ಬಿಸ್ಸಾರ್ ಕಾಂಗ್ರೆಸ್ನ ಐದು ಕಾರು ವಶ
ಕ.ಪ್ರ. ವಾರ್ತೆ ಕೊಟ್ಟೂರು ಮಾ. 3
ಸ್ಥಳೀಯ ಪಟ್ಟಣ ಪಂಚಾಯ್ತಿ ಚುನಾವಣಾ ಪ್ರಚಾರಕ್ಕೆ ಭಾನುವಾರ ರೋಡ್ ಶೋಗೆ ಅನುಮತಿ ಪಡೆಯದೇ ಬಳಸುತ್ತಿದ್ದ ಬಿಎಸ್ಸಾರ್ ಕಾಂಗ್ರೆಸ್ಗೆ ಸೇರಿದ ಬಳ್ಳಾರಿಯ 3 ಹಾಗೂ ಕೊಟ್ಟೂರಿನ 2 ಕಾರುಗಳನ್ನು ಚುನಾವಣಾ ನೀತಿ ಸಂಹಿತಿ ಅನುಷ್ಠಾನಾಧಿಕಾರಿ ವಶಪಡಿಸಿಕೊಂಡಿದ್ದಾರೆ.
ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳಲು ಭಾನುವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಪಕ್ಷದ ಅಧ್ಯಕ್ಷ ಬಿ. ಶ್ರೀರಾಮುಲು ಅವರು ಕೊಟ್ಟೂರು ಭೇಟಿಯುದ್ದಕ್ಕೂ ಚುನಾವಣಾ ನೀತಿ ಸಂಹಿತೆ ಅನುಷ್ಠಾನಾಧಿಕಾರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ಕಣ್ಗಾವಲಾಗಿ ಪ್ರತಿ ಹಂತದ ಚಟುವಟಿಕೆಗಳನ್ನು ಪರಾಮರ್ಶಿಸಿದರು. ಕಾಪ್ಟರ್ ಮೂಲಕ ಇಲ್ಲಿನ ತುಂಗಭದ್ರ ದೈಹಿಕ ಶಿಕ್ಷಣ ತರಬೇತಿ ಮಹಾವಿದ್ಯಾಲಯದ ಮೈದಾನದಲ್ಲಿ ಶ್ರೀರಾಮುಲು, ಸಂಸದೆ ಜೆ. ಶಾಂತಾ ಮತ್ತಿತರರು ಬಂದಿಳಿಯುತ್ತಿದ್ದಂತೆ ಅಲ್ಲಾಗಲೇ ಹಾಜರಿದ್ದ ಅಧಿಕಾರಿ ಅನಿರುದ್ಧ ಶ್ರವಣ್ ಸಿಬ್ಬಂದಿ ಜತೆ ವಾಹನಗಳನ್ನು ಪರಿಶೀಲಿಸಿದರು.
ನಂತರ ಅನುಮತಿ ಪಡೆಯದ ಬಳ್ಳಾರಿಯ 3 ಮತ್ತು ಕೊಟ್ಟೂರಿನ 2 ಕಾರುಗಳನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ಕೊಟ್ಟೂರು ಸಿಪಿಐ ಗುರುರಾಜ್ ಮೈಲಾರ ಅವರ ವಶಕ್ಕೆ ಒಪ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

