ಶಂಕರ ಕ್ಯಾನ್ಸರ್ ಆಸ್ಪತ್ರೆ ಲೋಕಾರ್ಪಣೆ... ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು.
ಮಹಾತ್ಮನ ಮೊರೆ ಹೋದ ನಿರ್ಭಯಾ ತಾಯಿ... ಮಗಳ ಪುಣ್ಯತಿಥಿ ಅಂಗವಾಗಿ ನಿರ್ಭಯಾ ತಾಯಿ ಆಶಾದೇವಿ ಅವರು ಗುರುವಾರ ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದರು.
ದಲೈ ಲಾಮಾ ಸ್ವಾಗತಕ್ಕೆ ಸಿದ್ಧಗೊಂಡ ಕಲಾವಿದರು... ಬುಧವಾರ ಬೋಧಗಯಾಕ್ಕೆ ಭೇಟಿ ನೀಡಿದ ಧಾರ್ಮಿಕ ಗುರು ದಲೈ ಲಾಮಾ ಅವರ ಸ್ವಾಗತಕ್ಕೆ ಸಿದ್ಧವಾಗಿದ್ದ ಟಿಬೆಟಿಯನ್ ಕಲಾವಿದರು.
ವಿಶೇಷ ಚೇತನ ಕಲಾವಿದರೊಂದಿಗೆ ಸೆಲ್ಫಿ... ಪಟಿಯಾಲದಲ್ಲಿ ಅಂದ ಮತ್ತು ಕಿವುಡ ಮಕ್ಕಳಿಗಾಗಿ ಆಯೋಜಿಸಿದ್ದ ಅಖಿಲ ಭಾರತ ನೃತ್ಯ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ಗುಜರಾತ್ ಅಂದ ಕಲಾವಿದರೊಂದಿಗೆ ಶಿಕ್ಷಕಿಯೊಬ್ಬರು ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಮಾಗಡಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಗರುಡ ಪಕ್ಷಿಗಳು ಕಂಡಿದ್ದು ಹೀಗೆ....
ರಕ್ಕಸ ಸುನಾಮಿಗೆ 12 ವರ್ಷ... ಸುಮಾರು ಎರಡು ಲಕ್ಷ ಜನರನ್ನು ಬಲಿ ಪಡೆದ 2004ರ ರಕ್ಕಸ ಸುನಾಮಿಗೆ ಸೋಮವಾರ 12 ವರ್ಷ. ಈ ಹಿನ್ನೆಲೆಯಲ್ಲಿ ಮಹಿಳೆಯರು ಚೆನ್ನೈನ ಮರಿನಾ ಬೀಚ್ ನಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ.
ಹ್ಯಾಪಿ ಕ್ರಿಸ್ಮಸ್... ಬೆಂಗಳೂರಿನಲ್ಲಿ ವಾಹನವೊಂದರಲ್ಲಿ ತೆರಳುತ್ತಿದ್ದ ಸಂತಾಕ್ಲಾಸ್ ವೇಷಧಾರಿ ಮಕ್ಕಳಿಬ್ಬರು ಕ್ರಿಸ್ಮಸ್ ಗೆ ಶುಭಾಶಯ ಕೋರಿದ್ದು ಹೀಗೆ.
ಪುಟಾಣಿ ಸಂತಾಕ್ಲಾಸ್... ಚೆನ್ನೈನ ಮುಸ್ಲಿಂ ಮಹಿಳೆಯೊಬ್ಬರು ಸಂತಾಕ್ಲಾಸ್ ವೇಷಧಾರಿ ತನ್ನ ಮಗುವನ್ನು ಕ್ರಿಸ್ಮಸ್ ಆಚರಣೆ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿರುವುದು.
ಗೋವು ರಕ್ಷಿಸಿ... ಸೂರತ್ ನಲ್ಲಿ ಗುರುವಾರ ನಡೆದ ಗೋವು ರಕ್ಷಿಸಿ ಕಾರ್ಯಕ್ರಮದ ವೇಳೆ ಮಾನವ ಸರಪಳಿ ಮೂಲಕ ಹಸುವಿನ ಚಿತ್ರ ನಿರ್ಮಿಸಿದ್ದು ಹೀಗೆ.
ಛಾಯಾಗ್ರಾಹಕರೊಂದಿಗೆ ಚೋಪ್ರಾ... ಮುಂಬೈನಲ್ಲಿ ನಡೆದ ಸ್ಯಾನ್ ಸುಯಿ ಕಲರ್ಸ್ ಸ್ಟಾರ್ ಡಸ್ಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಛಾಯಾಗ್ರಾಹಕರೊಂದಿಗೆ ಪೋಸ್ ನೀಡಿದ್ದು ಹೀಗೆ.
