲೆಬ್ರಿಟಿ ಸೆಲ್ಫಿ...ಮುಂಬೈನ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಮನಿಶ್ ಪೌಲ್ ಅವರು ಇತರೆ ನಟಿಯರಾದ ಶಿಲ್ಪಾ ಶೆಟ್ಟಿ, ಮಲೈಕಾ ಅರೋರಾ ಖಾನ್ ಹಾಗೂ ಫರಾ ಖಾನ್ ರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಸಿಲಿಕಾನ್ ಸಿಟಿಗೆ ಸ್ವಾಗತ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಸಹ ಇದ್ದರು.
ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಷ್ಟಾಚಾರದ ಸ್ವಾಗತ.
ಭಾರಿ ಸಮರ ನೌಕೆ... ನೌಕಾ ದಿನಾಚರಣೆ ನಿಮಿತ್ತ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಭಾನುವಾರ ಸಾರ್ವಜನಿಕರಿಗೆ ಐಎನ್ಎಸ್ ಮುಂಬೈ, ಕಸೌರಿ ಹಾಗೂ ಮಾರ್ಕರ್ ಯುದ್ಧನೌಕೆಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಐದು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದರು.
ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯಲ್ಲಿ ಮ್ಯಾಪಿಂಗ್ ವಿತ್ ಫಿಗರ್ಸ್ ದಿ ಆರ್ಟ್ ಆಫ್ ಕೆ. ಎಸ್ ರಾಧಾಕೃಷ್ಣನ್ ಪ್ರದರ್ಶನಕ್ಕೆ ನಟಿ ಅರುಂಧತಿ ನಾಗ್, ಕಲಾವಿದ ಎಚ್.ಜಿ ವಾಸುದೇವರಾವ್ ಚಾಲನೆ ನೀಡಿದರು.
ಮಾರ್ಷಲ್ ಆರ್ಟ್... ಒಡಿಶಾದ ಮಾಜಿ ಮುಖ್ಯಮಂತ್ರಿ ಹರೇಕೃಷ್ಣ ಮಹತಾಬ್ ಅವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾರ್ಷಲ್ ಆರ್ಟ್ ಪ್ರತಿಭೆಗಳಿಂದ ಪ್ರದರ್ಶನ.
ನಕ್ಕರದೇ ಸ್ವರ್ಗ... ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ದಿನಾಚರಣೆಯಲ್ಲಿ ವಿದ್ಯಾರ್ಥಿನಿಯರು ಗೊಂಬೆ ನೃತ್ಯಗಾರನೊಂದಿಗೆ ನಗುವಿನ ಅಲೆಯಲ್ಲಿ ತೇಲಿದರು.
ಒಂಟಿ ಮಹಿಳೆಗೆ ಒಂಟೆ ಮುತ್ತು... ರಾಜಸ್ಥಾನದ ಪುಷ್ಕರ್ ನಲ್ಲಿ ಆಯೋಜಿಸಲಾಗಿದ್ದ ಒಂಟೆ ಉತ್ಸವದಲ್ಲಿ ವಿದೇಶಿ ಮಹಿಳೆ ಒಂಟೆ ಮೇಲೆ ಕುರಿತು ಸಂತಸ ವ್ಯಕ್ತಪಡಿಸುತ್ತಿರುವುದು.
ಜಿ20ಯಲ್ಲಿ ವಿಶ್ವನಾಯಕರ ಸಹಿ... ಟರ್ಕಿಯ ಅಂಟಾಲ್ಯದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಜಿ-20 ರಾಷ್ಟ್ರಗಳ ನಾಯಕರು ಒಟ್ಟಾಗಿ ನಿಂತಿರುವ ಭಾವಚಿತ್ರದ ಸುತ್ತ ಹಸ್ತಾಕ್ಷರಗಳನ್ನು ಹಾಕಿದರು.
ಜಡೆಗಿಂತ ಉದ್ದದ ಮೀಸೆ... ರಾಜಸ್ಥಾನದ ಉದ್ದದ ಮೀಸೆಗಾರನೊಬ್ಬ ವಿದೇಶಿಗರನ್ನು ರಂಜಿಸಲು ತನ್ನ ಉದ್ದದ ಮೀಸೆಯನ್ನು ಪ್ರದರ್ಶಿಸುತ್ತಿರುವುದು.
