

ವಿಧಾನಪರಿಷತ್ತು: ಬಿಜೆಪಿ ಪ್ರಣಾಳಿಕೆಯಲ್ಲಿ ಬಿಬಿಎಂಪಿ ಪುನರ್‍ರಚನೆ ಮಾಡುವ ಪ್ರಸ್ತಾಪವಿತ್ತು. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಸುರೇಶ್ ಕುಮಾರ್
ನಗರಾಬಿsವೃದಿಟಛಿ ಸಚಿವರಾಗಿದ್ದಾಗ ಪುನರ್‍ರಚನೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು...
ಮಧ್ಯಾಹ್ನ ನಡೆದ ಚರ್ಚೆಯಲ್ಲಿ ಹೀಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅವಾಕ್ಕಾದ ಬಿಜೆಪಿ ಸದಸ್ಯರು ಒಕ್ಕೊರಲಿನಿಂದ ಮಾತನಾಡಲು ಬಿಡದೆ
ವಿರೋಧ ವ್ಯಕ್ತಪಡಿಸಿದರು. ಇದುವರೆಗೆ ಬಿಬಿಎಂಪಿ ಒಡೆಯುವ ಪ್ರಯತ್ನವನ್ನು ಸರ್ಕಾರವೇ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದ್ದ ಪ್ರತಿಪಕ್ಷಗಳ ಸದಸ್ಯರು,
ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಕೆಲಕಾಲ ಗೊಂದಲಕ್ಕೊಳಗಾದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ವೇಳೆ, ನಗರದಲ್ಲಿ ವಿಚಾರ ಸಂಕಿರಣವೊಂದನ್ನು
ಏರ್ಪಡಿಸಲಾಗಿತ್ತು. ಇಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್ ಹಾಗೂ ಶೆಟ್ಟರ್ ಬಿಬಿಎಂಪಿ ಪುನರ್‍ರಚಿ ಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಇದು ಎಲ್ಲ
ಮಾಧ್ಯಮಗಳಲ್ಲೂ ವರದಿಯಾಗಿದ್ದು, ಕಾಲ ಕಳೆದಂತೆ ಬಿಜೆಪಿಯವರು ಬಣ್ಣ ಬದಲಿಸಬಾರದು. ಕಾಂಗ್ರೆಸ್ ಸರ್ಕಾರವೇ ವಿಭಜನೆ ಪ್ರಸ್ತಾಪ ಮಾಡುತ್ತಿದೆ ಎಂದು
ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದರೆ ಈ ಹಿಂದೆಯೇ ಬಿಜೆಪಿ ವಿಭಜನೆ ಬಗ್ಗೆ ಪ್ರಸ್ತಾಪಿಸಿದೆ. ನಗರವನ್ನು ಎರಡು ಭಾಗ ಮಾಡುತ್ತೇವೆ ಎಂದು ಮೊದಲಿಗೆ ಹೇಳಿದ್ದೇ ಬಿಜೆಪಿ
ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ರಿಕೆಗಳ ವರದಿಗಳನ್ನು ಪ್ರದರ್ಶಿಸಿದರು.
ಪುನರ್ ರಚನೆ ಎಂದರೆ ವಿಭಜನೆಯಲ್ಲ: ವಿ.ಸೋಮಣ್ಣ ಮಾತನಾಡಿ, `ಪುನರ್‍ರಚನೆ ಎಂದರೆ ವಿಭಜನೆಯಲ್ಲ. ಮೂರು ಮೇಯರ್‍ಗಳನ್ನು ನೇಮಿಸಿ ಬಿಬಿಎಂಪಿ
ಒಡೆಯಲಾಗುವುದು ಎಂದು ಬಿಜೆಪಿ ಎಂದಿಗೂ ಹೇಳಿಲ್ಲ. ಆಡಳಿತ ದೃಷ್ಟಿಯಿಂದ ಪುನರ್ ರಚನೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಇದನ್ನೇ ಸಚಿವರು ಹೇಳಿದ್ದರು' ಎಂದು ಪ್ರತಿಪಾದಿಸಿದರು. ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, `ಮುಖ್ಯಮಂತ್ರಿಗಳ ಹೇಳಿಕೆಗೂ ಆದೇಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮುಖ್ಯಮಂತ್ರಿಗಳು ಈ ಹಿಂದೆ ಅಗ್ಗದ ಸಾರಾಯಿ ನೀಡುತ್ತೇನೆ ಎಂದು ಹೇಳಿದ್ದು, ಪತ್ರಿಕೆಗಳಲ್ಲಿ ವರದಿಯಾಗಿದೆ. ಇದನ್ನೂ ಆದೇಶ ಎಂದು ಪರಿಗಣಿಸಬೇಕೇ?' ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, `ಅಗ್ಗದ ಸಾರಾಯಿ ಬಗ್ಗೆ ನಾನು ಮಾತನಾಡಲೇ ಇಲ್ಲ. ಈ ವರದಿಗಳೆಲ್ಲವೂ
ಸುಳ್ಳು' ಎಂದರು. ಹಾಗಾದರೆ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಹೇಳಿಕೆಯೂ ಸುಳ್ಳು ಎಂದು ಈಶ್ವರಪ್ಪ ಪ್ರತ್ಯುತ್ತರ ನೀಡಿದರು. ಆದರೆ ಸದಸ್ಯರ ಗದ್ದಲ, ಪರಸ್ಪರ ಆರೋಪಗಳೊಂದಿಗೆ ಕೆಲಕಾಲ ಮುಂದುವರಿಯಿತು.