ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಗುರುವಾರ ಜೆಡಿಎಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಾಂಗ್ ಕಾಂಗ್ ಮಾದರಿಯಲ್ಲಿ...
ಎಚ್.ಡಿ.ಕುಮಾರಸ್ವಾಮಿಯಿಂದ ಪ್ರಣಾಳಿಕೆ ಬಿಡುಗಡೆ
ಎಚ್.ಡಿ.ಕುಮಾರಸ್ವಾಮಿಯಿಂದ ಪ್ರಣಾಳಿಕೆ ಬಿಡುಗಡೆ
Updated on: 

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಗುರುವಾರ ಜೆಡಿಎಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಾಂಕಾಂಗ್ ಮಾದರಿಯಲ್ಲಿ 5 ಲಕ್ಷ ಮನೆ ನಿರ್ಮಾಣ ಸೇರಿದಂತೆ ಮತದಾರರಿಗೆ ಹಲವು ಭರವಸೆಗಳನ್ನು ನೀಡಿದೆ.

ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬೆಂಗಳೂರು ನಗರದ ಅಭಿವೃದ್ಧಿಗಾಗಿ ನಮ್ಮ ಪಕ್ಷ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.

ನಮ್ಮ ಪಕ್ಷದ ಕನಸುಗಳು, ಭವಿಷ್ಯದಲ್ಲಿ ಮಾಡಬೇಕಾದ ಯೋಜನೆಗಳು ಹಾಗೂ ಈ ಹಿಂದೆ ಬೆಂಗಳೂರು ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಅಲ್ಲದೆ ಈ ಹಿಂದೆ ಕಾಂಗ್ರಸ್ ಮತ್ತು ಬಿಜೆಪಿ ಪಕ್ಷಗಳು ಆಡಳಿತ ನಡೆಸಿದ್ದು, ಯಾವ ಕಾರಣದಿಂದ ಅವರ ಆಡಳಿತ ಸುಗಮವಾಗಿಲ್ಲ ಹಾಗೂ ಯಾವ ರೀತಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ ಎಂದರು.

ಜೆಡಿಎಸ್ ಭರವಸೆಗಳು

  • ಹಾಂಕಾಂಗ್ ಮಾದರಿಯಲ್ಲಿ 5 ಲಕ್ಷ ಮನೆ ನಿರ್ಮಾಣ
  • ತ್ಯಾಜ್ಯ ನಿರ್ವಹಣೆ ಪ್ರಾಧಿಕಾರ ರಚನೆ
  • ರಾಜಧಾನಿ ಬೆಂಗಳೂರಿನಲ್ಲಿ ರೈತರ ಸಂತೆ ತೆರೆಯುವುದು
  • ತಮಿಳುನಾಡು ಮಾದರಿಯಲ್ಲಿ ಅನ್ನಪೂರ್ಣ ಕಿಚನ್
  • ಬೆಂಗಳೂರು ನಗರದಲ್ಲಿರುವ ಮನೆಗಳಿಗೆ ತೆರಿಗೆ ವಿನಾಯಿತಿ, ಇದು 600 ಚ.ಮೀ.ಗಿಂತಾ ಕಡಿಮೆ ವಿಸ್ತೀರ್ಣದ ಮನೆಗೆ ಅನ್ವಯ
  • ನಗರದ ನಿರಾಶ್ರಿತರಿಗೆ ಆಶ್ರಯ ತಾಣ ನಿರ್ಮಾಣ
  • ಬಿಬಿಎಂಪಿ ವ್ಯಾಪ್ತಿ ಶಾಲೆಗಳ ಉನ್ನತೀಕರಣ ಮಾಡುವುದು
  • ಸರ್ವರಿಗೂ ಚಿಕಿತ್ಸಾ ಸೌಲಭ್ಯ ದೊರೆಯುವಂತ ವ್ಯವಸ್ಥೆ, 24 ಗಂಟೆ ತೆರೆದಿರುವ ಔಷಧಿ ಮಳಿಗೆಗಳ ಸ್ಥಾಪನೆ
  • ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ರಚನೆ
  • ಕೆಂಪೇಗೌಡರ ಜಯಂತಿಯನ್ನು 9ದಿನ ಆಚರಿಸುವುದು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com