ವೀರ ಯೋಧರಿಗೆ ಅಂತಿಮ ನಮನ... ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಇಬ್ಬರು ಯೋಧರಿಗೆ ಸೇನಾ ಮುಖ್ಯಸ್ಥ ದಲ್ಬಿರ್ ಸಿಂಗ್ ಅವರು ಭಾನುವಾರ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಅಂತಿಮ ನಮನ ಸಲ್ಲಿಸಿದರು.
ನೀರಿಗಾಗಿ ಹೋರಾಟ... ಮಹದಾಯಿ ಮಧ್ಯಂತರ ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಈ ವೇಳೆ ಬಾಗಲಕೋಟೆಯಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಹೀಗೆ.
ಲಾಂಗ್ ಜಂಪ್... ಕೋಲ್ಕತಾದ ಅಲಿಪೋರ್ ಪ್ರಾಣಿ ಸಂಗ್ರಹಾಲಯದಲ್ಲಿ ಶುಕ್ರವಾರ ಹುಲಿಯೊಂದು ಕೊಳಕ್ಕೆ ಜಿಗಿಯುತ್ತಿರುವ ಪರಿ.
ಹುಲಿ ಸಂರಕ್ಷಿಸಿ... ಅಂತರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಭುವನೇಶ್ವರದ ಶಾಲಾ ವಿದ್ಯಾರ್ಥಿಗಳು ಹುಲಿ ಸಂರಕ್ಷಿಸಿ ಆಂದೋಲನದಲ್ಲಿ ಭಾಗವಹಿಸಿದ್ದು ಹೀಗೆ.
ಅಭಿಮಾನದ ಸೆಲ್ಫಿ... ಬಾಲಿವುಡ್ ನಟರಾದ ವರುಣ್ ದವನ್, ಜಾನ್ ಅಬ್ರಹಂ ಹಾಗೂ ನಟಿ ಜಾಕ್ವಲಿನ್ ಫರ್ನಾಂಡೀಸ್ ಅವರು ಬುಧವಾರ ಅಹಮದಾಬಾದ್ ನಲ್ಲಿ ತಮ್ಮ ಮುಂಬರುವ ಚಿತ್ರ ಡಿಶೂಮ್ ಪ್ರಚಾರ ಕಾರ್ಯಕ್ರಮದಲ್ಲಿ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಕಾರ್ಗಿಲ್ ವಿಜಯೋತ್ಸವ... ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹಾಗೂ ಸೇನಾ ಮುಖ್ಯಸ್ಥ ದಲಬೀರ್ ಸಿಂಗ್ ಸೇರಿದಂತೆ ಇತರರು ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಮಂಗಳವಾರ ದೆಹಲಿಯ ಅಮರ್ ಜವಾನ್ ಜ್ಯೋತಿಗೆ ನಮನ ಸಲ್ಲಿಸಿದರು.
ರಸ್ತೆ ಹೊಂಡದಲ್ಲಿ ಸುಂದರ ಕೊಳ...ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ನಗರದ ನಾಯಂಡಹಳ್ಳಿ ಜಂಕ್ಷನ್ ರಸ್ತೆಯ ಹೊಂಡದಲ್ಲಿ ಸುಂದರ ಕೊಳವನ್ನಾಗಿ ಮಾರ್ಪಡಿಸಿ ಅದರಲ್ಲಿ ತಾವರೆ ಹೂಗಳನ್ನು ಅರಳಿಸಿದ್ದಾರೆ. ನಂತರ ನಟಿ ಸೋನು ಗೌಡ ಕೈಯಲ್ಲಿ ಕಪ್ಪೆಯೊಂದನ್ನು ಕೊಡುವ ಮೂಲಕ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಸುವ ಕ
ಸುರಕ್ಷಿತವಾಗಿ ಬಾ ವಿಮಾನ... ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಶುಕ್ರವಾರ ನಾಪತ್ತೆಯಾಗಿರುವ ವಾಯುಪಡೆಯ ಎಎನ್-32 ವಿಮಾನದ ಕಲಾಕೃತಿ ರಚಿಸಿ ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸಿದರು.
ಕಬಾಲಿ ಡಾ ಇದು... ಬೆಂಗಳೂರಿನಲ್ಲಿ ಕಬಾಲಿ ಚಿತ್ರ ನೋಡಲು ಆಗಮಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಯೊಬ್ಬ ಪೋಸ್ ಕೊಟ್ಟಿದ್ದು ಹೀಗೆ...