ಕಸಮುಕ್ತ ವಾರ್ಡ್: ಬೆಂಗಳೂರಿನ ರಿಂಗ್ ರೋಡ್ ಪೆಸಿಟ್ ಜಂಕ್ಷನ್ ನಲ್ಲಿ ಕಂಡುಬಂದ ಈ ದೃಶ್ಯವನ್ನು ನಮ್ಮ ಓದುಗರೊಬ್ಬರು ಕಳಿಸಿದ ಚಿತ್ರ. ಒಂದೆಡೆ ಮಳೆ, ಮತ್ತೊಂದೆಡೆ ಕಿತ್ತುಹೋದ ರಸ್ತೆಗಳು, ಜೊತೆಗೆ ವಿಲೇವಾರಿಯಾಗದ ಕಸ.. ಇವೆಲ್ಲದರ ನಡುವೆ ಸ್ವಚ್ಛ ಭಾರತ ಅಭಿಯಾನ. ಒಟ್ಟಿನಲ್ಲಿ ಬೆಂಗಳೂರು ನಾಗರೀಕರ ಜನಜೀವನ
ಸ್ಮೈಲ್ ಪ್ಲೀಸ್... ಭಾನುವಾರ ಕಬ್ಬನ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದ ಕುಟುಂಬವೊಂದು ಮಗುನಿಂದ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದು ಹೀಗೆ.
ಮಲ್ಟಿಸ್ಟಾರ್ ಸೆಲ್ಫೀ... 21ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನೆಯಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಸೆರೆಹಿಡಿಯುತ್ತಿರುವ ಗ್ರೂಪ್ ಸೆಲ್ಫೀಗೆ ಪೋಸ್ ನೀಡುತ್ತಿರುವ ಪತ್ನಿ ಜಯಾ ಬಚ್ಚನ್, ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಟಿಯರಾದ ಶರ್ಮಿಳಾ ಟಾಗೋರ್, ವಿದ್ಯಾಬಾಲನ್
ನೆಹರೂಗೆ ಮಕ್ಕಳಿಂದ ಪುಷ್ಪಾರ್ಚನೆ... ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ 126ನೇ ಜಯಂತಿ ಹಿನ್ನೆಲೆ ಅಹಮದಾಬಾದ್ ನಲ್ಲಿ ಮಕ್ಕಳು ಹಾಗೂ ಸ್ಥಳೀಯರು ನೆಹರೂ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದ ಕ್ಷಣ.
ಯುವಿ, ಹ್ಯಾಜಲ್ ಗೆ ಆಶೀರ್ವಾದ...ಇಂಡೋನೇಷ್ಯಾದ ಬಾಲಿಯಲ್ಲಿ ಇತ್ತೀಚೆಗಷ್ಟೇ ವಿವಾಹ ನಿಶ್ಚಯ ಮಾಡಿಕೊಂಡ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ರೂಪದರ್ಶಿ ಹ್ಯಾಜಲ್ ಗೆ ಹಿರಿಯಜ್ಜನ ಆಶೀರ್ವಾದ.
ಲಂಡನ್ ಬ್ರಿಡ್ಜ್ ಗೆ ತಿರಂಗದ ಮೆರಗು... ಗುರುವಾರ ರಾತ್ರಿ ಲಂಡನ್ ನಲ್ಲಿ ಭಾರತೀಯತೆಯ ಸಂಭ್ರಮ. ಇದಕ್ಕೆ ಜತೆಯಾದರು ಪ್ರಧಾನಿ ಡೇವಿಡ್ ಕ್ಯಾಮರೂನ್ ಮತ್ತು ಹೌಸ್ ಆಫ್ ಕಾಮನ್ ನ ಸ್ವೀಕರ್ ಜಾನ್ ಬೆಸ್ಕೋ.
