ಬಿಬಿಎಂಪಿ: ಬಿಜೆಪಿಗೆ ಐವರು ಪಕ್ಷೇತರರ ಬೆಂಬಲ

ಬಿಬಿಎಂಪಿಯಲ್ಲಿ ಸರಳ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಗೆ ಬಿಜೆಪಿಗೆ ಆತಂಕವಿಲ್ಲ. ಕಾರಣ, ಜನಾದೇಶ ಪ್ರಕಟವಾಗುತ್ತಿದ್ದಂತೆಯೇ...
ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದ ಸಂಭ್ರದಲ್ಲಿರುವ ಬಿಜೆಪಿ ಮುಖಂಡರು
ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದ ಸಂಭ್ರದಲ್ಲಿರುವ ಬಿಜೆಪಿ ಮುಖಂಡರು
Updated on

ಬೆಂಗಳೂರು: ಬಿಬಿಎಂಪಿಯಲ್ಲಿ ಸರಳ ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಗೆ ಬಿಜೆಪಿಗೆ ಆತಂಕವಿಲ್ಲ. ಕಾರಣ, ಜನಾದೇಶ ಪ್ರಕಟವಾಗುತ್ತಿದ್ದಂತೆಯೇ ಐವರು ಪಕ್ಷೇತರರು ಬಿಜೆಪಿಯನ್ನು ಸಂಪರ್ಕಿಸಿ ಬೆಂಬಲ ಸೂಚಿಸಿದ್ದಾರೆ.

100ರ ಗಡಿ ಮುಟ್ಟುತ್ತಿದ್ದಂತೆಯೇ ಬಿಜೆಪಿಯಲ್ಲಿ ಒಂದು ಕಡೆ ನಿರಾಳತೆ ಇದ್ದ ಸರಳ ಬಹುಮತಕ್ಕೆ ಬಿಜೆಪಿಗೆ 104 ಸದಸ್ಯ ಬಲ ಬೇಕಿದ್ದರಿಂದ ಸಣ್ಣದೊಂದು ಅಂಜಿಕೆ ಇತ್ತು. ಆದರೆ, ಈ ಅಂಜಿಕೆಯನ್ನು ಪಕ್ಷೇತರರು ದೂರ ಮಾಡಿದ್ದಾರೆ.

ಒಂದು ವೇಳೆ ಇನ್ನಷ್ಟು ಕಡಿಮೆ ಸಂಖ್ಯೆ ಬಂದಿದ್ದರೆ ಜೆಡಿಎಸ್ ಮೊರೆ ಹೋಗಲು ಮತ್ತು ಜೆಡಿಎಸ್ ಸಹ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಲು ಆಸಕ್ತಿ ತೋರಿಸಿತ್ತು. ಬಿಜೆಪಿಗೆ ಪಕ್ಷೇತರರು ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಪಕ್ಷದ ಮಹಾನಗರ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಅವರು ಖಚಿತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com