ಸೇನೆಗೆ ಸೇರಿದ ಪುತ್ರನಿಗೆ ತಾಯಿಯ ಸಿಹಿ ಮುತ್ತು... ಬೆಂಗಳೂರಿನ ಕಾರ್ಪ್ಸ್ ಆಫ್ ಮಿಲಟರಿ ಕೇಂದ್ರದಲ್ಲಿ ತರಬೇತಿ ಮುಗಿಸಿ ಗುರುವಾರ ಸೇನೆಗೆ ಸೇರ್ಪಡೆಯಾದ ಪುತ್ರನಿಗೆ ತಾಯಿ ಮುತ್ತಿಟ್ಟಿದ್ದು ಹೀಗೆ.
ಸಂಸತ್ ಭವನದ ಬಳಿ ಮೋಹಕ ಮಯೂರಿ... ಮುಂಗಾರು ಅಧಿವೇಶನ ನಡೆಯುತ್ತಿರುವ ದೆಹಲಿಯ ಸಂಸತ್ ಭವನದ ಗ್ರಂಥಾಲಯ ಕಟ್ಟಡದಲ್ಲಿ ನವಿಲೊಂದು ಕಾಣಿಸಿಕೊಂಡಿದು ಹೀಗೆ.
ರಿಯೋ ಒಲಿಂಪಿಕ್ಸ್ ಗೆ ಹೊರಟುನಿಂತ ಭಾರತೀಯ ಆಟಗಾರರು ರಿಯೋ ಒಲಿಂಪಿಕ್ಸ್ ತೆರಳುವ ಭಾರತೀಯ ಅಥ್ಲೀಟಿಕ್ಸ್ ತಂಡದೊಂದಿಗೆ ನವದೆಹಲಿಯಲ್ಲಿ ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ವಿಜಯ್ ಗೋಯಲ್, ಬಾಲಿವುಡ್ ನಟ ಸಲ್ಮಾನ್ ಖಾನ್, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್.
ಹೇಯ್ ಬಿಡ್ರೋ... ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಆರಂಭವಾದ ಮುಂಗಾರು ಅಧಿವೇಶನಕ್ಕೆ ಆಗಮಿಸಿದ ವೇಳೆ ಮಾಧ್ಯಮದವರು ಸುತ್ತುವರಿದಿದ್ದು ಹೀಗೆ...
ಸೆಲ್ಫಿ ಸಂಭ್ರಮ... ದೆಹಲಿಯಲ್ಲಿ ಶನಿವಾರ ಯುವ ಜೋಡಿಯೊಂದು ಸೆಲ್ಫಿಯೊಂದಿಗೆ ಸಂಭ್ರಮಿಸಿದ್ದು ಹೀಗೆ.
ಪ್ರತಿಭಟನೆಗೆ ಫಿಟ್ ಆಂಡ್ ಫೈನ್... ಸಚಿವ ಕೆ.ಜೆ.ಜಾರ್ಜ್ ರಾಜಿನಾಮೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಶುಕ್ರವಾರ ಬೆಳಗ್ಗೆ ವಿಧಾನಸೌಧದ ಮುಂದೆ ವ್ಯಾಯಾಮ ಮಾಡಿದ್ದು ಹೀಗೆ...
ಮಳೆಯ ಜೊತೆಯಲಿ... ದೆಹಲಿಯ ಪಾಲಂ ವಾಯುನೆಲೆ ವಿಮಾನ ನಿಲ್ದಾಣದಲ್ಲಿ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರು ಮಳೆಯ ನಡುವೆಯೇ ಕೊಡೆ ಹಿಡಿದು ಮಂಗೋಲಿಯಾ ಪ್ರವಾಸಕ್ಕೆ ತೆರಳಿದರು.
ಮುಂಬೈನಲ್ಲಿ ಬಾಲಿವುಡ್ ನಟ ಹೃತಿಕ್ ರೋಶನ್ ಮತ್ತು ನಟಿ ಪೂಜಾ ಹೆಗ್ದೆ ತಮ್ಮ ಮುಂಬರುವ ಚಿತ್ರ ಮೆಹೆಂಜೋದರೋ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಪರಿಸರ ಜೀವಿ... ಹೈದರಾಬಾದ್ ನಲ್ಲಿ ಸೋಮವಾರ ನಡೆದ ವನಮೋಹತ್ಸವದಲ್ಲಿ ಭಾಗವಹಿಸಿದ್ದ ನಟ ಹಾಗೂ ರಾಜಕಾರಣಿ ಕೆ.ಚಿರಂಜೀವಿ ಅವರು ಭಾಗವಹಿಸಿದ್ದರು.
ನಗಾರಿ ಬಾರಿಸಿದ ಪ್ರಧಾನಿ... ಪ್ರಧಾನಿ ನರೇಂದ್ರ ಮೋದಿ ತಾಂಜೇನಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಂಜೇನಿಯಾ ಅಧ್ಯಕ್ಷ ಜಾನ್ ಮಗುಫೊಲಿ ಅವರೊಂದಿಗೆ ನಗಾರಿ ಬಾರಿಸಿ ಸಂಭ್ರಮಿಸಿದರು.
ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮೋದಿ ಪುಷ್ಪ ನಮನ... ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜೋಹಾನ್ಸ್ ಬರ್ಗ್ ನ ಕಾನ್ಸ್ಟಿಟ್ಯೂಶನ್ ಹಿಲ್ ಗೆ ಭೇಟಿ ನೀಡಿ ಮಹಾತ್ಮ ಗಾಂಧಿಜೀ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಕಿಟ್ಸ್ ನಲ್ಲಿ ಕೊಹ್ಲಿ ಸೆಲ್ಫಿ... ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅವರು, ವೆಸ್ಟ್ ಇಂಡೀಸ್ ನ ಸೇಂಟ್ ಕಿಟ್ಸ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಹ್ಯಾಪಿ ಈದ್.... ಮೊರದಾಬಾದ್ ನ ಶಾಲೆಯೊಂದರಲ್ಲಿ ಈದ್-ಉಲ್-ಫಿತರ್ ಪ್ರಯುಕ್ತ ಮಕ್ಕಳು ಪ್ರಾರ್ಥನೆ ಸಲ್ಲಿಸಿ ಶುಭಾಶಯ ಕೋರಿದ್ದು ಹೀಗೆ.
ಮುತ್ತಿನ ವಿದಾಯ... ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಗಳ ಪ್ರಚಾರ ಮುಕ್ತಾಯಗೊಂಡಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಮಾ ಅವರು ಡೆಮೊಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ವಿದಾಯದ ಮುತ್ತು ನೀಡಿದ್ದು ಹೀಗೆ.
ಗೋಲ್ಡನ್ ಗರ್ಲ್ಸ್... ಮಂಗಳವಾರ ರಾಂಚಿಯಲ್ಲಿ ನಡೆದ ರಾಂಚಿ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ವೇಳೆ ವಿದ್ಯಾರ್ಥಿನಿಯರು ತಮ್ಮ ಬಂಗಾರದ ಪದಕಗಳನ್ನು ಪ್ರದರ್ಶಿಸಿದ್ದು ಹೀಗೆ.
ಡ್ರಮ್ ಬಾರಿಸಿ ಖುಷಿಪಟ್ಟ ಕುಂಬ್ಳೆ... ಬೆಂಗಳೂರಿನಲ್ಲಿ ಟೀಂ ಇಂಡಿಯಾ ಆಟಗಾರರಿಗಾಗಿ ಡ್ರಮ್ ಸರ್ಕಲ್ ಆಯೋಜಿಸಿದ್ದ ವಿಶಿಷ್ಠ ಕಾರ್ಯಕ್ರಮದಲ್ಲಿ ನಟಿ ಹಾಗೂ ಗಾಯಕಿ ವಸುಂದರಾ ದಾಸ್ ಅವರೊಂದಿಗೆ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಅವರು ಡ್ರಮ್ ಬಾರಿಸಿ ಖುಷಿಪಟ್ಟರು.
ಬೇಗಂ ಜಾನ್... ಮುಂಬೈನಲ್ಲಿ ನಡೆದ ಬೇಗಂ ಜಾನ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರದ ನಟಿ ಡೈಸಿ ಶಾ ಅವರು ಕಾಣಿಸಿಕೊಂಡಿದ್ದು ಹೀಗೆ.
ಹ್ಯಾಪಿ ಬರ್ತಡೇ ಗಣೇಶ... ಗೋಲ್ಡನ್ ಸ್ಟಾರ್ ಗಣೇಶ್ ಅವರು ಶನಿವಾರ ತಮ್ಮ ಪತ್ನಿ ಶಿಲ್ಪಾ, ಇಬ್ಬರು ಮಕ್ಕಳು ಹಾಗೂ ಅಭಿಮಾನಿಗಳೊಂದಿಗೆ ತಮ್ಮ 39ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ತೇಜಸ್ ಗಾಗಿ ಸರ್ವಧರ್ಮ ಪ್ರಾರ್ಥನೆ... ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಭಾರತೀಯ ವಾಯು ಸೇನೆಗೆ ಅಧಿಕೃತವಾಗಿ ಸೇರ್ಪಡೆಯಾದ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಗೆ ವಿಶೇಷ ಪೂಜೆ ಹಾಗೂ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು.
ಜಮ್ಮುವಿನಿಂದ ಇತಿಹಾಸ ಪ್ರಸಿದ್ಧ ಅಮರನಾಥ್ ಯಾತ್ರೆ ಶುಕ್ರವಾರ ಆರಂಭವಾಗಿದ್ದು, ಗಿರಿ ಶೃಂಗದಲ್ಲಿ ಪ್ರಯಾಣ ಆರಂಭಿಸಿದ ಮೊದಲ ತಂಡದ ವಾಹನಗಳು ಕಾಣಿಸಿದ್ದು ಹೀಗೆ.