ಕೋವಿಡ್-19: ಅತ್ಯಂತ ಬೇಡಿಕೆಯಲ್ಲಿರುವ ರೆಮ್ಡೆಸಿವಿರ್ ಔಷಧಿ ಬಗ್ಗೆ ನೀವು ತಿಳಿಯಬೇಕಾದ 8 ಅಂಶಗಳು...
ದೇಶದಲ್ಲಿ ಕೊರೋನಾ ಆರ್ಭಟಿಸುತ್ತಿದ್ದು, ಇದರ ಬೆನ್ನಲ್ಲೇ ದೇಶದಲ್ಲಿ ಇದ್ದಕ್ಕಿದ್ದಂತೆ ರೆಮ್ಡೆಸಿವಿರ್ ಎಂಬ ಔಷಧದ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ. ಹಾಗಾದರೆ, ಏನಿದು ರೆಮ್ಡೆಸಿವಿರ್, ಕೊರೋನಾ ಚಿಕಿತ್ಸೆಯಲ್ಲಿ ಇದರ ಪಾತ್ರವೇನು? ಇಲ್ಲಿದೆ ಮಾಹಿತಿ...
ಏನಿದು ರೆಮ್ಡೆಸಿವಿರ್...? ರೆಮ್ಡೆಸಿವಿರ್ ಆಂಟಿವೈರಲ್ ಔಷಧಿಯಾಗಿದೆ. 2009ರಲ್ಲಿ ಹೆಪಟೈಸಿಟ್ ಸಿ ಗಾಗೀ ಈ ಔಷಧಿಯನ್ನು ಕಂಡು ಹಿಡಿಯಲಾಗಿತ್ತು. 2014ರಲ್ಲಿ ಇದನ್ನು ಎಬೋಲಾಗೆ ಪರಿಣಾಮಕಾರಿ ಔಷಧಿ ಎಂದು ಹೇಳಲಾಗಿತ್ತು. ಇದೀಗ ಈ ಔಷಧಿಯನ್ನು ಮಧ್ಯ ಪ್ರಾಚ್ಯ ತೀವ್ರ ಉಸಿರಾಟ ರೋಗಲಕ್ಷಣ (ಎಂಇಆರ್‌ಎಸ್) ಮತ್ತು ತೀವ್ರ
ರೆಮ್ಡೆಸಿವಿರ್ ವಿಶೇಷವೇಕೆ? ರೆಮ್ಡೆಸಿವಿರ್ ನ್ನು ಅಮೆರಿಕಾದ ಔಷಧೀಯ ಕಂಪನಿ ಗಿಲ್ಯಾಡ್ ಸೈನ್ಸಸ್ ತಯಾರಿಸಿದ್ದು, ಕೊರೋನಾಗೆ ಮೊದಲ ಔಷಧಿ ಇದಾಗಿದೆ. ಅಕ್ಟೋಬರ್ 2020 ರಲ್ಲಿ ಕೊರೋನವೈರಸ್ ಚಿಕಿತ್ಸೆಗೆ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ಸ್ ಅನುಮತಿ ನೀಡಿತ್ತು.
ರೆಮ್ಡೆಸಿವಿರ್ ಔಷಧಿ ಎಷ್ಟು ಪರಿಣಾಮಕಾರಿ? ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ರೆಮ್ಡೆಸಿವಿರ್ ಕೊರೋನಾ ರೋಗಿಗಳ ಚೇತರಿಕೆಯ ಸಮಯವನ್ನು 15 ದಿನಗಳಿಂದ ಸರಾಸರಿ 10ಕ್ಕೆ ಕಡಿತಗೊಳಿಸಬಹುದು.
ಭಾರತದಲ್ಲಿ ರೆಮ್ಡೆಸಿವಿರ್ ಔಷಧಿ ಬಳಕೆಗೆ ಅನುಮತಿ ನೀಡಿದವರು ಯಾರು? ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗಾಗಿ ಭಾರತದ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ ಕೋವಿಡ್-19ಗೆ ರೆಮ್ಡೆಸಿವಿರ್ ಬಳಕೆಗೆ ಅನುಮೋದನೆ ನೀಡಿತ್ತು.
ಭಾರತದಲ್ಲಿ ರೆಮ್ಡೆಸಿವಿರ್ ತಯಾರಿಸುತ್ತಿರುವವರು ಯಾರು? ಭಾರತದಲ್ಲಿ ಈ ಔಷಧಿಯನ್ನು ಸಿಪ್ಲಾ, ಝೈಡಸ್ ಕ್ಯಾಡಿಲಾ, ಹೆಟೆರೊ, ಮೈಲಾನ್, ಜುಬಿಲೆಂಟ್ ಲೈಫ್ ಸೈನ್ಸಸ್, ಡಾ. ರೆಡ್ಡಿಸ್, ಸನ್ ಫಾರ್ಮಾ ಮುಂತಾದ ಅನೇಕ ಕಂಪನಿಗಳು ಉತ್ಪಾದಿಸುತ್ತಿವೆ.
ಕೊರೋನಾ ವಿರುದ್ಧ ರೆಮ್ಡೆಸಿವಿರ್ ಹೇಗೆ ಹೋರಾಟ ಮಾಡುತ್ತದೆ? ಕೊರೋನಾ ವೈರಸ್ ಆರ್ ಎನ್‌ಎ ಪಾಲಿಮರೇಸ್ ಎಂಬ ಕಿಣ್ವದ ಸಹಾಯದಿಂದ ಮಾನವನ ದೇಹ ಸೇರುತ್ತದೆ. ಇಲ್ಲಿಂದ ಮಾನವನ ದೇಹದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಆದರೆ, ರೆಮ್ಡೆಸಿವಿರ್ ಈ ಕಿಣ್ವವನ್ನು ಪ್ರತಿಬಂಧಿಸುತ್ತದೆ ಮತ್ತು ವೈರಸ್ ಪುನರಾವರ್ತನೆಯಾಗುವುದ
ರೆಮ್ಡೆಸಿವಿರ್ ಔಷಧಿಯನ್ನು ಯಾರಿಗೆ ಬಳಸಬಹುದು? ರೆಮ್ಡೆಸಿವಿರ್ ಔಷಧಿಯನ್ನು ಕೊರೋನಾ ಸೋಂಕಿಗೊಳಗಾಗಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವವರು, ಆ್ಯಕ್ಸಿಜನ್ ಬೆಂಬಲದಲ್ಲಿರುವ ರೋಗಿಗಳಿಗೆ ಬಳಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತ ರೆಮ್ಡೆಸಿವಿರ್ ಅನ್ನು ರಫ್ತು ಮಾಡುತ್ತಿದೆಯೇ? ಕೊರೋನಾ ವಿರುದ್ಧ ಹೋರಾಡಲು ರೆಮ್ಡೆಸಿವಿರ್ ಪ್ರಮುಖ ಔಷಧಿಯಾಗಿದ್ದು, ದೇಶದಲ್ಲಿ ಈಗಾಗಲೇ ಈ ಔಷಧಿಯ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಏಪ್ರಿಲ್ 11 ರಂದು ರೆಮ್ಡೆಸಿವಿರ್ ಔಷಧಿ ರಫ್ತು'ನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.