ನ್ಯೂಯಾರ್ಕ್ ನ ಲೆಕ್ಸಿಂಗ್ ಟನ್ ಆರ್ಮರಿಯಲ್ಲಿ ನಡೆದ ವಿಕ್ಟೋರಿಯಾ ಸೀಕ್ರೆಟ್ ಫ್ಯಾಶನ್ ಶೋದ ಫಿನಾಲೆಯಲ್ಲಿ ಮಾಡೆಲ್ ಗಳಾದ ಲಿಲ್ಲಿ ಆಲ್ ಡ್ರಿಚ್ ಮತ್ತು ಅಲೆಕ್ಸಾಂಡ್ರಾ ಆಂಬ್ರೋಸಿಯೋ ಪ್ರೇಕ್ಷಕರತ್ತ ಗಾಳಿ ಮುತ್ತು ತೂರಿಬಿಟ್ಟ ಬಗೆ ಹೀಗಿತ್ತು.
ದೀಪಾವಳಿ ಸಂಭ್ರಮ... ದೀಪಾವಳಿ ಹಬ್ಬದ ಪ್ರಯುಕ್ತ ಮಿರ್ಜಾಪುರ್ ನ ಮದರಾಸವೊಂದರ ಮುಸ್ಲಿಂ ಸಮುದಾಯದ ಬಾಲಕರು ಸುರಸುರ ಬತ್ತಿಯನ್ನು ಹಚ್ಚಿ ಸಂಭ್ರಮಿಸಿದ ಕ್ಷಣ.
ಗೀತಾಳ ದೀಪಾವಳಿ ಸಂಭ್ರಮ... ಪೋಷಕರನ್ನು ಅರಸಿಕೊಂಡು ಪಾಕಿಸ್ತಾನದಿಂದ ಇತ್ತೀಚೆಗಷ್ಟೇ ಭಾರತಕ್ಕೆ ಆಗಮಿಸಿದ್ದ ಮೂಗ ಯುವತಿ ಗೀತಾ ಇಂದೋರ್‌ನಲ್ಲಿ ಸುರುಸುರು ಬತ್ತಿ ಹಚ್ಚುವ ಮೂಲಕ ದೀಪಾವಳಯನ್ನು ಸಂಭ್ರಮಿಸಿದರು.
ಹಾರುವ ಓತಿ... ಅತಿ ವಿರಳವಾಗಿರುವ, ವಿನಾಶದ ಅಂಚಿನಲ್ಲಿರುವ ಹಾರುವ ಓತಿಯು ಕೈಗಾ ವಸತಿ ಸಂಕೀರ್ಣದ ಮರದ ಮೇಲೆ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಹೀಗೆ.
ಖುಷಿಯ ಕ್ಷಣ... ಫೇಸ್ ಬುಕ್ ಸ್ಥಾಪಕ ಮಾರ್ಕ್ ಝಕರ್ ಬರ್ಗ್ ತಮ್ಮ ಪತ್ನಿ ಪ್ರಿಸಿಲ್ಲಾ ಮತ್ತೆ ಗರ್ಭಿಣಿಯಾಗಿರುವ ಖುಷಿಯನ್ನು ಫೇಸ್ ಬುಕ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ತಂತ್ರಜ್ಞಾನಕ್ಕೆ ಮುನ್ನುಡಿ... ಟಾಟಾ ಸನ್ಸ್ ಕಂಪನಿಯ ಅಧ್ಯಕ್ಷ ರತನ್ ಟಾಟಾ ಹೈದರಬಾದ್ ನ ಐಐಟಿ ಕ್ಯಾಂಪಸ್ ನಲ್ಲಿ ಭಾರತದ ಅತಿದೊಡ್ಡ ತಂತ್ರಜ್ಞಾನ ಸಂಕೀರ್ಣದ ಮೊದಲ ಹಂತವನ್ನು ಸಹಿ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ದಾಲ್ ರೋಟಿ... ಪಂಜಾಬ್ ಪ್ರವಾಸದಲ್ಲಿರುವ ರಾಹುಲ್ ಹೊಸ ರೂಪ ಇದು. ಭಟಿಂಡಾದ ತಾಳ್ ವಂಡಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ನಾಯಕರಾದ ಅಮರೀಂದರ್ ಸಿಂಗ್ ಮತ್ತು ಪ್ರತಾಪ್ ಸಿಂಗ್ ಬಾಜ್ವಾ ಜತೆ ಸಾಮಾನ್ಯರಂತೆ ಚಾಪೆಯಲ್ಲಿ ಕೂತು ರೋಟಿ ಸವಿದರು.