ಸೆಲ್ಫಿ ವಿತ್ ಸಲ್ಲು... ಕಿರುತೆರೆ ನಟಿಯರು ಭಾನುವಾರ ಬಿಗ್ ಬಾಸ್ ಸೀಸನ್ 10ರ ವೇದಿಕೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಲಲನೆಯರ ಕ್ಯಾಟ್ ವಾಕ್...ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ ನಡೆದ 12ನೇ ಆವೃತ್ತಿಯ ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಶೋನಲ್ಲಿ ರೂಪದರ್ಶಿಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ವಿಜಯ್ ದಿವಸ್: ಹುತಾತ್ಮ ಯೋಧರಿಗೆ ಗೌರವ... ವಿಜಯ್ ದಿವಸ್ ಅಂಗವಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ದೆಹಲಿಯಲ್ಲಿ ಅಮರ್ ಜವಾನ್ ಜ್ಯೋತಿಗೆ ಗೌರವ ಸಲ್ಲಿಸಿದರು.
ಮೈಸೂರು ಅರಮನೆಯ ಪ್ರತಿಬಿಂಬ... ವರ್ಧಾ ಚಂಡಮಾರುತದ ಪರಿಣಾಮ ಬುಧವಾರ ಮೈಸೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯಲ್ಲಿ ನಿಂತ ನೀರಿನಲ್ಲಿ ಅರಮನೆಯ ಪ್ರತಿಬಿಂಬ ಕಾಣಿಸಿದ್ದು ಹೀಗೆ.
ಮಹಾತ್ಮನಿಗೆ ಪುಷ್ಪ ನಮನ... ಭಾರತ ಪ್ರವಾಸದಲ್ಲಿರುವ ಇಂಡೋನೆಷ್ಯಾ ಅಧ್ಯಕ್ಷ ಜೋಕೋ ವಿಡೊಡೊ ಹಾಗೂ ಅವರ ಪತ್ನಿ ಎಚ್.ದೆ.ಇರಿನಾ ಅವರು ಸೋಮವಾರ ದೆಹಲಿಯಲ್ಲಿ ರಾಜಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಮೋದಿ ಮುಖವಾಡ... ಉತ್ತರ ಪ್ರದೇಶದ ಬಹರೈಚ್ ನಲ್ಲಿ ಭಾನುವಾರ ನಡೆದ ಬಿಜೆಪಿಯ ಪರಿವರ್ತನ್ ರ್ಯಾಲಿಯ ವೇಳೆ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಪೋಸ್ ಕೊಟ್ಟಿದ್ದು ಹೀಗೆ.
ಅಮ್ಮ ಸಮಾಧಿಗೆ ಸಿಎಂ, ಸಚಿವರ ಭೇಟಿ... ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಅಧಿಕಾರ ವಹಿಸಿಕೊಳ್ಳುವ ಮುನ್ನ ಶನಿವಾರ ತಮ್ಮ ನಾಯಕಿ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಹ್ಯಾಪಿ ಬರ್ತಡೇ ಸೋನಿಯಾಜಿ... ಶುಕ್ರವಾರ ತಮ್ಮ 70ನೇ ಹುಟ್ಟು ಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಶುಭಾಶಯ ಕೋರಿದ್ದು ಹೀಗೆ.
ನೋಟ್ ನಿಷೇಧದ ವಿರುದ್ಧ ಕರಾಳ ದಿನ... ಕೇಂದ್ರ ಸರ್ಕಾರದ ನೋಟ್ ನಿಷೇಧವನ್ನು ವಿರೋಧಿಸಿ ಗುರುವಾರ ಪ್ರತಿಪಕ್ಷಗಳ ನಾಯಕರು ಸಂಸತ್ ಭವನದ ಮುಂದೆ ಕರಾಳ ದಿನ ಆಚರಿಸಿದ್ದು ಹೀಗೆ.
ಅಮ್ಮನಿಗೆ ಸಂತಾಪ... ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪೂರಿ ಬೀಚ್ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿಧನ ಸಂತಾಪ ಸೂಚಿಸಿದ್ದು ಹೀಗೆ.
ಸಂವಿಧಾನ ಶಿಲ್ಪಿಗೆ ನಮನ... ಮಹಾಪರಿನಿರ್ವಾಣ ದಿನದ ಅಂಗವಾಗ ಮಂಗಳವಾರ ಸಂಸತ್ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮೊದಲ ರಾಷ್ಟ್ರಪತಿಗೆ ಪುಷ್ಪ ನಮನ... ಪಾಟ್ನಾದಲ್ಲಿ ಶಾಲಾ ಬಾಲಕಿಯರು ಶನಿವಾರ ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ 132ನೇ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಲಾಲುಗೆ ಯೋಗ ಕ್ಲಾಸಾ...? ಯೋಗ ಗುರು ಬಾಬಾ ರಾಮ್ ದೇವ್ ಅವರು ಶುಕ್ರವಾರ ಪಾಟ್ನಾದಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಭೋಪಾಲ್ ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ನೃತ್ಯ ಉತ್ಸವದಲ್ಲಿ ಕಜಗಿಸ್ತಾನದ ಝಶ್ ಕಾಂತ್ ತಂಡ ನೃತ್ಯ ಪ್ರದರ್ಶನ ನೀಡಿದ್ದು ಹೀಗೆ.