ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ತಮ್ಮ ಸಣ್ಣ ಅಂಗಡಿಯಲ್ಲಿ ಬೆಂಕಿಯನ್ನು ತಲೆಕೂದಲಿಗೆ ಹಾಕಲು ಜಾಗರೂಕತೆಯ ಕ್ರಮಗಳನ್ನು ಅನುಸರಿಸುತ್ತಾರೆ.
ಗಾಜಾದಲ್ಲಿ ಪದೇ ಪದೇ ವಿದ್ಯುತ್ ಕೈಕೊಡುವುದರಿಂದ ರಮದನ್ ನ ಕೆಲಸಕ್ಕೆ ತೊಂದರೆಯಾಗುತ್ತಿತ್ತು. ಇದಕ್ಕೆ ಉಪಾಯ ಹೂಡಿದ ರಮದನ್ ಬೆಂಕಿಯಿಂದ ತಲೆಗೂದಲನ್ನು ಒಣಗಿಸುವ ಉಪಾಯ ಕಂಡುಹಿಡಿದನು.
ತಲೆಕೂದಲನ್ನು ಕತ್ತರಿಸಿ ಬಾಚಿದ ನಂತರ ವಿಶೇಷ ಲೋಶನ್ ನ್ನು ತಲೆಕೂದಲಿಗೆ ಹಚ್ಚಿ ಮತ್ತು ಚರ್ಮವನ್ನು ರಕ್ಷಿಸಲು ಪೌಡರ್ ನ್ನು ಹಾಕುತ್ತಾನೆ. ನಂತರ ವಾಯುದ್ರವದಿಂದ ಬೆಂಕಿಯನ್ನು ಬಳಸಿಕೊಂಡು ಒದ್ದೆ ಕೂದಲನ್ನು ಒಣಗಿಸುತ್ತಾನೆ.
ಅದ್ವನ್ ಬೆಂಕಿಯನ್ನು ಬಳಸಿಕೊಂಡು ಕೂದಲನ್ನು ಒಣಗಿಸುವ ವಿಧಾನ ಗಾಜಾ ಪಟ್ಟಿಯಾದ್ಯಂತ ಸುದ್ದಿಯಾಗಿದ್ದು ಇದೀಗ ಕೆಲ ಕ್ಷೌರಿಕರು ಅನುಸರಿಸುತ್ತಿದ್ದಾರೆ.
ಉರಿಯುತ್ತಿರುವ ಬೆಂಕಿಯನ್ನು ತಲೆಕೂದಲಿಗೆ ಹಾಕಿ ಒಣಗಿಸಲು ಏಕಾಗ್ರತೆ ಅತಿ ಅಗತ್ಯವಾಗಿದ್ದು ಅನುಭವ ಕೂಡ ಬೇಕು ಎನ್ನುತ್ತಾನೆ.
ಗಾಜಾ ಪಟ್ಟಿಯಲ್ಲಿನ ಸುಮಾರು 2 ದಶಲಕ್ಷ ಜನರಿಗೆ ದಿಗ್ಭಂದನ ವಿಧಿಸಿ ಇದೀಗ 10 ವರ್ಷವಾಗುತ್ತಿದ್ದು, ತಮ್ಮ ಸ್ಥಿತಿಯನ್ನು ಸ್ಥಾಪಿಸಿಕೊಳ್ಳಲು ಅಲ್ಲಿನ ನಿವಾಸಿಗಳು ಬಳಸುತ್ತಿರುವ ಮತ್ತೊಂದು ತಂತ್ರ ಇದಾಗಿದೆ.