ಮಹಿ ಸೆಲ್ಫೀ... ಗುರುವಾರ ಚೆನ್ನೈನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸೆಲ್ಫೀ ತೆಗೆದುಕೊಂಡಿದ್ದು ಹೀಗೆ.
ಬ್ಯಾಂಡ್ ಬಜಾ ಬಾಜಿರಾವ್ ಮಸ್ತಾನಿ... ಬುಧವಾರ ಮುಂಬೈನಲ್ಲಿ ಬಾಜಿರಾವ್ ಮಸ್ತಾನಿ ಚಿತ್ರದ ಪೋಸ್ಟರ್ ಬಿಡುಗಡೆ ವೇಳೆ ಚಿತ್ರದ ನಾಯಕ ರಣವೀರ್ ಸಿಂಗ್ ಅವರು ಕಾಣಿಸಿಕೊಂಡಿದ್ದು ಹೀಗೆ
ಬಿಡಿಎ ಸೈಟ್‌ಗೆ ನೂಕುನುಗ್ಗಲು... ಬೆಂಗಳೂರಿನಲ್ಲಿ ಒಂದು ಸೈಟು ಕೊಂಡ್ರೆ ಜೀವನ ಸೆಟಲ್ ಅನ್ನೋ ಮಾತಿದೆ. ಇಂಥ ಕನಸಿಗೆ ನೀರೆರೆದಿರುವುದು ಬಿಡಿಎ. ಸದ್ಯ ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆಗೆ ಅರ್ಜಿ ಕರೆದಿದ್ದು, ಅದಕ್ಕಾಗಿ ಮಂಗಳವಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಾಗಿ ನಿಂತಿರುವ ಜನ.
ಮಳೆಯಬ್ಬರದ ಸಾಕ್ಷಾತ್ ದರ್ಶನ... ಸೋಮವಾರ ಬೆಂಗಳೂರಿನ ಜನಕ್ಕೆ ಮಳೆಯಬ್ಬರದ ಸಾಕ್ಷಾತ್ ದರ್ಶನವೇ ಆಯ್ತು. ಸಂಜೆ ನಾಲ್ಕರ ಹೊತ್ತಿಗೆ ಶುರವಾದ ಮಳೆ, ಮನೆಗೆ ಹೊರಡುವ ಮಂದಿ ಪಾಲಿಗೆ ದುಸ್ವಪ್ನವೇ ಆಗಿ ಬಿಟ್ಟಿತು. ಹಾದಿ ಬೀದಿಯಲ್ಲಿ ನಿಂತ ನೀರನ್ನು ಹೇಗೆ ದಾಟುವುದಪ್ಪಾ ಎಂಬ ಚಿಂತೆಗೂ ಕಾರಣವಾಯ್ತು. ಈ ನಡುವೆಯೇ
ಬ್ಯೂಟಿ ರೇಸ್... ಜಪಾನ್‌ನಲ್ಲಿ ನಡೆಯುತ್ತಿರುವ ಮಿಸ್ ಇಂಟರ್‌ನ್ಯಾಷಿನಲ್ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಭಾರತ ಸುಪ್ರಿಯಾ ಅಯ್ಮಾನ್(ಬಲಬದಿ) ಅವರು ಸಹ ಸ್ಪರ್ಧಿಗಳ ಜತೆ ಸೆಲ್ಫೀ ತೆಗೆದುಕೊಂಡಿದ್ದು ಹೀಗೆ. ಈ ಸ್ಪರ್ಧೆಯಲ್ಲಿ 70 ದೇಶಗಳ ಸುಂದರಿಯರು ಪಾಲ್ಗೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಫ್ಯಾಶನ್ ಡಿಸೈನರ್ ಮಸಾಬ ಅವರೊಂದಿಗೆ ಪೋಸ್ ನೀಡಿದ್ದು ಹೀಗೆ.